ಜಗದ್ಗುರು ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮ

ಉಡುಪಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ, ಪಡುಕುತ್ಯಾರು ಇದರ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023 ಅನ್ನು ಮೇ 6 ರಿಂದ 14 ರ ವರೆಗೆ ಶ್ರೀ ಸರಸ್ವತೀ ಸತ್ಸಂಗ ಮುಂದಿರ ಪಡುಕುತ್ಯಾರು ಇಲ್ಲಿ ಆಯೋಜಿಸಲಾಗಿದೆ. ಶಿಬಿರ ಉದ್ಘಾಟನೆಯು ಮೇ 7 ರಂದು ಜರುಗಿದ್ದು,ಸಮಾರೋಪವು ಮೇ 14 ರಂದು ಜಗದ್ಗುರುಗಳ ಪಟ್ಟಾಭಿಷೇಕ ವರ್ಧಂತಿ ಸಮಾರಂಭದೊಂದಿಗೆ ಸಂಪನ್ನವಾಗಲಿದೆ. ವಸಂತ ವೇದ […]

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಚುನಾವಣಾ ಫಲಿತಾಂಶ ಹೊರಗೆ ಬಿದ್ದಿದ್ದು, ಬಿಜೆಪಿಯು ಸೋಲುನ್ನು ಅನುಭವಿಸಿದೆ. ಈ ಹಿನ್ನೆಲೆ ಇಂದು ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಭಾವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಬ್ಬರಿಸಿದ ಬಿಜೆಪಿ: ಐದು ಕ್ಷೇತ್ರದಲ್ಲಿ ಅರಳಿದ ಕಮಲ..

ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ- 2023 ಕ್ಕೆ ಸಂಬಂಧಿಸಿದಂತೆ ಇಂದು ನಡೆದ ಮತ ಎಣಿಕೆಯಲ್ಲಿ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ಜೆ.ಪಿ ಪಕ್ಷವು ಗೆಲುವು ಸಾಧಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 16,153 ಮತಗಳ ಅಂತರದಿAದ ಜಯಗಳಿಸಿರುತ್ತಾರೆ. ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದಿರುತ್ತಾರೆ. ಉಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841, ಆಮ್ ಆದ್ಮಿ ಪಕ್ಷದ […]

ನಾವು ಕರ್ನಾಟಕದಲ್ಲಿ ದ್ವೇಷದಿಂದ ಹೋರಾಡಿಲ್ಲ, ಹೃದಯದಿಂದ ಹೋರಾಡಿದ್ದೇವೆ: ರಾಹುಲ್ ಗಾಂಧಿ

ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಮುನ್ನಡೆ ಸಾಧಿಸಿ, ಹಲವು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರುತ್ತಿದ್ದಂತೆ ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಮೊದಲಿಗೆ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ನಾವು ಕರ್ನಾಟಕದಲ್ಲಿ ದ್ವೇಷದಿಂದ ಹೋರಾಡಿಲ್ಲ, ಹೃದಯದಿಂದ ಹೋರಾಡಿದ್ದೇವೆ ಎಂದಿದ್ದಾರೆ. ದ್ವೇಷದ ಮುಂದೆ ಪ್ರೀತಿ ಗೆಲ್ಲುತ್ತದೆ, ಗೆದ್ದಿದೆ. ಈ ದೇಶದವರಿಗೆ ಗೊತ್ತು ಪ್ರೀತಿ ಇಷ್ಟ. ನಾವು ಬಡವರ ಜತೆ ನಿಂತಿದ್ದೆವು. ಇದು ಎಲ್ಲರ ಗೆಲುವು. ಇದು ಕರ್ನಾಟಕದ ಜನರ ಗೆಲುವು. ನಾವು 5 […]

ಇಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ

ಬಂಗಾಳಕೊಲ್ಲಿಯಲ್ಲಿ ಮೋಚ ಚಂಡಮಾರುತವು ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಭಾನುವಾರ ಮೇ 14ರಂದು ಮೋರ್ಚಾ ಚಂಡಮಾರುತ ಬಾಂಗ್ಲಾದೇಶ, ಮಯನ್ಮಾರ್ ಗಡಿ ಭಾಗದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಚಂಡಮಾರುತವು ಪಶ್ಚಿಮ ಬಂಗಾಳ, ಒಡಿಶಾ, ಮಯನ್ಮಾರ್ ನ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಕಾರಣವಾಗಲಿದೆ. ಭಾನುವಾರದವರೆಗೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರತಿ ಗಂಟೆಗೆ 175km ವೇಗದಲ್ಲಿ ಗಾಳಿ ಬೀಸಲಿದ್ದು, ಶುಕ್ರವಾರವೇ ಬಾಂಗ್ಲಾ ಸರ್ಕಾರ ಸುಮಾರು 5 ಲಕ್ಷ ಜನರನ್ನು ಸ್ಥಳಾಂತರ ಗೊಳಿಸುವ […]