ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಇಂದು ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ

ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 20 ರಿಂದ 25ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಯು ಇಂದು ಸಂಜೆ ಗುಡ್ಡೆಯಂಗಡಿ, ಪುಪಾಡಿಕಲ್ಲು, ಜೋಡುಕಟ್ಟೆ ಮಾರ್ಗವಾಗಿ ಹಸಿರು ಹೊರೆಕಾಣಿಕೆಯನ್ನು ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಹಲವು ಭಜನಾ ತಂಡಗಳು, ಚಂಡೆ ಬಳಗ ಹಾಗೂ ಬ್ಯಾಂಡ್ ಸೆಟ್ ಗಳ ಮೂಲಕ ವೈಭವದ ಮೆರೆವಣಿಗೆ ನಡೆಯಿತು. ಊರ- ಪರಪೂರ ಸಾವಿರಾರು ಭಕ್ತಾದಿಮಾನಿಗಳು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. […]

ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ: ವಿವಿಧ ಹೋಮ, ಗಣಯಾಗ ಸಂಪನ್ನ

ಉಡುಪಿ: ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗು ರಾಶಿಪೂಜಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳು ಇಂದು ದೇಗುಲದ ಆವರಣದಲ್ಲಿ ನಡೆಯಿತು. ದೇವಸ್ಥಾನದ ಪುರೋಹಿತರ ನೇತೃತ್ವದಲ್ಲಿ ಅಷ್ಟ ಬಂಧ, ಶಕ್ತಿ ಹೋಮ, ನವಕಪ್ರಧಾನ, ಅಥರ್ವಶೀರ್ಷ ಗಣಯಾಗ ಮತ್ತು ಮಹಾ ಸುದರ್ಶನ ಹೋಮ, ಬಲಿಪೀಠ ಪ್ರತಿಷ್ಠೆ ಹಾಗೂ ಶಾಂತಿ ಪ್ರಾಯಶ್ಚಿತ ಹೋಮಗಳು ಸಂಪನ್ನಗೊಂಡವು.

ಮಂಗಳೂರು: ಮೇ-19 ರಂದು ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ ನಲ್ಲಿರುವ ದ ಓಶನ್ ಪರ್ಲ್ ಹೋಟೆಲ್ ನಲ್ಲಿ ಮೇ.19 ರಂದು ಸಂಜೆ 7 ಗಂಟೆಗೆ ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ.20 ರಿಂದ 25: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 20 ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಇಂದು ಸಂಜೆ ಗಂಟೆ 3.30 ರಿಂದ ಗುಡ್ಡೆಯಂಗಡಿ, ಪುಪಾಡಿಕಲ್ಲು, ಜೋಡುಕಟ್ಟೆ ಮಾರ್ಗವಾಗಿ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮತೋಲಿತ ಆಹಾರ ಸೇವಿಸಿರಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿರಿ

ಕಣ್ಣು ಮಾನವನ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಇಂದಿನ ಕಲುಷಿತ ವಾತಾವರಣ ಮತ್ತು ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ದವರೆಗೂ ದೃಷ್ಟಿ ದೋಷ ಎಲ್ಲರನ್ನೂ ಬಾಧಿಸುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ಪೌಷ್ಠಿಕಾರಕ ಆಹಾರವನ್ನು ಸೇವಿಸುವುದು ಅವಶ್ಯವಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ. ಲುಟೀನ್ ಮತ್ತು ಝೀಕ್ಸಾಂಥಿನ್ ಲುಟೀನ್ ಮತ್ತು ಝೀಕ್ಸಾಂಥಿನ್ ಎಂಬ ಈ ಉತ್ಕರ್ಷಣ ನಿರೋಧಕಗಳು ಸೂರ್ಯನ ಬೆಳಕಿನಲ್ಲಿರುವ ಯುವಿ ಕಿರಣಗಳಂತಹ ಹಾನಿಕಾರಕ ಅಧಿಕ ಶಕ್ತಿಯ ಬೆಳಕಿನ ಅಲೆಗಳಿಂದ […]