ಉಡುಪಿ: ಚೇರ್ಕಾಡಿ ದುರ್ಗಾಪರಮೇಶ್ವರೀ ಖಾಸಗಿ ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ ಮತ್ತು ಸಮವಸ್ತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪ್ರೀತಮ್ ಅಡಿಗ ವಹಿಸಿ, ಶಾಲೆಗೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಸಂಚಾಲಕಿ ರಜನಿ ಸುರೇಶ್ ಶೆಟ್ಟಿ ಮತ್ತು ಪೋಷಕರ ಪರವಾಗಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಚೇರ್ಕಾಡಿ ಪಂಚಾಯತ್ ವತಿಯಿಂದ ನೀಡಲಾದ ಉಚಿತ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗೌರವ ಶಿಕ್ಷಕಿಯರು ಭಾಗವಹಿಸಿದ್ದರು.
ಮುಖ್ಯೋಪಾದ್ಯಾಯಿನಿ ಆಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು.