ಇಸ್ರೊದ 3ನೇ ಹಂತದ ಕಾರ್ಯಾಚರಣೆ ಯಶಸ್ವಿ: ಚಂದ್ರನಿಗೆ 1,500 ಕಿಮೀ ಹತ್ತಿರ ತಲುಪಿದ ಚಂದ್ರಯಾನ-೩

ಬೆಂಗಳೂರು: ಭಾನುವಾರ ನಡೆಸಿದ ಚಂದ್ರನ ಕಕ್ಷೆ ಸೇರ್ಪಡೆಯನ್ನು (ಎಲ್‌ಒಐ) ಒಳಗೊಂಡ ತನ್ನ ಮೂರನೇ ಚಂದ್ರಯಾನ ಕಾರ್ಯಾಚರಣೆಯನ್ನು ಇಸ್ರೊ ಪೂರ್ಣಗೊಳಿಸಿದೆ.ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಚಂದ್ರನಿಗೆ ಅತ್ಯಂತ ಹತ್ತಿರಕ್ಕೆ ತಲುಪಿದೆ.ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನಿಗೆ ತೀರಾ ಹತ್ತಿರಕ್ಕೆ ತಲುಪಿದ್ದು, ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಸ್ರೊ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು. ಸೋಮವಾರ ಇಸ್ರೋ ಚಂದ್ರಯಾನ -3 ರ ಎತ್ತರವನ್ನು ಸುಮಾರು 14,000 ಕಿಮೀ ಕಡಿಮೆ ಮಾಡಿ ಚಂದ್ರನಿಗೆ 4,313 ಕಿಮೀಗೆ ಇಳಿಸಿತ್ತು. ಮುಂದಿನ ಚಂದ್ರಯಾನ ಕಾರ್ಯಾಚರಣೆ ಕ್ರಮಗಳು ಆಗಸ್ಟ್ 14 […]

ಚಂದ್ರಯಾನ -3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ : ಇಸ್ರೋ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವೆಡೆಗೆ

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ.ಚಂದ್ರಯಾನ -3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್​ 24ರಂದು ನೌಕೆ ಚಂದ್ರನ ಮೇಲೆ ಇಳಿಯಲಿದೆ. ಇಸ್ರೋ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲಿದೆ. ಇಸ್ರೋ ಟ್ವೀಟ್ ಮೂಲಕ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಂಜಿನ್ ಅನ್ನು ವಿರುದ್ಧ ದಿಕ್ಕಿನಲ್ಲಿ ಉರಿಸುವ ಮೂಲಕ ತಾನು ಈ ಮೊದಲು ಅಂದುಕೊಂಡ ನಡೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹಕ್ಕೆ ತೆರಳಿದೆ. ಈಗ […]

ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ತ್ರಿವರ್ಣ ಧ್ವಜಗಳು : ರಾಷ್ಟ್ರ ಧ್ವಜಗಳಿಗೆ ಭಾರೀ ಬೇಡಿಕೆ

ಹುಬ್ಬಳ್ಳಿ: ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಎಂದರೆ ಅದು ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ಕೋವಿಡ್ ನಂತರ ಮತ್ತೆ ಇಲ್ಲಿನ ರಾಷ್ಟ್ರಧ್ವಜಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಸಂಸ್ಥೆಯು ಈ ವರ್ಷ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಿದೆ. ಈ ಹಿಂದಿನ ದಿನಗಳಿಗೆ ಹೋಲಿಕೆ ‌ಮಾಡಿದರೆ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷದಿಂದ ವರ್ಷಕ್ಕೆ ಚೇತರಿಕೆಯನ್ನು ಕಂಡಿದೆ. ಕಳೆದ […]

ಇತಿಹಾಸದಲ್ಲೆ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಕಂಬಳ..!

ಬೆಂಗಳೂರು: ಬೆಂಗಳೂರಿನಲ್ಲಿ ಕಂಬಳದ ಇತಿಹಾಸದಲ್ಲಿ ಮೊದಲ ಬಾರಿಗೆ, ರಾಜ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜೋಡುಕೆರೆ ಕಂಬಳ ನಡೆಯಲಿದ್ದು, ತುಳುನಾಡಿನ ಕಂಬಳದ ಕೋಣಗಳು ಬೆಂಗಳೂರಿನ ಕಡೆಗೆ ಹೊರಡಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಲಿರುವ ಈ ಕಂಬಳಕ್ಕೆ ಮೈಸೂರು ಅರಸರಿಂದ ಅನುಮತಿ ದೊರೆತಿದೆ. ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗ. ‘ಕಂಬಳ, ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಬಳಿಕ ಕೋಣಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟವಷ್ಟೇ […]

ಥ್ಯಾಂಕ್ಯೂ ಫ್ರೆಂಡ್ಸ್: ಫ್ರೆಂಡಶಿಪ್ ಡೇ ವಿಶೇಷ

ನನ್ನ ಹೆಸರು ಆಶಾ ನನ್ನ ಗೆಳತಿ ಹೆಸರು ಅಶ್ವಿನಿ ನಾನು ಉಡುಪಿಯ ಕಿನ್ನಿಮೂಲ್ಕಿಯವಳು. ನನ್ನ ಗೆಳತಿ ನನಗೆ ತುಂಬಾ ಸಹಾಯ ಮಾಡಿದ್ದಾಳೆ ನನ್ನ ಜೀವನದಲ್ಲಿ ತುಂಬಾ ಧೈರ್ಯವನ್ನು ತುಂಬಿದ್ದಾರೆ ಅದಕ್ಕಾಗಿ ನಾನು ಅವಳ ಗೆಳೆತನವನ್ನು ಎಂದಿಗೂ ಮರೆಯುವುದಿಲ್ಲ — ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಇಂತಾ ಒಬ್ಬ ಗೆಳೆಯನಿದ್ದರೆ ಸಾಕು… My name : Vinay devadiga ,Friend name: Ajay Shetty, Place : kundapura — […]