ಚುನಾವಣೆ ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ನಿಂದ ಮೃತ್ಯು

ರಾಮನಗರ: ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಮತ ಎಣಿಕೆಗೆ ಒಂದು ದಿನ ಬಾಕಿ ಇರುವಾಗಲೇ ಕೋವಿಡ್ ಸೋಂಕಿನಿಂದ ನಿಧನ ಹೊಂದಿದ್ದಾರೆ.

ರಾಮನಗರ ನಗರಸಭೆ ಚುನಾವಣೆಯಲ್ಲಿ 4ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೀಲಾ ಗೋವಿಂದರಾಜು (42) ಎಂಬವರು ಮೃತಪಟ್ಟಿದ್ದಾರೆ.

ಇವರು ವಾರದ ಹಿಂದೆ ಚುನಾವಣೆ ಪ್ರಚಾರದ ವೇಳೆಯೇ ಅವರಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಿಗ್ಗೆ ಮೃತಪಟ್ಟರು.

ಇದೇ ತಿಂಗಳ 27ರಂದು ರಾಮನಗರ ನಗರಸಭೆ ಚುನಾವಣೆ ನಡೆದಿದ್ದು, ನಾಳೆ (ಏ.30) ಮತ ಎಣಿಕೆ ನಡೆಯಲಿದೆ.