ಮಾತ್ರೆ ಅದಲು ಬದಲಾದ ಕಾರಣ ಆರೋಗ್ಯದಲ್ಲಿ ಏರುಪೇರು: ಎನ್.ಆರ್. ಸಂತೋಷ್

ಬೆಂಗಳೂರು: ನನಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ಸೇವಿಸಿದ್ದೆ. ಅಜೀರ್ಣ ಮಾತ್ರೆಯ ಬದಲಾಗಿ ನಿದ್ರೆಯ ಮಾತ್ರೆ ಸೇವಿಸಿಬಿಟ್ಟಿದ್ದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿದ್ದಾರೆ.

ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನನಗೆ ಯಾವುದೇ ಒತ್ತಡ ಇರಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ನನಗೆ ನಿದ್ದೆ ಬಾರದಿದ್ದಾಗ ನಿದ್ರೆ ಮಾತ್ರೆ ಸೇವಿಸುವ ಅಭ್ಯಾಸವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಂದೆರಡು ದಿನ ವಿಶ್ರಾಂತಿ ಪಡೆದು ಸಿಎಂ ಭೇಟಿಯಾಗುತ್ತೇನೆ ಎಂದರು.

ಡಿಕೆಶಿ ಹತಾಶರಾಗಿದ್ದಾರೆ:
ಉಪಚುನಾವಣೆಯ ಸೋಲಿನಿಂದ ಡಿಕೆಶಿ ಹತಾಶರಾಗಿದ್ದಾರೆ. ಈ ಹಿಂದೆಯೂ ನನ್ನ ಬಗ್ಗೆ ಡಿಕೆಶಿ‌ ಹೇಳಿಕೆ ನೀಡಿದ್ದರು. ಐಟಿ ಇಡಿ ರೈಡ್ ಆದಾಗಲೂ ಡಿಕೆಶಿ ಡೈರಿ ಇದೆಯೆಂದು ಹೇಳಿಕೆ ಕೊಟ್ಟಿದ್ದರು. ಡಿಕೆಶಿ ಅವರು ಸಿದ್ದರಾಮಯ್ಯ ಅವರನ್ನು ಸ್ವಲ್ಪ ನೋಡಿ ಕಲಿಯಲಿ ಎಂದು ಟಾಂಗ್ ನೀಡಿದರು.