ಮೂರನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ‘ಜನಧ್ವನಿ ಪಾದಯಾತ್ರೆ’: ಸಾವಿರಾರು ಕಾರ್ಯಕರ್ತರು ಭಾಗಿ

ಉಡುಪಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ‘ಜನಧ್ವನಿ ಪಾದಯಾತ್ರೆ’ ಯು ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಉದ್ಯಾವರ ಬಲಾಯಿಪಾದೆ ಹೊರಟು ಸಂಜೆ ಬ್ರಹ್ಮಾವರಕ್ಕೆ ತಲುಪಲಿದೆ.

ಕಲ್ಯಾಣಪುರ ಪೇಟೆಯಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ನಡೆಸಲಾಯಿತು. ಮುಖ್ಯ ಭಾಷಣಕಾರರಾಗಿ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಭಾಗವಹಿಸಿದ್ದರು. ಉದ್ಯವಾರದ ಬಲಾಯಿಪಾದೆಯಿಂದ ಸಾಗಿಬಂದ ಪಾದೆಯಾತ್ರೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿˌ ಎಂ.ಎ. ಗಪೂರ್, ದಿನೇಶ್ ಪುತ್ರನ್, ಕುಶಲಾ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ನಾಗೇಶ್ ಕುಮಾರ್ ಉದ್ಯಾವರ, ಅಣ್ಣಯ್ಯ ಸೇರಿಗಾರ್.

ಬಿ. ನರಸಿಂಹಮೂರ್ತಿ, ಸತೀಶ್ ಅಮೀನ್ ಪಡುಕರೆ, ಜನಾರ್ದನ್ ಭಂಡಾರ್ಕರ್, ರಮೇಶ್ ಕಾಂಚನ್, ಹರೀಶ್ ಕಿಣಿ ಅಲೆವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಡಾ. ಸುನೀತಾ ಶೆಟ್ಟಿ, ಯತೀಶ್ ಕರ್ಕೆರ, ಪ್ರಖ್ಯಾತ ಶೆಟ್ಟಿ, ಸೌರಭ್ ಬಲ್ಲಾಳ್, ದೀಪಕ್ ಕೋಟ್ಯಾನ್, ರೋಶನಿ ಒಲಿವೆರಾ, ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ ಪಂಗಾಳ, ಶಬ್ಬೀರ್ ಅಹ್ಮದ್, ಇಸ್ಮಾಯಿಲ್ ಆತ್ರಾಡಿ, ಮುರಲಿ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ದಿನಕರ್ ಹೇರೂರು ಹಾಗೂ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.