ಇಂದು ರೇಡಿಯೊ ಮಣಿಪಾಲ ಚಿಣ್ಣರ ದನಿಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಕಾರ್ಯಕ್ರಮ

ಮಣಿಪಾಲ: ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ಕೇಂದ್ರ ರೇಡಿಯೊ ಮಣಿಪಾಲ್ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಯೋಗದಲ್ಲಿ ‘ಚಿಣ್ಣರ ದನಿ’ ಕಾರ್ಯಕ್ರಮವು ಇಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದ ಮರುಪ್ರಸಾರ ಮೇ 4 ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ.

ಇಂದು ಪ್ರಸಾರವಾಗುವ ಕಾರ್ಯಕ್ರಮದ 7 ನೇ ಸಂಚಿಕೆಯಲ್ಲಿ ಬಾಲ ಪ್ರತಿಭೆ ಹಂಸಿನಿ ಎಸ್ ಬಂಗೇರ ಬೈಲೂರು ಭಾಗವಹಿಸಲಿದ್ದಾರೆ ಎಂದು ರೇಡಿಯೊ ಮಣಿಪಾಲದ ಪ್ರಕಟಣೆ ತಿಳಿಸಿದೆ.