ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಕೇಂದ್ರ ಸರ್ಕಾರ ಸೋಮವಾರ ಸಂಜೆ ಘೋಷಿಸಿತು. ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಗೆ ಡಿಸೆಂಬರ್ 2019 ರಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಪೀಡಿತ ಅಲ್ಪ ಸಂಖ್ಯಾತ ಹಿಂದೂಗಳು ದಶಕಗಳಿಂದ ಭಾರತದಲ್ಲಿ ಶರಣಾರ್ಥಿಗಳಾಗಿದ್ದು ಇಂಥವರಿಗೆ ಭಾರತೀಯ ಪೌರತ್ವ ನೀಡುವ ಕಾನೂನು ಇದಾಗಿದೆ.

1950 ರಲ್ಲಿ ಸಿ ಎ ಎ ಕಾನೂನು ಜಾರಿಗೊಳಿಸಲಾಗಿದ್ದರೂ ಕಳೆದ ಕೆಲವು ದಶಕಗಳಿಂದ ಶರಣಾರ್ಥಿಗಳಿಗೆ ಪೌರತ್ವ ನೀಡಲಾಗಿರಲಿಲ್ಲ. ಮೋದಿ ಸರ್ಕಾರ 2019 ರಲ್ಲಿ ಕಾನೂನಿಗೆ ತಿದ್ದುಪಡಿ ತಂದಿದ್ದು, ಇದೀಗ ಕಾನೂನು ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.