ಉಡುಪಿ: ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಸಮಾರೋಪ ಸಮಾರಂಭ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ (ರಿ) ಉಡುಪಿ ಇವರ ಸಂಯೋಜನೆಯಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರದಂದು ನಡೆಯಿತು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,’ಮಟ್ಟಿ ಮುರಳೀಧರ ರಾವ್’ ಪ್ರಶಸ್ತಿಯನ್ನು, ಹಿರಿಯ ಅರ್ಥಧಾರಿಗಳಾದ ಎಸ್.ಎಂ.ಹೆಗಡೆ ಮುಡಾರೆ ಇವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರಿ ಸ್ವೀಕರಿಸಿದರು. ‘ಪೆರ್ಲ ಕೃಷ್ಣ ಭಟ್’ಪ್ರಶಸ್ತಿಯನ್ನು ಜಾನಪದ ವಿದ್ವಾಂಸ ,ಅರ್ಥಧಾರಿಗಳಾದ ಕೆ.ಎಲ್.ಕುಂಡಂತಾಯ ಇವರಿಗೆ ನೀಡಲಾಯಿತು.

ಉಡುಪಿಯ ಮೂಲದ ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಮತ್ತು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಯಕ್ಷಗಾನ ಕಲಾರಂಗ ಇನ್ನೂ ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಅನುಗ್ರಹಿಸಿದರು. ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕರಾದ ರಾಜಕುಮಾರ ಪಿ.ಎಚ್ “ಕಲಾಂತರಂಗ 2021-22 ” ನ್ನು ಬಿಡುಗಡೆಗೊಳಿಸಿದರು. ಅಭ್ಯಾಗತರಾಗಿ ಹೊನ್ನಾವರದ ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ ಭಾಗವಹಿಸಿದ್ದರು.

ಕಲಾರಂಗದ ಅಧ್ಯಕ್ಷರಾದ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಳಿ ಕಡೆಕಾರ್,ನಾರಾಯಣ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.