ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ರ‍್ಯಾಪರ್ ಚಂದನ್‌ ಶೆಟ್ಟಿ ವಿರುದ್ಧ ದೂರು ದಾಖಲು

ಬೆಂಗಳೂರು:‌ ರ‍್ಯಾಪ್ ಸಿಂಗರ್ ಚಂದನ್‌ ಶೆಟ್ಟಿ ‘ಕೋಲುಮಂಡೆ’ ರ‍್ಯಾಪ್ ಸಾಂಗ್ ಮೂಲಕ ಹಿಂದೂ ಧಾರ್ಮಿಕ‌ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಜರಂಗದಳ ಮುಖಂಡ ತೇಜಸ್ ಗೌಡ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರು ದಿನಗಳ ಹಿಂದೆ ಆನಂದ್‌ ಆಡಿಯೋ ಕಂಪೆನಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡನ್ನು ಚಂದನ್‌ ಶೆಟ್ಟಿ ಬಿಡುಗಡೆ ಮಾಡಿದ್ದರು.
ಈ ಹಾಡಿನಲ್ಲಿ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಚಂದನ್ ಶೆಟ್ಟಿ, ಆಡಿಯೋ ಕಂಪೆನಿ ಹಾಗೂ ನಟಿ ನಂದಿನಿಯ ವಿರುದ್ಧ ದೂರ ದಾಖಲು ಮಾಡಿದ್ದಾರೆ.

ಯೂಟ್ಯೂಬ್ ನಲ್ಲಿ ವಿವಾದಾತ್ಮಕ ಹಾಡನ್ನು ಡಿಲೀಟ್ ಮಾಡಿದ್ದಾರೆ. ಆದರೆ ಕೆಲ ಆ್ಯಪ್ ಗಳಲ್ಲಿ ಇನ್ನೂ ಹಾಡು ಚಾಲ್ತಿಯಲ್ಲಿದೆ. ಅದನ್ನು ಕೂಡಲೇ ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಯೂಟ್ಯೂಬ್ ನಿಂದ ಹಾಡು ತೆರವು
ಕೋಲುಮಂಡೆ ಆಲ್ಬಂ ಹಾಡು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆನಂದ ಆಡಿಯೋ ಕಂಪೆನಿ ಯೂಟ್ಯೂಬ್ ನಿಂದ ಹಾಡನ್ನು ತೆರವು ಮಾಡಿದೆ.