ಮಂಗಳೂರು: ಮೇ-19 ರಂದು ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ ನಲ್ಲಿರುವ ದ ಓಶನ್ ಪರ್ಲ್ ಹೋಟೆಲ್ ನಲ್ಲಿ ಮೇ.19 ರಂದು ಸಂಜೆ 7 ಗಂಟೆಗೆ ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ.20 ರಿಂದ 25: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 20 ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಇಂದು ಸಂಜೆ ಗಂಟೆ 3.30 ರಿಂದ ಗುಡ್ಡೆಯಂಗಡಿ, ಪುಪಾಡಿಕಲ್ಲು, ಜೋಡುಕಟ್ಟೆ ಮಾರ್ಗವಾಗಿ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮತೋಲಿತ ಆಹಾರ ಸೇವಿಸಿರಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿರಿ

ಕಣ್ಣು ಮಾನವನ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಇಂದಿನ ಕಲುಷಿತ ವಾತಾವರಣ ಮತ್ತು ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ದವರೆಗೂ ದೃಷ್ಟಿ ದೋಷ ಎಲ್ಲರನ್ನೂ ಬಾಧಿಸುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ಪೌಷ್ಠಿಕಾರಕ ಆಹಾರವನ್ನು ಸೇವಿಸುವುದು ಅವಶ್ಯವಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ. ಲುಟೀನ್ ಮತ್ತು ಝೀಕ್ಸಾಂಥಿನ್ ಲುಟೀನ್ ಮತ್ತು ಝೀಕ್ಸಾಂಥಿನ್ ಎಂಬ ಈ ಉತ್ಕರ್ಷಣ ನಿರೋಧಕಗಳು ಸೂರ್ಯನ ಬೆಳಕಿನಲ್ಲಿರುವ ಯುವಿ ಕಿರಣಗಳಂತಹ ಹಾನಿಕಾರಕ ಅಧಿಕ ಶಕ್ತಿಯ ಬೆಳಕಿನ ಅಲೆಗಳಿಂದ […]

ಪಡುಕುತ್ಯಾರು ಆನೆಗುಂದಿ ಶ್ರೀ ಪಟ್ಟಾಭಿಷೇಕ ವರ್ಧಂತಿ ಸಂಪನ್ನ

ಉಡುಪಿ: ಸಾಮಾಜಿಕ ಜಾಲತಾಣಗಳ ನವ ಮಾಧ್ಯಮದ ಸಂಪರ್ಕದಲ್ಲಿರುವ ಎಳೆಯ ಮಕ್ಕಳಿಗೆ ಹೆತ್ತವರು ಸಂಸ್ಕಾರಯುತ ಜೀವನ ನಡೆಸುವುದನ್ನು ಕಲಿಸುವ ಪ್ರಯತ್ನ ನಡೆಯಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು. ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಜರುಗಿದ ತಮ್ಮ ಪಟ್ಟಾಭಿಷೇಕ ಮಹೋತ್ಸವದ 13ನೇ ವರ್ಷದ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ […]

ಮೇ.17ರಿಂದ 24: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರದ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇದೇ ಬರುವ ಮೇ.17ರಿಂದ 24ರ ವರೆಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19ರಂದು ಮಧ್ಯಾಹ್ನ 3.30ಕ್ಕೆ ಅಂಬಲಪಾಡಿ ದೇವಸಾನದಿಂದ ಹೊರಕಾಣಿಕೆ ಮೆರವಣಿಗೆಗೆ ಆರಂಭಗೊಳ್ಳಲಿದೆ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ […]