ಮತ್ತೆ ಸಿಎನ್‌ಜಿ ದರ ಏರಿಕೆ: ಪ್ರತಿ ಕೆಜಿಗೆ ₹2 ಹೆಚ್ಚಳ

ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ಬಳಿಕ ಇದೀಗ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರವೂ ಮತ್ತೆ ಏರಿಕೆಯಾಗಿದೆ. ಸರ್ಕಾರಿ ಅನಿಲ ವಿತರಕ ಸಂಸ್ಥೆಯಾದ Mahanagar Gas Limited (ಎಂಜಿಎಲ್) ಮುಂಬೈನಲ್ಲಿ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಿರುವುದಾಗಿ ಘೋಷಿಸಿದೆ.ಇದರ ಪರಿಣಾಮ ಎಲ್ಲಾ ರಾಜ್ಯಗಳಿಗೂ ತಟ್ಟಲಿದೆ.

ಪರಿಷ್ಕೃತ ದರದಂತೆ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ ₹86ಕ್ಕೆ ಏರಿಕೆಯಾಗಿದೆ. ಜೊತೆಗೆ ಗೃಹ ಬಳಕೆಯ ಪೈಪ್ ನೈಸರ್ಗಿಕ ಅನಿಲ (ಪಿಎನ್‌ಜಿ) ದರವನ್ನು ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (SCM) 50 ಪೈಸೆ ಹೆಚ್ಚಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಒಂದೇ ತಿಂಗಳಲ್ಲಿ ಎರಡನೇ ಬಾರಿ ಏರಿಕೆ

ಮೇ ತಿಂಗಳಲ್ಲೇ ಮುಂಬೈನಲ್ಲಿ ಇದು ಎರಡನೇ ಬಾರಿಗೆ ಸಿಎನ್‌ಜಿ ದರ ಏರಿಕೆಯಾಗಿದೆ. ಈ ಹಿಂದೆ ಮೇ 14ರಂದು ಕೂಡ ಪ್ರತಿ ಕೆಜಿಗೆ ₹2 ಹೆಚ್ಚಳ ಮಾಡಲಾಗಿತ್ತು. ಅಲ್ಲದೆ ಮೇ 26ರಂದು Delhiಯಲ್ಲೂ ಸಿಎನ್‌ಜಿ ದರವನ್ನು ₹2 ಹೆಚ್ಚಿಸಲಾಗಿತ್ತು.

ಪ್ರಸ್ತುತ ಪರಿಷ್ಕೃತ ದರವು ಮುಂಬೈ, Thane, Navi Mumbai ಹಾಗೂ ಮುಂಬೈ ಮಹಾನಗರ ಪ್ರದೇಶದ ಇತರೆ ಭಾಗಗಳಿಗೆ ಅನ್ವಯವಾಗಲಿದೆ.

ಚಾಲಕರಿಗೆ ಹೆಚ್ಚುವರಿ ಹೊರೆ

ಸಿಎನ್‌ಜಿ ದರ ಏರಿಕೆಯಿಂದ ಆಟೋ ರಿಕ್ಷಾ, ಟ್ಯಾಕ್ಸಿ, ಶಾಲಾ ವ್ಯಾನ್ ಹಾಗೂ ಖಾಸಗಿ ವಾಹನಗಳ ಚಾಲಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಪ್ರಯಾಣಿಕ ಮತ್ತು ಸರಕು ಸಾಗಣೆ ಸೇವೆಗಳು ಹೆಚ್ಚಾಗಿ ಸಿಎನ್‌ಜಿಯನ್ನೇ ಅವಲಂಬಿಸಿರುವುದರಿಂದ, ಮುಂದಿನ ದಿನಗಳಲ್ಲಿ ಸಾರಿಗೆ ದರಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಚಾಲಕರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಎಂಜಿಎಲ್ ಸಂಸ್ಥೆಯು ಮಹಾರಾಷ್ಟ್ರದ ಹಲವು ನಗರಗಳ ಜೊತೆಗೆ ಚಿತ್ರದುರ್ಗ, Chitradurga ಮತ್ತು ದಾವಣಗೆರೆ Davanagere ಸೇರಿದಂತೆ ವಿವಿಧ ಪ್ರದೇಶಗಳಿಗೆ ಅನಿಲ ಪೂರೈಕೆ ಮಾಡುತ್ತಿದೆ.