ಚೆನ್ನೈ: ತಮಿಳುನಾಡು ಪ್ರವಾಸದಲ್ಲಿ ಇರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ಚೆನ್ನೈ ಮಡಿಪ್ಪಾಕಮ್ ನ ಮಧ್ವಾಶ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ವಿಗ್ರಹ ಪ್ರತಿಷ್ಠಾನೆ ನೆರವೇರಿಸಿ, ಕಲಶಾಭಿಷೇಕ ಸಹಿತ ಮಹಾಪೂಜೆ ನೆರವೇರಿಸಿದರು.
ಬಳಿಕ ಚೆನ್ನೈನ ನಂಗನಲ್ಲೂರಿಗೆ ತೆರಳಿದ ಅವರು, ಅಲ್ಲಿ ಪ್ರತಿಷ್ಠಿತ ಚಕ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಸೇವಾಭಾರತಿ ಸಹಯೋಗದಲ್ಲಿ ಆರಂಭಿಸಿರುವ ಅತ್ಯಾಧುನಿಕ ಸೌಕರ್ಯ ಹೊಂದಿರುವ ಸಂಚಾರಿ ಆಸ್ಪತ್ರೆಯನ್ನು ಶ್ರೀಪಾದರು ಉದ್ಘಾಟಿಸಿದರು.
ಆಸ್ಪತ್ರೆ ಮುಖ್ಯಸ್ಥ ಡಾ. ಸತ್ಯನಾರಾಯಣ ಪ್ರಸಿದ್ಧ ಧಾರ್ಮಿಕ ನೇತಾರ ಮಡಿಪ್ಪಾಕ್ಕಮ್ ಮುರಳಿ ವಿಷ್ಣುಮೂರ್ತಿ ಆಚಾರ್ಯ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು .