ಜ. 6 ರಂದು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರ ಜಿಲ್ಲಾ ಭೇಟಿ: ದೂರು ಸಲ್ಲಿಕೆಗೆ ಅವಕಾಶ

ಉಡುಪಿ: ಮಕ್ಕಳ ರಕ್ಷಣೆಗಾಗಿ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗವು ಸಿ.ಪಿ.ಸಿ.ಆರ್ ಕಾಯಿದೆ 2007
ರ ಅಡಿಯಲ್ಲಿ ರೂಪುಗೊಂಡ ಶಾಸನಬದ್ಧ ಸಂಸ್ಥೆಯಾಗಿದ್ದು, ಆಯೋಗವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮತ್ತು ವಿವಿಧ ಕಾಯಿದೆ ಹಾಗೂ ಕಾನೂನುಗಳ ಅಡಿಯಲ್ಲಿ ಒದಗಿಸಲಾದ ಹಕ್ಕುಗಳನ್ನು ಆನಂದಿಸಲು ಎಲ್ಲಾ ಮಕ್ಕಳಿಗೆ ಅವಕಾಶ ಮಾಡಿಕೊಡುತ್ತದೆ.

ಮಕ್ಕಳ ಕುಂದು ಕೊರತೆ ನಿವಾರಣಾ ಸಭೆಯನ್ನು ನಡೆಸಲು ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರು ಜನವರಿ 6 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಬೀದಿ ಮಕ್ಕಳು, ಶಾಲಾ ಮಕ್ಕಳು, ಪೋಷಕರು, ಶಿಶು ಪಾಲನಾ ಸಂಸ್ಥೆಗಳು, ಮನೆಯ ಮಕ್ಕಳು, ವಸತಿ/ ತರಬೇತಿ ಪಡೆಯುವ ಸಂಸ್ಥೆಗಳು ಸೇರಿದಂತೆ ಎಲ್ಲಾ ವಿಭಾಗಗಳ ಮಕ್ಕಳು ಮತ್ತು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಗಳು ಅಂದು ಬೆಳಗ್ಗೆ 9 ಕ್ಕೆ ನೋಂದಾಯಿಸಿಕೊಂಡು 10 ಗಂಟೆಗೆ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ
ಆಯೋಗ ಮುಂದೆ ಮಕ್ಕಳಿಗೆ ಸಂಬಂಧಪಟ್ಟ ಯಾವುದೇ ರೀತಿಯ ದೂರನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.