ನಟ ಜಗ್ಗೇಶ್ ಕ್ಷಮೆಯಾಚಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ನಟ ಜಗ್ಗೇಶ್ ಅವರಿಗೆ ನನ್ನ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ಗೊತ್ತಿರಲಿಲ್ಲ. ನನ್ನ ಅಭಿಮಾನಿಗಳಿಂದ ಜಗ್ಗೇಶ್ ಸರ್ ಗೆ ಬೇಜಾರಾಗಿದ್ದಾರೆ ಕ್ಷಮೆಯಾಚಿಸುತ್ತೇನೆ. ಅವರು ನಮ್ಮ ಹಿರಿಯರು, ಅವರು ಮುಂದೆ ಇರಬೇಕು ಎನ್ನುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ ಜಗ್ಗೇಶ್ ಜತೆ ಅಭಿಮಾನಿಗಳ ಸಂಘರ್ಷ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ಕನ್ನಡದ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಅವರು ಜಗ್ಗೇಶ್ ಅವರ ಕ್ಷಮೆಯಾಚಿಸಿದ್ದಾರೆ. ಈ ಗಲಾಟೆ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಅವತ್ತೇ ಜಗ್ಗೇಶ್ ಸರ್ ಕ್ಷಮೆ ಕೇಳುತ್ತಿದ್ದೆ ಎಂದರು.