2023 ಸಿಇಟಿ ಪರೀಕ್ಷೆಯ ಆರ್​ಡಿ ಸಂಖ್ಯೆ ತಿದ್ದುಪಡಿಗೆ ಮತ್ತೊಂದು ಅವಕಾಶ

ಬೆಂಗಳೂರು : ಆರ್​ಡಿ ಸಂಖ್ಯೆ ತಿದ್ದುಪಡಿಗೆ ಜೂನ್‌ 7 ರಿಂದ ಜೂನ್‌ 12 ರವರೆಗೆ ಅವಕಾಶ ನೀಡಲಾಗಿದೆ. ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ ನಮೂದಿಸಿರುವ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯ ಆರ್​.ಡಿ ಸಂಖ್ಯೆ ಜೊತೆ ನಮೂದಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಆದರೆ, ಸಾವಿರಾರು ಅಭ್ಯರ್ಥಿಗಳ ಈ ಸಂಖ್ಯೆಗಳು ನಾನಾ ಕಾರಣಗಳಿಗಾಗಿ ತಾಳೆಯಾಗದೆ ಇರುವ ಹಿನ್ನೆಲೆಯಲ್ಲಿ ಸೂಕ್ತ ತಿದ್ದುಪಡಿಗೆ ಜೂನ್‌ 7ರ ಸಂಜೆ 4 ಗಂಟೆಯಿಂದ ಜೂನ್‌ 12ರ ಬೆಳಿಗ್ಗೆ […]

ಜೂ.30 ರಂದು 3 ಸ್ಥಾನಗಳಿಗೆ ವಿಧಾನ ಪರಿಷತ್ತಿನ ಉಪಚುನಾವಣೆ

ಬೆಂಗಳೂರು : ಸದಸ್ಯರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಈ ತಿಂಗಳ 30ರಂದು ಉಪಚುನಾವಣೆ ನಡೆಯಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ್, ಆರ್. ಶಂಕರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣಾ ಆಯೋಗ ಇಂದು ಉಪಚುನಾವಣೆ ವೇಳಾಪಟ್ಟಿ ಘೋಷಿಸಿತು. ವಿಧಾನಸಭೆಯ ಶಾಸಕರು ಚುನಾವಣೆಯ ಮತದಾರರಾಗಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 135, ಬಿಜೆಪಿ […]

ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ:ವೀಕೆಂಡ್​ ವಿತ್​ ರಮೇಶ್

ವೀಕೆಂಡ್​ ವಿತ್​ ರಮೇಶ್​’ ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ.ಅಂತಿಮ ಘಟ್ಟ ತಲುಪಿರುವ ವೀಕೆಂಡ್​ ವಿತ್​ ರಮೇಶ್​ ಶೋನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಆಗಮಿಸಲಿದ್ದಾರೆ ಕನ್ನಡಿಗರ ಮನೆಗೆದ್ದಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಬಂದು ತಮ್ಮ ಸಾಧನೆಯ ಪುಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ. ‘ವೀಕೆಂಡ್​ ವಿತ್​ ರಮೇಶ್​’ ಶೋನ ಈ ವಾರದ ಪ್ರೋಮೋ ರಿಲೀಸ್​ ಆಗಿದೆ. ಸೋಷಿಯಲ್​ ಮೀಡಿಯಾಗಳಲ್ಲೂ ಪ್ರೋಮೋ ರಿಲೀಸ್​ ಮಾಡಿರುವ ಜೀ ವಾಹಿನಿ, ”ರಾಜ್ಯ ಕಂಡ […]

ಪ್ಯಾನ್ ಇಂಡಿಯಾ ಸ್ಟಾರ್ :Rakshith Shetty Birthdayಗೆ ತ್ರಿಭುವನ್ ಚಿತ್ರಮಂದಿರದ ಮುಂದೆ ಕಣ್ಣೀರಿಟ್ಟಿದ್ದ ಮಂಗಳೂರು ಹುಡುಗ

ಒಂದು ದಶಕದ ಹಿಂದೆ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ, ತಮ್ಮ ಅಸ್ತಿತ್ವದ ಹುಡುಕಾಟದಲ್ಲಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರ ಸಿನಿ ಸಾಧನೆ ಹೀಗಿದೆ.. ಆದರೆ, ಎರಡು ಸಿನಿಮಾವೂ ಕಮರ್ಷಿಯಲ್ ಚೌಕಟ್ಟಿನಲ್ಲಿ ಗೆಲ್ಲಲಿಲ್ಲ. ಆ ಕಾಲಕ್ಕೆ ಗಾಂಧಿನಗರದ ಪಡಸಾಲೆಯಲ್ಲಿ ಇದ್ದ ತ್ರಿಭುವನ್ ಚಿತ್ರಮಂದಿರದ ಮುಂದೆ ಇದೇ ರಕ್ಷಿತ್ ಶೆಟ್ಟಿ ಸೋಲಿಂದ ಕಣ್ಣೀರಿಟ್ಟಿದ್ದರು. ಆದರೆ ಕಣ್ಣೀರಿಟ್ಟಿದ್ದ ಅದೇ ಜಾಗದಲ್ಲಿ ಮುಂದೊಂದು ದಿನ ರಕ್ಷಿತ್ ಶೆಟ್ಟಿ ಗೆಲುವಿನ […]

ಉಡುಪಿ “ಗೀತಾಂಜಲಿ ಸಿಲ್ಕ್ಸ್” ನಲ್ಲಿ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್ ಜೂನ್ 7ರಿಂದ ಪ್ರಾರಂಭ

ಉಡುಪಿ: ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಜನಪ್ರಿಯ ಬಟ್ಟೆ ಮಳಿಗೆಯಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್ ನೀಡಲಾಗಿದೆ. ಈ ಕೊಡುಗೆಯು ಇದೇ ಜೂನ್ 7ರಿಂದ ಆರಂಭಗೊಳ್ಳಲಿದೆ. ಈ ಕೊಡುಗೆಯಲ್ಲಿ ಮಹಿಳೆಯರ, ಪುರುಷರ, ಮಕ್ಕಳ ಎಲ್ಲಾ ಉಡುಪುಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ನಿತ್ಯ ಉಪಯೋಗದ ಬೆಡ್ ಶೀಟ್, ಬೆಡ್ ಸ್ಪೇಡ್, ಪ್ಲೋರ್ ಮ್ಯಾಟ್, ಕರ್ಟನ್ ಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ದರ ಕಡಿತ ಲಭ್ಯವಿದೆ. […]