ಬಿಗ್ ಬಾಸ್ ಒಟಿಟಿ ಕನ್ನಡ ವೀಕ್ಷಕರ ಹಾರೈಕೆಯಂತೆ ರೂಪೇಶ್ ಶೆಟ್ಟಿ 5 ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ಬಿಗ್ ಬಾಸ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿನಲ್ಲಿ ರೂಪೇಶ್ ಶೆಟ್ಟಿ ಅತ್ಯಧಿಕ ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ರೂಪೇಶ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಮತ್ತು ತಮ್ಮ ಸಂದೇಶಗಳೊಂದಿಗೆ ಅವರನ್ನು ಅಭಿನಂದಿಸಿದ್ದಾರೆ.
ರೂಪೇಶ್ ಅವರು ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಮನೆಗೆ ಪ್ರವೇಶಿಸಿದ ದಿನದಿಂದಲೂ ಕಾರ್ಯಕ್ರಮವನ್ನು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು. ಬಿಗ್ ಬಾಸ್ ಒಟಿಟಿ ಕನ್ನಡ ವೇದಿಕೆಯನ್ನು ಪ್ರವೇಶಿಸಿದ ಟಾಪ್ ನಾಲ್ವರು ಸ್ಪರ್ಧಿಗಳೆಂದರೆ ರೂಪೇಶ್ ಶೆಟ್ಟಿ, ಆರ್ಯವರ್ಧನ್, ರಾಕೇಶ್ ಅಡಿಗ ಮತ್ತು ಸಾನಿಯಾ ಅಯ್ಯರ್. ಇವರನ್ನೆಲ್ಲಾ ಹಿಂದಿಕ್ಕೆ ಕರಾವಳಿಯ ಹುಡುಗ ರೂಪೇಶ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಚಿತ್ರ ಕೃಪೆ: ಟ್ವಿಟರ್