ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚರಣ್ ಪಿ ಶೆಟ್ಟಿ ತೇರ್ಗಡೆ

ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಚರಣ್ ಪಿ ಶೆಟ್ಟಿ ಇವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಸಿಎ ನರಸಿಂಹ ನಾಯಕ್, ನಾಯಕ್ & ಅಸ್ಸೋಸಿಯೇಟ್ಸ್ ನಲ್ಲಿ ಅರ್ಟಿಕಲಶಿಪ್ ಮಾಡಿದ್ದಾರೆ.

ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ಬಿಕಾಮ್ ಪದವಿ ಪಡೆದಿರುವ ಇವರು ಕಾಪು ಕಲ್ಯಾ ಮೂಡುಮನೆ ಪ್ರಕಾಶ್ ಶೆಟ್ಟಿ ಹಾಗೂ ರೂಪಾ ಶೆಟ್ಟಿ ಇವರ ಪುತ್ರ.