ನಾಯ್ಕನಕಟ್ಟೆ: ಶ್ರೀ ರಾಮೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ನಾಯಕನ ಕಟ್ಟೆ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತೀಷ್ಠಾ ಮಹೋತ್ಸವದ ಆಚರಣೆಯ ಸಂಭ್ರಮದ ಕ್ಷಣದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿಗಳನ್ನು ಆಚರಿಸಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಪ್ರಥಮ ಸಂಗೀತ ಕಛೇರಿ ಸ್ಥಳೀಯ ಯುವ ಕಲಾ ಪ್ರತಿಭೆಗಳಿಂದ ನಡೆದ ವಾದ್ಯ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಗಳಿಸಿತು. ವಿನಾಯಕ ಕಾಮತ್ ಹಾರ್ಮೋನಿಯಂ, ವಿಗ್ನೇಶ್ ಭಂಡಾರ್ಕರ್ ಕೀ ಬೋರ್ಡ್ ವಾದನ, ಅಜಿತ್ ಭಂಡಾರ್ಕರ್ ಫ್ಲೂಟ್, ಉಮೇಶ್ ಮೇಸ್ತ ರಿದಮ್ ಪೇಡ್, ಆದಿನಾಥಕಿಣಿ ತಬಲಾ, ಕುಮಾರಿ […]

ಫೆ1 ರಿಂದ 4 ರವರೆಗೆ ಸಂಸ್ಕಾರ ಭಾರತೀ ವತಿಯಿಂದ ಅಖಿಲ ಭಾರತ ಕಲಾಸಾಧಕ ಸಂಗಮ

ಬೆಂಗಳೂರು: ಸಂಸ್ಕಾರ ಭಾರತೀ ವತಿಯಿಂದ ಫೆಬ್ರವರಿ 1 ರಿಂದ 4, 2024ರವರೆಗೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮ – 2024 ನಿಮಿತ್ತ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪತಿಷತ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಂಸ್ಕಾರ ಭಾರತೀ ಯ ಅಖಿಲ ಭಾರತೀಯ ಮಹಾಮಂತ್ರಿ ಅಶ್ವಿನ್ ದಳ್ವಿ, ಮಾತನಾಡಿ ಇಂದು ‘ಸಂಸ್ಕಾರ ಭಾರತೀ’ಯಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ರಾಜ್ಯೋತ್ಸಾನ ಪರಿಷತ್ತಿನ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ಆಯೋಜಿಸಲಾಗಿತ್ತು. ಪತ್ರಕರ್ತರನ್ನು ಉದ್ದೇಶಿಸಿ “ಸಂಸ್ಕಾರ ಭಾರತೀ’ಯ ಅಖಿಲ ಭಾರತ […]

ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಪುತ್ತೂರು: ಜ.27 ರಂದು ನಡೆದ 31ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 15 ಜೊತೆ ನೇಗಿಲು ಹಿರಿಯ: 40 ಜೊತೆ ಹಗ್ಗ ಕಿರಿಯ: 25 ಜೊತೆ ನೇಗಿಲು ಕಿರಿಯ: 97 ಜೊತೆ ಒಟ್ಟು ಕೋಣಗಳ ಸಂಖ್ಯೆ: 187 ಜೊತೆ ಕನೆಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಬೋಳಾರ ತ್ರಿಶಾಲ್ ಕೆ […]

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀಗಳಿಂದ 48 ದಿನಗಳ ಮಂಡಲೋತ್ಸವ ಆರಂಭ

ಉಡುಪಿ: ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ‌ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದಿನಿಂದ 48 ದಿನಗಳ ಮಂಡಲೋತ್ಸವ ಆರಂಭಗೊಂಡಿದೆ. ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಸದವರ ನೇತೃತ್ವದಲ್ಲಿ ವಿವಿಧ ಹೋಮಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು.

ಜ.24: ಖ್ಯಾತ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನ

ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಳ್ಳಲಿದೆ. ಜನವರಿ 24 ಬುಧವಾರದಂದು ರಾತ್ರಿ 7.30 ಕ್ಕೆ ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ […]