ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫೀ, ರೀಲ್ಸ್‌ಗೆ ಬ್ರೇಕ್: ಸರಕಾರಿ ಕಾಲೇಜುಗಳಿಗೆ ಹೊಸ ಮಾರ್ಗಸೂಚಿ

ಬೆಂಗಳೂರು: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ವೇಳೆ ಸೆಲ್ಫೀ ಹಾಗೂ ರೀಲ್ಸ್ ಚಿತ್ರೀಕರಣಕ್ಕೆ ಅವಕಾಶ ನೀಡದಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಇಲಾಖೆ, ಪ್ರವಾಸದ ವೇಳೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಹಲವು ನಿಯಮಗಳನ್ನು ಪ್ರಕಟಿಸಿದೆ. ಪ್ರವಾಸದ ಸಂದರ್ಭದಲ್ಲಿ ಸಂಭವಿಸುತ್ತಿರುವ ಅವಘಡಗಳು ಹಾಗೂ ರೀಲ್ಸ್‌ಗಾಗಿ ಅಪಾಯಕಾರಿ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಕ್ಕೆ ತೆರಳುವ ಮುನ್ನವೇ […]

ಪಿಎಂ ಕಿಸಾನ್ ಯೋಜನೆ: ಇ-ಕೆವೈಸಿ ಮಾಡದಿದ್ದರೆ ಹಣ ರದ್ದು? ಮೊಬೈಲ್ ನಲ್ಲೇ ಮಾಡುವುದು ಹೇಗೆ?

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ಅರ್ಹ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂದಿನ ಕಂತಿನ ಹಣ ಪಾವತಿಗೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ರೈತರು ಕೂಡಲೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೃಷಿ ಇಲಾಖೆ ಸೂಚಿಸಿದೆ. ಪಿಎಂ ಕಿಸಾನ್‌ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹6,000 ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಈವರೆಗೆ 23 ಆರ್ಥಿಕ ಕಂತುಗಳ ಹಣವನ್ನು ಪಾವತಿಸಲಾಗಿದೆ. ಇ-ಕೆವೈಸಿ ಮಾಡುವುದು […]

ಹೆಂಡತಿ-ಮಕ್ಕಳಿಲ್ಲದೆ ವ್ಯಕ್ತಿ ಮೃತಪಟ್ಟರೆ ಆಸ್ತಿ ಯಾರ ಪಾಲಿಗೆ ಹೋಗುತ್ತದೆ? ಮಾಹಿತಿ ತಿಳಿಯಿರಿ

ಒಬ್ಬ ವ್ಯಕ್ತಿ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ಅದರಲ್ಲೂ ಮೃತರಿಗೆ ಹೆಂಡತಿ, ಮಕ್ಕಳು ಇಲ್ಲದಿದ್ದರೆ ಇಡೀ ಆಸ್ತಿ ಅಣ್ಣ-ತಂಗಿಯರಿಗೆ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾನೂನಿನಲ್ಲಿ ಉತ್ತರಾಧಿಕಾರಿಗಳಿಗೆ ನಿಗದಿತ ಆದ್ಯತೆಯ ಕ್ರಮವಿದೆ. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಸಂಬಂಧಿಸಿದಂತೆ ಉತ್ತರಾಧಿಕಾರದ ಪ್ರಮುಖ ನಿಯಮಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ನಿಯಂತ್ರಿಸುತ್ತದೆ. ವಿಲ್ ಇಲ್ಲದೆ ಹಿಂದೂ ಪುರುಷ ಮೃತಪಟ್ಟಾಗ ಮೊದಲು Class I ಉತ್ತರಾಧಿಕಾರಿಗಳನ್ನು ಪರಿಗಣಿಸಲಾಗುತ್ತದೆ. […]

ಚೆಕ್‌ನ ಹಿಂಭಾಗ ಸಹಿ ಹಾಕುವುದರ ಹಿಂದಿದೆ ಈ ಕಾರಣ! ತಿಳಿಯದೇ ಎಂದಿಗೂ ಸಹಿ ಹಾಕಬೇಡಿ

ಬ್ಯಾಂಕ್‌ ವ್ಯವಹಾರಗಳಲ್ಲಿ ಚೆಕ್‌ ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಕ್‌ ಬರೆಯುವಾಗ ಮುಂಭಾಗದಲ್ಲಿ ಸಹಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲೂ ಸಹಿ ಮಾಡಬೇಕಾಗುತ್ತದೆ. ಅಷ್ಟಕ್ಕೂ ಚೆಕ್‌ನ ಹಿಂಭಾಗದಲ್ಲಿ ಸಹಿ ಯಾಕೆ ಮಾಡಬೇಕು? ಅದರ ಉದ್ದೇಶ ಏನು? ಎಲ್ಲ ಚೆಕ್‌ಗಳಿಗೂ ಹಿಂಭಾಗದಲ್ಲಿ ಸಹಿ ಮಾಡಬೇಕೇ? ಎಂಬ ಪ್ರಶ್ನೆ ಹಲವರಲ್ಲಿದೆ. ಚೆಕ್‌ನ ಹಿಂಭಾಗದ ಸಹಿ ಎಂದರೇನು? ಚೆಕ್‌ನ ಹಿಂಭಾಗದಲ್ಲಿ ಮಾಡುವ ಸಹಿಯನ್ನು ಸಾಮಾನ್ಯವಾಗಿ ಎಂಡೋರ್ಸ್‌ಮೆಂಟ್‌ (Endorsement) ಎಂದು ಕರೆಯಲಾಗುತ್ತದೆ. ಚೆಕ್‌ ಅನ್ನು ಒಬ್ಬರಿಂದ […]

ಕರಾವಳಿಗರಿಗೆ ಗುಡ್‌ ನ್ಯೂಸ್: ಮಂಗಳೂರಿನಲ್ಲಿ ಸೆ.18ಕ್ಕೆ ಸಚಿವ ಸಂಪುಟ ಸಭೆ; ತುಳು ಭಾಷೆಗೆ ಸಿಗುತ್ತಾ ಮಾನ್ಯತೆ?

ಮಂಗಳೂರು: ಕರಾವಳಿ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದ್ದು, ಕರಾವಳಿ ಭಾಗದ ಜನರ ಹಲವು ಪ್ರಮುಖ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆ […]