ವಿಶ್ವ ಕುಂದಾಪುರ ‌ಹಬ್ಬ

ಪ್ರೆಸಕ್ಲಬ್ ನಲ್ಲಿ ಮಾತನಾಡಿದ ಅವರು,ಐದನೇ ಬಾರಿಗೆ ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಹಬ್ಬ ಆಯೋಜನೆ ಆಗ್ತಿದೆ.ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.ಸರಿಯಾಗಿ 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ‌ನಡೆಯಲಿದ್ದು ಶಾಸಕ ಕಿರಣ್‌ ಕೊಡ್ಗಿ, ಗುರುರಾಜ್ ಗಂಟಿಹೊಳೆ ಉಪಸ್ಥಿತರಿಲಿದ್ದಾರೆ.ಆಂಕರ್-ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ ಜುಲೈ 23ರ ಭಾನುವಾರ ‌ಆಯೋಜನೆ ಗೊಂಡಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರಿನ ಅಧ್ಯಕ್ಷ ‌ದೀಪಕ್ ಶೆಟ್ಟಿ ಹೇಳಿದ್ದಾರೆ.ಸಂಜೆ 5 ಗಂಟೆಯ ಸಮಾರೋಪ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ,ನಟ- ನಿರ್ದೇಶಕ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಯಕ್ಷಗಾನ, ಹಾಡು, […]

ಸ್ವಂತ ಮಗುವಿನ ರೀತಿ ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ: ಬಂಡೀಪುರದಿಂದ ತಾಯಿಯಿಂದ ಬೇರ್ಪಟ್ಟಿರುವ ಮರಿಆನೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾಗೆ ‘ವೇದಾ’ ಮೊದಲನೇ ಹೆಣ್ಣು ಮಗಳು. ಈ ವೇದಾ ಮತ್ಯಾರೂ ಅಲ್ಲ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆಮರಿ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯಾ ಅವರ ಮಡಿಲು ಸೇರಿರುವ ವೇದಾಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ […]

ಕನ್ನಡ ಮಾಲೂಮ್ ನಹೀಗೆ ಪರಿಹಾರವೇನು?

ನಾನು ಅನ್ಯಭಾಷಿಕಳಾಗಿ,ಅನ್ಯ ರಾಜ್ಯದವಳಾಗಿ ಕನ್ನಡವನ್ನು ಮಾತನಾಡಲು,ಬರೆಯಲು,ಅನುಭವದ ಆಧಾರದ ಮೇಲೆ ಕರ್ನಾಟಕ ಸರ್ಕಾರ, ಕನ್ನಡ ಸಂಘಗಳು ಮತ್ತು ಕನ್ನಡ ಪ್ರೇಮಿಗಳ ಜೊತೆ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು, ಬಯಸುತ್ತೇನೆ. ಪೂಜಾ ಗಾಂಧಿ ,ಪ್ರಸಿದ್ಧ ಚಿತ್ರ ನಟಿ —– ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ವರದಿಯಾದಂತೆ, ಕರ್ನಾಟಕ ಸರ್ಕಾರದ ಗೌರವಾನ್ವಿತ ಗೃಹ ಸಚಿವರಾದ ಡಾ ಜಿ. ಪರಮೇಶ್ವರವರು “ಚಾವುಂಡರಾಯ ದತ್ತಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿರುವ ಶೇಕಡಾ 60 ರಷ್ಟು ಜನರಿಗೆ ಕನ್ನಡ ಬರದಿರುವ ಬಗ್ಗೆ ತಮ್ಮ ಕಳವಳ […]

ನಿಷೇಧಿತ ಪ್ಲಾಸ್ಟಿಕ್ ವಶ: ದಂಡ ವಸೂಲಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಇಂದು ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 52 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, 18,000 ರೂ. ದಂಡ ವಿಧಿಸಲಾಯಿತು ಹಾಗೂ ಉದ್ದಿಮೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು […]

ಅಪರೂಪದ ಈಲ್ ಮೀನು ಸುರತ್ಕಲ್​ನಲ್ಲಿ ಪತ್ತೆ

ಮಂಗಳೂರು (ದಕ್ಷಿಣ ಕನ್ನಡ): ಕನ್ನಡದಲ್ಲಿ ‘ಅರೋಳಿ ಮೀನು’ ಎಂದು ಕರೆಯುತ್ತಾರೆ. ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ, ಇದು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ.ಸಮುದ್ರದ ಆಳದಲ್ಲಿ ವಾಸಿಸುವ ‘ಲಿಯೊಪೋರ್ಡ್ ಹನಿಕೋಂಬ್ ಈಲ್’ ಎಂದು ಕರೆಯಲ್ಪಡುವ ಅಪರೂಪದ ಮೀನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಂಗಳೂರಿನ ಸುರತ್ಕಲ್​ನಲ್ಲಿ ಅಪರೂಪದ ಈಲ್ ಮೀನು ಪತ್ತೆಯಾಗಿದೆ. ಸೇವನೆಗೆ ಯೋಗ್ಯವಲ್ಲದ ಮೀನು: ಸಾಮಾನ್ಯವಾಗಿ ಕರಾವಳಿಯಲ್ಲಿ ಎಲ್ಲಾ ರೀತಿಯ ಮೀನುಗಳು ಸಿಗುತ್ತವೆ. ಕೆಲವೊಂದು ತಿನ್ನಲು ಯೋಗ್ಯವಾಗಿರುತ್ತವೆ. ಆದರೆ ಈ ಮೀನು ಸ್ವಲ್ಪ ಮಟ್ಟಿಗೆ […]