ಕೇಂದ್ರ ಬಜೆಟ್: ಯಾವುದು ಅಗ್ಗ?, ಯಾವುದು ದುಬಾರಿ.?; ಇಲ್ಲಿದೆ ವಿವರ

ದೆಹಲಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಮಾಡಿದರು. ಕೃಷಿ ಸೆಸ್‌, ಸುಂಕ ಹೆಚ್ಚಳ ಜಾರಿಯಾಗುತ್ತಿರುವುದರಿಂದ ಹಲವು ವಸ್ತುಗಳ ಬೆಲೆ ದಿಢೀರ್‌ ಏರಿಕೆಯಾಗಲಿದೆ. ಈ ಸಾಲಿನ ಬಜೆಟ್‌ನಲ್ಲಿ ಬೆಲೆ ಇಳಿಕೆಗಿಂತ ದುಬಾರಿಯಾಗಿರುವ ವಸ್ತುಗಳ ಪಟ್ಟಿಯೇ ದೊಡ್ಡದಿದೆ.

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 2.5 ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಬೆಲೆ ₹ 4 ಏರಿಕೆ ಆಗಿದೆ. ಮದ್ಯದ ಮೇಲೆ ಶೇ 100, ಕಚ್ಚಾ ತಾಳೆಎಣ್ಣೆ ಮೇಲೆ ಶೇ 17.5 ಕೃಷಿ ಸೆಸ್ ಮತ್ತು ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಸೆಸ್ ಹೇರಿಕೆಯಾಗಿದೆ.

ಸೇಬು ಹಣ್ಣಿನ ಮೇಲೆ ಶೇ 35ರಷ್ಟು ಕೃಷಿ ಸೆಸ್, ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್‌ಗೆ ಮೇಲೆ ಶೇ 1.5ರಷ್ಟು ಸೆಸ್, ಯೂರಿಯಾ ಸೇರಿ ಕೆಲ ರಸಗೊಬ್ಬರಗಳ ಮೇಲೂ ಸೆಸ್ ಹೇರಲಾಗಿದೆ.

ಇನ್ನುಳಿದಂತೆ ಬಟಾಣಿ ಮೇಲೆ ಶೇ 40, ಕಾಬುಲ್ ಕಡಲೆಯ ಮೇಲೆ ಶೇ 40, ಕಡಲೆಬೇಳೆ ಮೇಲೆ ಶೇ 50, ಬೇಳೆಕಾಳುಗಳ ಮೇಲೆ ಶೇ 20ರಷ್ಟು , ಹತ್ತಿಯ ಮೇಲೆ ಶೇ 5ರಷ್ಟು ಕೃಷಿ ಸೆಸ್ ಹೇರಿದ್ದು, ನಾಳೆಯಿಂದಲೇ (ಫೆ.2) ಕೃಷಿ ಮೂಲಸೌಕರ್ಯ ಸೆಸ್ ಜಾರಿಯಾಗಲಿದೆ.

ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಸೀಮಾ ಸುಂಕವನ್ನು ಶೇ 12.5ರಿಂದ ಶೇ 7.5ಕ್ಕೆ ಇಳಿಕೆ ಮಾಡಲಿದೆ. ಭಾರತವು ಅಗತ್ಯಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ ಚಿನ್ನ–ಬೆಳ್ಳಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಯಾವುದು ಅಗ್ಗ?
ಕಬ್ಬಿಣ, ಉಕ್ಕು
ನೈಲಾನ್ ಬಟ್ಟೆ,
ತಾಮ್ರದ ಉತ್ಪನ್ನ
ವಿಮೆ
ವಿದ್ಯುತ್
ಸ್ಟೀಲ್ ಪಾತ್ರೆ
ಡ್ರೈ ಕ್ಲೀನಿಂಗ್
ಕೃಷಿ ಉಪಕರಣ
ಚಿನ್ನ, ಬೆಳ್ಳಿ

ಯಾವುದು ದುಬಾರಿ?
ಇಲೆಕ್ಟ್ರಾನಿಕ್ ಉಪಕರಣ
ಮೊಬೈಲ್
ಚಾರ್ಜರ್
ಲೆದರ್ ಶೂ
ಕಾಬೂಲಿ ಕಡಲೆ
ಧಾನ್ಯ
ಕೆಲವು ರಸಗೊಬ್ಬರ
ಪೆಟ್ರೋಲ್ ಮತ್ತು ಡೀಸೆಲ್
ಸೇಬು
ವಾಹನ ಬಿಡಿಭಾಗ
ಹರಳುಗಳು
ಆಮದು ಉಡುಪು
ಸೂರ್ಯಕಾಂತಿ ಎಣ್ಣೆ
ಹತ್ತಿ
ಮದ್ಯ