ಯಕ್ಷಗಾನದ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ “ಯಾರು ನೀನು ಭುವನ ಮೋಹಿನಿ”ಹಾಡಿಗೆ ಕುಣಿದ ಯುವತಿಯೊಬ್ಬಳ ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯಕ್ಷಾಭಿಮಾನಿಗಳು ಮಾತ್ರವಲ್ಲ ರಾಜ್ಯದ ಬಹುತೇಕ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಂದ ಹಾಗೆ ಈ ಹುಡುಗಿ ಯಾರು ಎನ್ನುವುದು ಬಹುತೇಕ ಮಂದಿಯ ಪ್ರಶ್ನೆ.ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುಣಿತದ ವಿಡಿಯೋ ಶೇರ್ ಮಾಡಿ ಖುಷಿ ಪಟ್ಟಿದ್ದಾರೆ ಬಿಟ್ಟರೆ , ಈ ಹುಡುಗಿ ಯಾರು ಎನ್ನುವ ಪ್ರಶ್ನೆ ಎತ್ತಿರಲಿಲ್ಲ.”ಯಾರೆ ನೀನು ಭುವನ ಮೋಹಿನಿ”ಹಾಡಿಗೆ ಪ್ರಬುಧ್ದ ಕಲಾವಿದೆಯಂತೆ ಕುಣಿದ ಈ ಯುವತಿಯ ಹೆಸರೇ ಚೈತ್ರಾ ಶೆಟ್ಟಿ. ಕಡೆಕಾರಿನ ಯುವ ಕಲಾವಿದೆಯಾದ ಚೈತ್ರಾ, ಮೇ ೧೫ ರಂದು ಕಟಪಾಡಿ ಸಮೀಪದ ಕುರ್ಕಾಲಿನ ಮದುವೆಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಸಂಬಂಧಿಕರ ಬತ್ತಾಯದ ಮೇರೆಗೆ ಸುಮ್ಮನೇ ಯಕ್ಷಗಾನದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅವರು ಸ್ಟೆಪ್ ಹಾಕಿದ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ “ಯಾರಪ್ಪ ಈ ಹುಡುಗಿ”ಅಂತ ಯಕ್ಷಪ್ರೇಮಿಗಳು ಹುಬ್ಬೇರಿಸಿದ್ದಾರೆ.
ಕಲಾ ಚೈತ್ರ:
ಅಂದ ಹಾಗೆ ಚೈತ್ರಾ ಅವರಿಗೆ ಬಾಲ್ಯದಿಂದಲೂ ಯಕ್ಷಗಾನದತ್ತ ಆಸಕ್ತಿ ಜಾಸ್ತಿ ಇತ್ತು. ಯಕ್ಷಗುರು ರಾಜೀವ್ ತೋನ್ಸೆ ಅವರ ಬಳಿ ಯಕ್ಷಗಾನ ಅಭ್ಯಾಸ ಕೂಡ ಮಾಡಿದ್ದಾರೆ. ಅಲ್ಲಲ್ಲಿ ಯಕ್ಷಗಾನ ಪ್ರದರ್ಶನವನ್ನೂ ನೀಡಿ ಯಕ್ಷ ರಂಗದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ಅವರು ಸಾಂಪ್ರದಾಯಿಕವಾಗಿ ಈ ಹಿಂದೆ ಕುಣಿದದ್ದು ಸುದ್ದಿಯಾಗದೇ ಮೆಹಂದಿ ಕಾರ್ಯಕ್ರಮದಲ್ಲಿ ವೇಷಭೂಷಣಗಳಿಲ್ಲದೇ ಕುಣಿದದ್ದು ಭರ್ಜರಿ ಹಿಟ್ ಆಗಿದೆ.
ಚೈತ್ರಾ ಅವರ ವಿಡಿಯೋ ಇಲ್ಲಿದೆ: