ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಇದೇ ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಆದಿತ್ಯವಾರ 10-12-2023 ರಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಆದಿತ್ಯವಾರ 24-12-2023ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಈ ವರ್ಷದ ಚಂಪಾಷಷ್ಠಿ ಮಹೋತ್ಸವವು ಅದ್ಧೂರಿಯಾಗಿ ನಡೆಯಲಿದೆ.ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿಯ ಚಂಪಾಷಷ್ಠಿ ಮಹೋತ್ಸವ ಡಿಸೆಂಬರ್ 10 ರಿಂದ ಆರಂಭವಾಗಲಿದೆ.
ಇದೇ ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಆದಿತ್ಯವಾರ 10-12-2023 ರಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಆದಿತ್ಯವಾರ 24-12-2023ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ಜರುಗಲಿವೆ. ಭಗವತ್ಸಂಕಲ್ಪ ಪ್ರಕಾರ ನಡೆಯುವ ಈ ಮಹೋತ್ಸವಗಳಿಗೆ ಭಕ್ತರು ಇಷ್ಟ ಮಿತ್ರರೊಡಗೂಡಿ ಆಗಮಿಸಿ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.
ಸೇವೆಗಳ ವಿವರ:
- ಮಹಾರಥೋತ್ಸವ-25,000-00
- ಚಿಕ್ಕ ರಥೋತ್ಸವ-8,000-00
- ಚಂದ್ರಮಂಡಲ ಉತ್ಸವ-6,000-00
- ಹೂವಿನ ತೇರಿನ ಉತ್ಸವ-5,000-00
- ಬಂಡಿ ಉತ್ಸವ-3,000-00
- ಮಹಾಭಿಷೇಕ-6,000-00
- ದೀಪಾರಾಧನೆ, ಪಾಲಕಿ ಉತ್ಸವ-2,500-00
- ಮಹಾಪೂಜೆ, ಪಾಲಕಿ ಉತ್ಸವ-1,500-00
- ಸಪರಿವಾರ ಸೇವಾ-2,000-00
- ನಾಗಪ್ರತಿಷ್ಠೆ-400-00
- ಆಶ್ಲೇಷ ಬಲಿ-400-00
- ಮಹಾಪೂಜೆ (ಇಡೀ ದಿನದ್ದು)- 400-00
- ಮಹಾಪೂಜೆ (ಮಧ್ಯಾಹ್ನ)-250-00
- ಪಂಚಾಮೃತ ಅಭಿಷೇಕ-75-00
- ರುದ್ರಾಭಿಷೇಕ-75-00
- ಕ್ಷೀರಾಭಿಷೇಕ-50-00
- ಶೇಷ ಸೇವೆ-100-00
- ಹರಿವಾಣ ನೈವೇದ್ಯ-100-00
- ಕಾರ್ತಿಕ ಪೂಜೆ-50-00
- ಪಂಚಕಜ್ಜಾಯ-20-00
- ಲಾಡು ಪ್ರಸಾದ-20-00
- ತೀರ್ಥ ಬಾಟ್ಲಿ-10-00
ಕಾರ್ಯಗಳ ವಿವರಗಳು ಈ ಕೆಳಗಿನಂತಿವೆ:
10-12-2023ರ ಭಾನುವಾರ: ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.
11-12-2023ರ ಸೋಮವಾರ: ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.
12-12-2023ರ ಮಂಗಳವಾರ: ಲಕ್ಷದೀಪೋತ್ಸವ.
13-12-2023 ಕ್ಕೆ ಶೇಷವಾಹನೋತ್ಸವ.
14-12-2023 ರಂದು ಅಶ್ವವಾಹನೋತ್ಸವ.
15-12-2023 ರಂದು ಮಯೂರ ವಾಹನೋತ್ಸವ.
16-12-2023 ರಂದು ರಾತ್ರಿ ಹೂವಿನ ತೇರಿನ ಉತ್ಸವ.
17-12-2023ರ ಆದಿತ್ಯವಾರ ರಾತ್ರಿ ದೇವರ ಪಂಚಮಿ ರಥೋತ್ಸವ, ತೈಲಾಭ್ಯಂಜನ.
18-12-2023 ರಂದು ಪ್ರಾತಃ ಕಾಲ ಪ್ರಸಿದ್ಧ ಚಂಪಾಷಷ್ಠಿ ಮಹಾರಥೋತ್ಸವ.
19-12-2023 ಮಂಗಳವಾರದಂದು ಶ್ರೀ ದೇವರ ಅವಕೃತೋತ್ಸವ, ನೌಕಾವಿಹಾರ.
24-12-2023 ಆದಿತ್ಯವಾರದಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಕಾರ್ಯಗಳು ನಡೆಯಲಿವೆ.
09-12-2023ರ ಶನಿವಾರ “ಮೂಲಮೃತ್ತಿಕಾ” ಪ್ರಸಾದ ವಿತರಣೆ ಮತ್ತು ಕಿರುಷಷ್ಠಿ ಮಹೋತ್ಸವವು 16-01-2024 ರಂದು ಜರುಗಲಿದೆ.
ಮನಿಯಾರ್ಡರ್, ಡಿ. ಡಿ., ಚೆಕ್ಕು ಮೂಲಕ ಕಾಣಿಕೆ ರೂ. 50.00 ಅಥವಾ ಅದಕ್ಕಿಂತ ಅಧಿಕ ಹಣ ಕಳುಹಿಸುವ ಭಕ್ತಾದಿಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು. ಶ್ರೀ ದೇವಳದ ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಮೊತ್ತವನ್ನು ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ. ದಿನಾಂಕ 10-12-2023 ರಿಂದ 12-12-2023ರ ವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ದೇವಸ್ಥಾನದಿಂದ ಹೊರಡಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.