ಮನೆ ನಿರ್ಮಾಣಕ್ಕೆ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಪ.ಜಾತಿ ಮತ್ತು ಪ.ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಬೆಂಗಳೂರು ಇವರ ವತಿಯಿಂದ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಕಲ್ಯಾಣಕ್ಕಾಗಿ ಸ್ವಂತ ನಿವೇಶನ ಹೊಂದಿರುವ ಪ.ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣಕ್ಕಾಗಿ ವಸತಿ ಯೋಜನೆಯಡಿ 2 ಲಕ್ಷ ರೂ. ಸಹಾಯಧನ ಮಂಜೂರು ಮಾಡಲು ಅರ್ಹ ಫಲಾನುಭವಿಗಳಿಂದ ನಿಗದಿತ ನಮೂನೆಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ನಿವೇಶನ ಹೊಂದಿರುವ ಬಗ್ಗೆ ಹಕ್ಕುಪತ್ರ / ಪೂರಕ ದಾಖಲಾತಿ ಪ್ರತಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಮತ್ತು […]
ಟಯರ್ ಸ್ಫೋಟಗೊಂಡು ಫುಟ್ ಬಾತ್ ಮೇಲೇರಿದ ಮೀನು ಸಾಗಾಟದ ವಾಹನ- ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೀನುಗಳು!

ಉಡುಪಿ: ಮೀನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನದ ಟಯರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್‌ಪಾತ್ ಮೇಲೆ ಏರಿದ ಘಟನೆ ಹಿರಿಯಡಕ ಪೇಟೆ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿತು. ವಾಹನ ಮಲ್ಪೆಯಿಂದ ಸಾಗರದ ಕಡೆಗೆ ಸಾಗುತ್ತಿತ್ತು. ಹಿರಿಯಡಕ ಸಮೀಪಿಸುತ್ತಿದ್ದಂತೆ ಈ ಅವಘಡ ನಡೆದಿದೆ. ಅಪಘಾತದ ವೇಳೆ ವಾಹನದಲ್ಲಿದ್ದ ಮೀನಿನ ಬಾಕ್ಸ್‌ಗಳು ರಸ್ತೆಗೆ ಬಿದ್ದಿದ್ದು, ಮೀನುಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ವಾಹನ ಚಾಲಕ ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯರ ಸಹಕಾರದಿಂದ ವಾಹನವನ್ನು […]
ಧಾರ್ಮಿಕ ಕಾರ್ಯಕ್ರಮಗಳು ಸಮಾಜ ಸುಧಾರಣೆಗೆ ಸಹಕಾರಿಯಾಗಲಿ- ಪ್ರಸಾದ್ ರಾಜ್ ಕಾಂಚನ್

ಉಡುಪಿ: ಕೊಡವೂರು ಶ್ರೀ ಮಹತೋಭಾರ ಶಂಕರನಾರಾಯಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಮಹಾರುದ್ರಯಾಗವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಭಕ್ತರು, ಸೇವಾಕರ್ತರು, ಮಹಾರುದ್ರಯಾಗ ಸಮಿತಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವ ಸಭೆ ಶನಿವಾರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, “ಶ್ರೀ ಶಂಕರನಾರಾಯಣ ದೇವರ ಕೃಪೆಯಿಂದ ನನ್ನ ಮೂಲಕ ಮಹಾರುದ್ರಯಾಗ ಯಶಸ್ವಿಯಾಗಿ ನೆರವೇರಿದೆ. ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜ ಸುಧಾರಣೆಗೆ ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಮಹಾರುದ್ರಯಾಗ […]
ಉಡುಪಿ ಶ್ರೀಕೃಷ್ಣ ಮಠಕ್ಕೆ ತಾರಾ ದಂಪತಿ ವಸಿಷ್ಠ ಸಿಂಹ–ಹರಿಪ್ರಿಯಾ ಭೇಟಿ, ದೇವರ ದರ್ಶನ

ಉಡುಪಿ: ಕನ್ನಡ ಚಿತ್ರರಂಗದ ತಾರಾ ದಂಪತಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ತಮ್ಮ ಪುಟ್ಟ ಮಗುವಿನೊಂದಿಗೆ ಶನಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಮಠದ ಸಂಪ್ರದಾಯದಂತೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ದಂಪತಿ, ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಪರ್ಯಾಯ ಶಿರೂರು ಮಠದ ಪೀಠಾಧಿಪತಿ ವೇದವರ್ಧನತೀರ್ಥ ಶ್ರೀಪಾದರು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ದಂಪತಿ ಹಾಗೂ ಅವರ […]
ಉಡುಪಿಯಲ್ಲಿ Prestige ಬೊಂಬಾಟ್ Exchange ಆಫರ್: ಹಳೆಯ ಅಡುಗೆ ಉತ್ಪನ್ನಗಳನ್ನು ಹೊಸತಾಗಿಸಿಕೊಳ್ಳಲು ಇದೊಳ್ಳೆ ಅವಕಾಶ!

ಉಡುಪಿ: ನಿಮ್ಮ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಅಥವಾ ಮಿಕ್ಸರ್ ಗ್ರೈಂಡರ್ ಹೀಗೆ ಅಡುಗೆಮನೆಯ ಹಳೆಯದಾದ ಯಾವುದಾದರೂ ಉತ್ಪನ್ನಗಳನ್ನು ಹೊಸದಾದ Prestige ಉತ್ಪನ್ನಗಳೊಂದಿಗೆ ಎಕ್ಸ್ ಚೇಂಜ್ ಮಾಡಬಹುದಾದ ಒಂದೊಳ್ಳೆ ಆಫರ್ ನ್ನು ಈಗ ಘೋಷಿಸಲಾಗಿದೆ. ಉಡುಪಿ ಬನ್ನಂಜೆಯಲ್ಲಿ ಈ ಆಫರ್ ನ್ನು ನೀವು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಸ್ಟೊವ್ ನ್ನು 36% ರಿಯಾಯಿತಿಯಲ್ಲಿ, ಡಿಯೋ ಫ್ರೈ ಪ್ಯಾನ್ ನ್ನು 60%, ಫ್ರೆಶರ್ ಕುಕ್ಕರ್ ಅನ್ನು 40%, ಕಡಾಯ್ ಅನ್ನು 60%, ಏರ್ ಫ್ರೈಯರ್ ಅನ್ನು 39% ರಿಯಾಯಿತಿಯಲ್ಲಿ […]