ಕೃಷ್ಣಮಠಕ್ಕೆ ಭೇಟಿ ನೀಡಿದ ಭಾರತೀಯ ನೌಕಾದಳದ ಕಮಾಂಡಿಂಗ್ ಆಫೀಸರ್

ಉಡುಪಿ: ಭಾರತ ನೌಕಾದಳದ ಕರ್ನಾಟಕ ವಿಭಾಗದ ಕಮಾಂಡಿಂಗ್ ಫ್ಲ್ಯಾಗ್ ಆಫಿಸರ್ ರಾಮಕೃಷ್ಣನ್ ಇವರು ಕುಟುಂಬ ಸಮೇತರಾಗಿ ಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.