ಕನ್ನಡದ ಕೋಟ್ಯಾಧಿಪತಿಯಲ್ಲಿ ಪವರ್ ಸ್ಟಾರ್ ನ್ನು ಬೆರಗುಗೊಳಿಸಿದ ಕರಾವಳಿಯ power boy ವೈಭವ ಶೆಟ್ಟಿ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯ  ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಷೋ ದೇಶಾದ್ಯಂತ ಮನೆಮಾತಾಗಿದೆ. ಮನೋರಂಜನೆಯ ಜತೆ ಜತೆಗೆ ಮನೋವಿಕಾಸ, ಸಾಮಾನ್ಯಜ್ಞಾನ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಪ್ರಸಿದ್ಧಿಪಡೆದಿದೆ‌. ಕನ್ನಡ ಕೋಟ್ಯಾಧಿಪತಿಯಲ್ಲಿ  ಭಾಗವಹಿಸಿ ಪವರ್ ಸ್ಟಾರ್  ಎದುರು ಪವರ್ ಪುಲ್ ಹಾಟ್ ಸೀಟ್ ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಸಾವಿರ- ಹತ್ತುಸಾವಿರ, ಲಕ್ಷ ಹೀಗೆ ಕಾಂಚಾನವನ್ನು ಜೇಬಿಗಿಳಿಸಿಕೊಳ್ಳಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ.
ಆದರೆ ಈ ಅವಕಾಶ ಲಕ್ಷದಲ್ಲಿ ಒಬ್ಬರಿಗೆ ಸಿಗುವಂತದ್ದು. ಆದರೆ  ಕಾರ್ಯಕ್ರಮದ ಪ್ರಸ್ತುತ ಅವತರಣಿಕೆಯಲ್ಲಿ ಕುಂದಾಪುರ ಭಾಗದ ಬಹಳಷ್ಟು ಮಂದಿ ಭಾಗವಹಿಸಿ ಕುಂದಗನ್ನಡವನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಇದೀಗ ಷೋಗೆ  ಎಂಟ್ರಿ ಕೊಡುತ್ತಿರುವ  ಮತ್ತೊಂದು ಕುಂದಗನ್ನಡದ ಪ್ರತಿಭೆ, ಬಿದ್ಕಲ್ಕಟ್ಟೆ ಸಮೀಪದ ಜನ್ನಾಡಿ ನಿವಾಸಿ, ಮೆಸ್ಕಾಂ ಇಲಾಖೆಯಲ್ಲಿ  ಪ್ರಸ್ತುತ  ಕೋಟ ಹೋಬಳಿ ಸಾಹೇಬ್ರಕಟ್ಟೆ ಶಾಖಾಧಿಕಾರಿ ಕೆಲಸ ನಿರ್ವಹಿಸುತ್ತಿರುವ ವೈಭವ ಶೆಟ್ಟಿ.  ಇಲಾಖೆಯಲ್ಲಿ  ಉತ್ತಮ ಕಾರ್ಯನಿರ್ವಹಿಸಿ, ಉತ್ತಮ ಶಾಖೆ, ಉತ್ತಮ ಶಾಖಾಧಿಕಾರಿ ಎನ್ನುವ ಪ್ರಶಂಸೆಗೆ  ಪಾತ್ರರಾಗಿರುವ ಶೆಟ್ಟಿಯವರು ತನ್ನು ಬುದ್ದಿವಂತಿಕೆ ಮೂಲಕ ಕೋಟ್ಯಾಧಿಪತಿಗೆ ಪ್ರವೇಶಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತರಿಸಿದೆ.
ಇವರು ಭಾಗವಹಿಸಿದ ಷೋನ ಪ್ರಸಾರ  ಇಂದು ಮತ್ತು ನಾಳೆ ( ಜುಲೈ 13 , 14ರಂದು ರಾತ್ರಿ 8ಕ್ಕೆ ನಡೆಯಲಿದೆ.ಕಾರ್ಯಕ್ರಮದ  ಪ್ರೋಮೊ ಈಗಾಗಲೇ  ಬಿಡುಗಡೆಗೊಂಡಿದ್ದು ಸಾಕಷ್ಟು ನಿರೀಕ್ಷೆ ಕುತೂಹಲವನ್ನು ಹುಟ್ಟುಹಾಕಿದೆ. ಜತೆಜತೆಗೆ ಪುನೀತ್ ರಾಜ್ ಕುಮಾರ್ ಅವರು ಇವರಿಗೆ ಬಹಳಷ್ಟು ಚೆನ್ನಾಗಿ ಆಡ್ತಿದ್ದೀರಿ, ವೆರಿವೆಲ್ ಎನ್ನುವ ಪ್ರಶಂಸೆ ನೀಡಿದ್ದು ವೈಭವ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..
ಅಂದಹಾಗೆ ತಾನು ಈ ಷೋ ನಲ್ಲಿ ಭಾಗವಹಿಸುವಂತೆ ಸಹಕಾರ ನೀಡಿದ್ದು ಹಾಗೂ ಆಟಕ್ಕೆ ಅಗತ್ಯವಿರುವ ಸಾಮಾನ್ಯ ಜ್ಞಾನದ ಮಾಹಿತಿಗಳನ್ನು ನೀಡಿದ್ದು ಇವರ  ಪತ್ನಿ ಮೆಸ್ಕಾಂನಲ್ಲಿ ಎ.ಇ.ಯಾಗಿರುವ ನಿಶಾ ವಿ. ಶೆಟ್ಟಿಯವರು ಎನ್ನುವುದಾಗಿ ವೈಭವ ಶೆಟ್ಟಿಯವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.   ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎನ್ನುವ ಪ್ರಶಂಸೆಗೆ ಪಾತ್ರವಾಗಿರುವ ಶೆಟ್ಟಿಯವರು ಎಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಎಷ್ಟು ಹಣ ಗೆಲ್ಲುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.
ರಾಜೇಶ್ ಜಿ ಅಚ್ಲ್ಯಾಡಿ