ಭಾರತಕ್ಕೆ ನೇಪಾಳ ಅಕ್ಕಿ, ಭತ್ತ ಮತ್ತು ಸಕ್ಕರೆ ನೀಡುವಂತೆ ಮನವಿ
ಕಠ್ಮಂಡು (ನೇಪಾಳ) : ತನ್ನ ದೇಶಕ್ಕೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೇಪಾಳ ಭಾರತಕ್ಕೆ ಮನವಿ ಮಾಡಿದೆ. ತನಗೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ. ಭಾರತವು ತನ್ನ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಬಳಿಕ ಜಗತ್ತಿನಲ್ಲಿ ಅಕ್ಕಿಗಾಗಿ ಹಾಹಾಕಾರ ಉಂಟಾಗಿದ್ದು, ಈಗ ನೇಪಾಳ ಅಕ್ಕಿಗಾಗಿ ಭಾರತಕ್ಕೆ ಮನವಿ ಮಾಡಿರುವುದು ಗಮನಾರ್ಹ. ಎಲ್ […]
ಆಧ್ಯಾತ್ಮಿಕ ಪ್ರವಾಸದಲ್ಲಿ ರಜನಿಕಾಂತ್ – ಬದ್ರಿನಾಥ್ ದೇವಸ್ಥಾನದಲ್ಲಿ ವಿಶೇಷ ಪೂಜೆ
ಭಾರತದ, ವಿಶೇಷವಾಗಿ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸದ್ಯ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ.ತಮ್ಮ ಬಹುನಿರೀಕ್ಷಿತ ಜೈಲರ್ ಸಿನಿಮಾದ ಬಿಡುಗಡೆಗೂ ಮುನ್ನ ಹಿಮಾಲಯ ಪ್ರವಾಸ ಕೈಗೊಂಡರು. ಇದೀಗ ಪ್ರಸಿದ್ಧ ಪುಣ್ಯಕ್ಷೇತ್ರ ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ: ಇಂದು ಬೆಳಗ್ಗೆ ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಸೂಪರ್ ಸ್ಟಾರ್ ಅವರನ್ನು ಬದ್ರಿನಾಥ್ – ಕೇದಾರನಾಥ ದೇವಾಲಯ […]
ಎಕ್ಸ್ ಮರುನಾಮಕರಣದ ನಂತರ ಕಚೇರಿಯಲ್ಲಿನ ಹಳೆಯ ಲೋಗೊ, ನೇಮ್ಬೋರ್ಡ್ ಹರಾಜಿಗಿಟ್ಟ ಮಸ್ಕ್!
ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ಗೆ ಎಕ್ಸ್ ಎಂದು ಮರುನಾಮಕರಣ ಮಾಡಿದ ಕೆಲವೇ ವಾರಗಳ ನಂತರ ಮಸ್ಕ್ ಟ್ವಿಟರ್ ಹೆಸರು ಲೋಗೊ ಇರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಆಚೆ ದಬ್ಬುತ್ತಿದ್ದಾರೆ. ‘ಟ್ವಿಟರ್ ರೀಬ್ರಾಂಡಿಂಗ್: ಸ್ಮರಣಿಕೆಗಳು, ಕಲಾತ್ಮಕ ವಸ್ತುಗಳು, ಕಚೇರಿ ಸ್ವತ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳ ಹರಾಜು!’ (‘Twitter Rebranding: Online Auction Featuring Memorabilia, Art, Office Assets & More!’) ಎಂಬ ಹರಾಜು ಬಿಡ್ಡಿಂಗ್ ಸೆಪ್ಟೆಂಬರ್ 12 ರಂದು ಪ್ರಾರಂಭವಾಗಲಿದ್ದು, ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದೆ ಎಂದು […]
ಶ್ರೀಲಂಕಾಗೆ ಬಂದ ಚೀನಾ ಗೂಢಚಾರ ಹಡಗು: ಭಾರತದಿಂದ ತೀವ್ರ ಆಕ್ಷೇಪ
ನವದೆಹಲಿ : ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ.ಚೀನಾದ ಗೂಢಚಾರಿಕೆ ಹಡಗು ಶ್ರೀಲಂಕಾದ ಕೊಲಂಬೊ ಬಂದರಿಗೆ ಆಗಮಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್‌ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶನಿವಾರ ಇಲ್ಲಿಂದ ನಿರ್ಗಮಿಸಲಿದೆ. “ಕೊಲಂಬೊಗೆ ಆಗಮಿಸಿರುವ 129 ಮೀಟರ್ ಉದ್ದದ […]
3 ಶತಕೋಟಿ ವರ್ಷ ಹಳೆಯ ಪುರಾವೆ ಮಂಗಳಗ್ರಹದಲ್ಲಿ ಪತ್ತೆ : ಜೀವ ವಿಕಾಸಕ್ಕೆ ಪೂರಕವಾಗಿದ್ದ ಗ್ರಹ
ನ್ಯೂಯಾರ್ಕ್ : ಮಂಗಳ ಗ್ರಹದಲ್ಲಿ 3.8 ರಿಂದ 3.6 ಶತಕೋಟಿ ವರ್ಷಗಳ ಹಿಂದಿನ ಸೆಡಿಮೆಂಟರಿ ಪದರುಗಳಲ್ಲಿ ಲವಣಗಳ ನಿಕ್ಷೇಪಗಳಿಂದ ರಚಿತವಾದ ಷಟ್ಕೋನಾಕಾರದ ಮಾದರಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.ಮಂಗಳ ಗ್ರಹದ ಮೇಲೆ ಜೀವಿಗಳ ಉಗಮಕ್ಕೆ ಪೂರಕವಾದ ವಾತಾವರಣ ಇತ್ತು ಎಂಬ ಬಗ್ಗೆ ಹೊಸ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಕ್ಯೂರಿಯಾಸಿಟಿಯ ಮಾಸ್ಟ್ ಕ್ಯಾಮ್ 1 ಮತ್ತು ಚೆಮ್ ಕ್ಯಾಮ್ 2 ಉಪಕರಣಗಳನ್ನು ಬಳಸಿಕೊಂಡು ವಿಜ್ಞಾನಿಗಳು 3.8 ರಿಂದ 3.6 ಬಿಲಿಯನ್ ವರ್ಷಗಳ ಹಿಂದಿನ ಲವಣಗಳ ನಿಕ್ಷೇಪವನ್ನು ಕಂಡುಹಿಡಿದಿದ್ದಾರೆ. ಋತುಮಾನಕ್ಕನುಗುಣವಾಗಿ ಒಣಗುವ […]