ಉಡುಪಿ: ತಿರುಮಲ ಸನ್ನಿಧಿಯಲ್ಲಿ ನಡೆದ ಲಡ್ಡೂಪ್ರಸಾದ ಘಟನೆ ಅತ್ಯಂತ ಖಂಡನೀಯ: ಪುತ್ತಿಗೆ ಶ್ರೀ

ಉಡುಪಿ: ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾಕೇಂದ್ರವಾದ ತಿರುಪತಿಯ ಶ್ರೀವೇಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಪ್ರಸಾದವನ್ನು ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಈ ಮೂಲಕ ಬಹು ದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ. ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ […]
ಇಂಜಿನಿಯರ್ ದಿನದ ಆಚರಣೆಯ ಉದ್ದೇಶ ಮತ್ತು ಮಹತ್ವ

ನಮ್ಮ ಸಮಾಜದ ಅಭಿವೃದ್ಧಿಯ ಕಾರ್ಯದಲ್ಲಿ ಇಂಜಿನಿಯರ್‌ಗಳ ಪಾತ್ರ ಬಹು ಮುಖ್ಯವಾದದ್ದು. ರಸ್ತೆಗಳು, ಸೇತುವೆಗಳಿಂದ ಹಿಡಿದು ಕಟ್ಟಡಗಳು ಮತ್ತು ವಿವಿಧ ರೀತಿಯ ಯಂತ್ರಗಳನ್ನು ರೂಪಿಸುವವರೆಗೆ ನಾವು ಅವಲಂಬಿಸಿರುವ ಪ್ರತಿಯೊಂದು ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವಲ್ಲಿ ಇಂಜಿನಿಯರ್ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ನಮ್ಮ ಜೀವನವನ್ನು ಸರಾಗಗೊಳಿಸುವ ಹಲವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಂತಹ ಇಂಜಿನಿಯರ್ ಗಳನ್ನು ಮತ್ತು ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ವರದಿಗಳ ಪ್ರಕಾರ, ಭಾರತವು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಇಂಜಿನಿಯರ್ […]
ಇವರು ಅಭಿವೃದ್ಧಿಯ ನವಸೃಷ್ಟಿಕರ್ತರು! :ಇಂಜಿನಿಯರ್ಸ್ ದಿನದ ಶುಭಾಶಯಗಳು

ಇಂಜಿನಿಯರ್ಸ್ ಗಳೆಂದರೆ ಸದಾ ಹೊಸತನವನ್ನು ಸೃಷ್ಟಿ ಮಾಡುವವರು, ದೇಶದ ಅಭಿವೃದ್ದಿಗೆ ಹೆಗಲಾಗುವವರಿ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ಆರ್ಥಿಕವಾಗಿ ಸದೃಢವನ್ನಾಗಿಸಲು ನೆರವಾಗುವ ಎಂಜಿನಿಯರ್‌ಗಳ ಸೇವೆಯನ್ನು ಸ್ಮರಿಸುವ, ತನ್ಮೂಲಕ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ `ಇಂಜಿನಿಯರ್‌ಗಳ ದಿನ’ವನ್ನು ಆಚರಿಸಲಾಗುತ್ತದೆ. ಇಂದು ಸೆಪ್ಟೆಂಬರ್ 15 ಇಂಜಿನಿಯರ್‌ಗಳ ದಿನ. ಆಚರಣೆ ಹಿನ್ನೆಲೆ ಬಗ್ಗೆ ಒಂದಷ್ಟು: ಇಂಜಿನಿಯರ್ ದಿನದ ಆಚರಣೆಯ ಹಿನ್ನಲೆ ವಿಶೇಷವಾಗಿದೆ. ಸರ್ ಎಂ ವಿಶ್ವೇಶ್ವರಯ್ಯ. ನಮ್ಮ ನೆಲದ ಸಾಕ್ಷಿಪ್ರಜ್ಞೆ. ಭಾರತದ ಕಂಡ ಅಪ್ರತಿಮ ಇಂಜಿನಿಯರ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 […]
ಗಣೇಶ ಚುತುರ್ಥಿಯ ವಿಶೇಷ, ಸ್ವಾರಸ್ಯಗಳನ್ನು ತಿಳಿದುಕೊಳ್ಳೋಣ.

ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದರೆ ಲೋಕವೆಲ್ಲಾ ಬೆಳಗುವ ಹಬ್ಬ. ಗಣೇಶನನ್ನು ಕಣ್ತುಂಬಿಕೊಂಡು ಭಕ್ತರು ಸಂತಸ ಪಡುವ ಹಬ್ಬ. ಈ ಹಬ್ಬದ ಆಚರಣೆಗಳ ಹಿನ್ನೆಲೆ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ಇದು ಪ್ರೀತಿಯ ಆನೆಯ ತಲೆಯ ದೇವತೆಯಾದ ಗಣೇಶನ ಜನ್ಮವನ್ನು ಗೌರವಿಸುತ್ತದೆ. ಇದು ಜನನ, ಜೀವನ ಮತ್ತು ಮರಣದ ಚಕ್ರವನ್ನು ಸಂಕೇತಿಸುತ್ತದೆ ಮತ್ತು ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಸಂಕೀರ್ಣವಾಗಿ ಅಲಂಕರಿಸಿದ ವಿಗ್ರಹಗಳನ್ನು ಸ್ಥಾಪಿಸುವ ಮೂಲಕ ಗುರುತಿಸಲಾಗುತ್ತದೆ. ಗಣೇಶನು ರಕ್ಷಣೆ, ನಿಷ್ಠೆ, ಬುದ್ಧಿವಂತಿಕೆ, ಅದೃಷ್ಟ […]
ಸೆ.7ರಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ವಿನಾಯಕ ಚತುರ್ಥಿ.

ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ಸೆ.7ರಂದು ಸಂಪ್ರದಾಯದಂತೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.6ರಂದು ಪೂರ್ವಾಹ್ನ ಗಂಟೆ 10 ಗಂಟೆಗೆ ಉಪ್ಪಿನಂಗಡಿ, ರಾಮಕುಂಜ ಪುತ್ತೂರು ಶ್ರೀ ಗುರುಸಾರ್ವಭೌಮ ಮಹಿಳಾ ಭಜನ ಮಂಡಳಿ ಇವರಿಂದ ಭಜನೆ, ಮಧ್ಯಾಹ್ನ ಗಂಟೆ 3ರಿಂದ 5ರ ತನಕ ಕುಂಭಾಶಿ ಆನೆಗುಡ್ಡೆ ಶ್ರೀ ವಿಶ್ವೇಶ್ವರ ಮಹಿಳಾ ಭಜನ ಮಂಡಳಿಯವರಿಂದ ಭಜನೆ ಹಾಗೂ ಸಂಜೆ ಗಂಟೆ 5ರಿಂದ ಮಂಗಳೂರಿನ ಕೋಡಿಕಲ್ ಸರಯೂ […]