ಉದ್ಯೋಗಿಗಳಿಗೆ ದೊಡ್ಡ ಶಾಕ್ ಕೊಟ್ಟ ವೋಕ್ಸ್‌ವ್ಯಾಗನ್ ಕಾರು ಕಂಪೆನಿ: ಒಟ್ಟು1 ಲಕ್ಷ ಉದ್ಯೋಗ ಕಡಿತ, ನಾಲ್ಕು ಪ್ರಮುಖ ಉತ್ಪಾದನಾ ಘಟಕ ಬಂದ್!

ಬರ್ಲಿನ್: ಜರ್ಮನಿಯ ವಾಹನ ತಯಾರಿಕಾ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ವೋಕ್ಸ್‌ವ್ಯಾಗನ್ Volkswagen ವೆಚ್ಚ ಕಡಿತ ಮತ್ತು ಆರ್ಥಿಕ ಒತ್ತಡದಿಂದ ಹೊರಬರಲು 1 ಲಕ್ಷ ಉದ್ಯೋಗಿಗಳನ್ನು ಹಂತಹಂತವಾಗಿ ವಜಾಗೊಳಿಸುವ ನಿರ್ಧಾರಕ್ಕೆ ಬಂದಿದ್ದು. ಉದ್ಯೋಗಿಗಳಿಗೆ ಇದೊಂದು ದೊಡ್ಡ ಶಾಕ್ ನೀಡಿದೆ. ಜರ್ಮನಿಯಲ್ಲಿರುವ ತನ್ನ ನಾಲ್ಕು ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ಸಂಸ್ಥೆ ನಿರ್ಧರಿಸಿದೆ. ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಜುಲೈ 9ರಂದು ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವನೆ […]

ಮೆಲಿಂಡಾ ಜೊತೆಗಿನ ವಿವಾಹದ ವೇಳೆ ಮೂರು ಅಕ್ರಮ ಸಂಬಂಧವಿತ್ತು! ಕೊನೆಗೂ ಸತ್ಯ ಬಹಿರಂಗಪಡಿಸಿದ ಬಿಲ್ ಗೇಟ್ಸ್

ವಾಷಿಂಗ್ಟನ್: ಬಿಲ್ ಗೇಟ್ಸ್ Bill Gates ಅವರು ಅಮೆರಿಕ ಸಂಸತ್ತಿನ ಹೌಸ್ ಓವರ್‌ಸೈಟ್ ಸಮಿತಿಯ ಮುಚ್ಚಿದ ಬಾಗಿಲಿನ (closed-door) ವಿಚಾರಣೆಯಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಪತ್ನಿ ಮೆಲಿಂಡಾ Melinda French Gates ಅವರೊಂದಿಗೆ ವೈವಾಹಿಕ ಜೀವನದಲ್ಲಿದ್ದ ವೇಳೆ ಮೂರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದುದಾಗಿ ಅವರು ಒಪ್ಪಿಕೊಂಡಿದ್ದಾರೆ. ಗೇಟ್ಸ್ ಅವರ ಹೇಳಿಕೆಯ ಪ್ರಕಾರ, ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೋನೊವಾ, ಪರಮಾಣು ವಿಜ್ಞಾನಿ ಕರಿಮಾ ನಿಗ್ಮಾತುಲಿನಾ ಹಾಗೂ ವೈದ್ಯಕೀಯ ಉದ್ಯಮಿ ಆಲಿಸ್ ಜಾಕೋಬ್ಸ್ […]

ಸಾಂಸ್ಕೃತಿಕ ಚಟುವಟಿಕೆಗಳು ಮಾನಸಿಕ ಆರೋಗ್ಯ ವೃದ್ಧಿಯ ಶಕ್ತಿ: ಡಾ.ಗಣನಾಥ ಎಕ್ಕಾರು

ಉಡುಪಿ: ಮನುಷ್ಯನ ದೇಹಕ್ಕೆ ಮಾನಸಿಕ ದೈಹಿಕ ಹಾಗೂ ಸಾಂಸ್ಕೃತಿಕ ಅಂಶಗಳು ಅತೀ ಅವಶ್ಯ. ಈ ಮೂರು ವಿಚಾರವನ್ನು ಹೊಂದಿದಾಗ ವ್ಯಕ್ತಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿಯನ್ನು ಸಾಂಸ್ಕೃತಿಕ ಚಟುವಟಿಕೆಗಳು ಹೊಂದಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು. ಅವರು ಭಾನುವಾರ ಮಲ್ಪೆ ಬೀಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಸಿಂಫನಿ ಸಂಗೀತ ಬಳಗ ಹಾಗೂ ಭ್ರಾಮರಿ ಜನಪದ ಕಲಾ ತಂಡ ಉಡುಪಿ […]

ಟೆಲಿಗ್ರಾಂ ಪ್ರಿಯರಿಗೆ ಶಾಕ್, ಭಾರತದಲ್ಲಿ ತಾತ್ಕಾಲಿಕವಾಗಿ ಟೆಲಿಗ್ರಾಂ ಆ್ಯಪ್ ನಿಷೇಧ, ಈ ನಿರ್ಧಾರಕ್ಕೆ ಕಾರಣವೇನು?

ನವದೆಹಲಿ: ನೀಟ್ (NEET-UG 2026) ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಟೆಲಿಗ್ರಾಮ್ ಆ್ಯಪ್ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಟೆಲಿಗ್ರಾಮ್‌ಗೆ ಭಾರತದಲ್ಲಿ ಜೂನ್ 22ರವರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕಳೆದ ಕೆಲ ದಿನಗಳಿಂದ ಟೆಲಿಗ್ರಾಮ್ […]

ಹಾರ್ಮುಜ್ ಜಲಸಂಧಿ ಬಳಿ ಹಡಗಿನ ಮೇಲೆ ಭಾರೀ ದಾಳಿ, ಮೂವರು ಭಾರತೀಯ ನಾವಿಕರ ಸಾವು!

ನವದೆಹಲಿ: ಹಾರ್ಮುಜ್ ಜಲಸಂಧಿ ಸಮೀಪದ ಓಮನ್ ಕೊಲ್ಲಿಯಲ್ಲಿ ಸಂಚರಿಸುತ್ತಿದ್ದ ಪಲಾವ್ ಧ್ವಜ ಹೊತ್ತ ಎಂಟಿ ಸೆಟ್ಟೆಬೆಲ್ಲೊ (MT Settebello) ವಾಣಿಜ್ಯ ಟ್ಯಾಂಕರ್ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಈ ಘಟನೆ ಭಾರತೀಯ ಕಡಲ ಸಮುದಾಯಕ್ಕೆ ಭಾರೀ ಆಘಾತ ಉಂಟುಮಾಡಿದೆ. ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಭಾರತೀಯ ನಾವಿಕರ ಸಾವನ್ನು ದೇಶದ ಕಡಲ ವಲಯಕ್ಕೆ ಉಂಟಾದ ಅಪಾರ ನಷ್ಟ […]