ಬಾಗಿಲು ಮುಚ್ಚಿದ ಸಹಕಾರಿ ಬ್ಯಾಂಕ್

ಮುಂಬೈ: ಅಗತ್ಯ ಪ್ರಮಾಣದ ಬಂಡವಾಳ ಇಲ್ಲದ ಕಾರಣ ‘ದಿ ಕರಾಡ್ ಜನತಾ ಸಹಕಾರಿ ಬ್ಯಾಂಕ್‌ ‘ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ರದ್ದು ಮಾಡಿದೆ.

ಪರವಾನಗಿ ರದ್ದಾಗಿರುವ ಕಾರಣ ಈ ಬ್ಯಾಂಕ್‌ ಇನ್ನು ಮುಂದೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ಈ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದ ಶೇ. 99ಕ್ಕಿಂತ ಹೆಚ್ಚಿನವರಿಗೆ ಪೂರ್ಣ ಮೊತ್ತವು ವಾಪಸ್ ಸಿಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ಈ ಬ್ಯಾಂಕ್‌ ಅಸ್ತಿತ್ವದಲ್ಲಿ ಇರುವುದು ಠೇವಣಿದಾರರ ಹಿತಕ್ಕೆ ಮಾರಕ. ಇದಕ್ಕೆ ಬ್ಯಾಂಕಿಂಗ್ ವಹಿವಾಟು ನಡೆಸಲು ಅವಕಾಶ ಕೊಟ್ಟರೆ ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಆರ್‌ಬಿಐ ಹೇಳಿದೆ.