ಮಂಗಳೂರು: ಜ.31 ರಂದು ಕೆನರಾ ಕಾಲೇಜಿನಲ್ಲಿ ಉದ್ಯೋಗಮೇಳ

ಮಂಗಳೂರು: ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಮಾದರಿ ವೃತ್ತಿ ಕೇಂದ್ರದ ಅಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಹಾಗೂ ಕೆನರಾ ಕಾಲೇಜು ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಜ.31 ಮಂಗಳವಾರದಂದು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ 25 ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ತಮ್ಮ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಿದ್ದಾರೆ. ಹತ್ತನೇ ತರಗತಿ, ಪಿಯುಸಿ, ಪದವಿ ಅಥವಾ ಸ್ನಾತಕೋತ್ತರ ಪದವೀಧರರು […]

ಫೆ. 4 ಮತ್ತು 7 ರಂದು ವಾಯುಸೇನೆ ಏರ್‌ಮ್ಯಾನ್ ಹುದ್ದೆಗಳ ನೇರ ನೇಮಕಾತಿ ರ‍್ಯಾಲಿ

ಉಡುಪಿ: ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 4 ಮತ್ತು 7 ರಂದು ಚೆನ್ನೈ ಏರ್ ಫೋರ್ಸ್ ಸ್ಟೇಷನ್ ತಾಂಬರಂ ನಲ್ಲಿ ನೇರ ನೇಮಕಾತಿ ರ‍್ಯಾಲಿಯನ್ನು ಅಯೋಜಿಸಲಾಗಿದ್ದು, ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ […]

ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶವಿದ್ದು, ತಿಂಗಳಿಗೆ 20 ಸಾವಿರ ರೂಗಳ ವೇತನ ನೀಡಲಾಗುವುದು. ಅರ್ಹತೆಗಳು: # ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಯಾರಿರಬೇಕು # ಕೆಲಸದ ಸ್ಥಳ ಕಾಪು # ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ನೀಡಲಾಗುವುದು ಆಸಕ್ತರು 8618257511, 9326012660 ಕರೆಮಾಡಬಹುದು ಅಥವಾ [email protected] ಇ-ಮೇಲ್ ಮಾಡಬಹುದು ಅಥವಾ ನೇರವಾಗಿ ದೇಸೀ ಕ್ರ್ಯೂ, ರಾ.ಹೆ-66 ಕಾಪು ಇಲ್ಲಿ ಭೇಟಿ ನೀಡಬಹುದು.

ಆದಿವಾಸಿ ಆರೋಗ್ಯ ಸಂಯೋಜಕಿ ಹಾಗೂ ಕಾರ್ಯಕರ್ತೆ ಹುದ್ದೆಗಾಗಿ ಬುಡಕಟ್ಟು ಮಹಿಳೆಯರಿಂದ ಅರ್ಜಿ ಆಹ್ವಾನ

ಉಡುಪಿ: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ವತಿಯಿಂದ ಬುಡಕಟ್ಟು ಅರೋಗ್ಯ ಸಂಚರಣೆ ಮಾದರಿ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದಲ್ಲಿ ಆದಿವಾಸಿ ಆರೋಗ್ಯ ಸಂಯೋಜಕರನ್ನು -1 ಹುದ್ದೆ ಮತ್ತು ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಆದಿವಾಸಿ ಆರೋಗ್ಯ ಕಾರ್ಯಕರ್ತೆಯರ ತಲಾ 1 ಹುದ್ದೆಗಳ ನೇಮಕಾತಿಗಾಗಿ ನರ್ಸಿಂಗ್ ತರಬೇತಿ ಪಡೆದ ಅರ್ಹ ಬುಡಕಟ್ಟು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಐ.ಟಿ.ಡಿ.ಪಿ, ರಜತಾದ್ರಿ, ಮಣಿಪಾಲ […]

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶುಶ್ರೂಷಕರ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮಂಗಳೂರು: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶುಶ್ರೂಷಕರ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಿಂಗಳಿಗೆ ಗರಿಷ್ಠ 2 ಲಕ್ಷ ರೂ.ಗಳ ವೇತನದೊಂದಿಗೆ 3 ತಿಂಗಳು ಉಚಿತ ವಸತಿ ವ್ಯವಸ್ಥೆ ನೀಡಲಾಗುವುದು. ಬಿ.ಎಸ್ಸಿ ನರ್ಸಿಂಗ್, ಜಿಎನ್‌ಎಮ್ ಹಾಗೂ ಪಿಬಿಬಿ.ಎಸ್ಸಿ ನರ್ಸಿಂಗ್‌ನಲ್ಲಿ 6 ತಿಂಗಳು ಮತ್ತು ಮೇಲ್ಪಟ್ಟ ಅನುಭವ ಹೊಂದಿದ್ದು, ಐಇಎ ಟಿಎಸ್-ಬಾನ್ಡ್ 7 ಅಥವಾ ಒಇಟಿ-ಗ್ರೇಡ್ ಬಿ, ಅರ್ಹತೆ ಹೊಂದಿದ್ದು, ಗರಿಷ್ಠ 50 ವರ್ಷದವರಾಗಿರಬೇಕು. ಆಸಕ್ತರು ಕಚೇರಿ ದಿನಗಳಲ್ಲಿ ಅಶೋಕ ನಗರದಲ್ಲಿರುವ ಉರ್ವ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ […]