ಭಾರತದ ಮೊದಲ ಮಹಿಳಾ ಕ್ರಿಕೆಟ್ ನಿರೂಪಕಿ ಚಂದ್ರಾ ನಾಯ್ಡು ನಿಧನ

ಇಂದೋರ್: ಭಾರತದ ಮೊದಲ ಮಹಿಳಾ ಕ್ರಿಕೆಟ್ ನಿರೂಪಕಿ ಹಾಗೂ ಭಾರತದ ಮೊದಲ ಟೆಸ್ಟ್ ನಾಯಕ ಸಿ.ಕೆ. ನಾಯ್ಡು ಅವರ ಪುತ್ರಿ ಚಂದ್ರಾ ನಾಯ್ಡು (88) ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನ ಹೊಂದಿದರು.

ಅವರು 1977 ರಲ್ಲಿ ಇಂದೋರ್‌ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಬಾಂಬೆ (ಈಗಿನ ಮುಂಬೈ) ಮತ್ತು ಎಂಸಿಸಿ ನಡುವಿನ ಪಂದ್ಯದ ವೇಳೆ ಮೊದಲ ಕಮೆಂಟರಿ ನೀಡಿದ್ದರು.