ಧರ್ಮಸ್ಥಳ:ಎಸ್ ಐ ಟಿ ತನಿಖೆಯ ದಿಕ್ಕು ತಪ್ಪಿಸುತ್ತಿದೆಯಾ ಮಾಧ್ಯಮಗಳು? ಮಾಧ್ಯಮಗಳೇ ಜವಾಬ್ದಾರಿ ಮರೆತು ಗಾಳಿ ಸುದ್ದಿಗೆ ಮಣೆ ಹಾಕಿದವಾ?

-ವಿಶೇಷ ಬರಹ ಧರ್ಮಸ್ಥಳ ಅಸಹಜ ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿನ ಕುರಿತು ಸರಕಾರ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಯುತ್ತಿದೆ. ಸೋಮವಾರ ಸದನದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್, ಎಸ್ ಐಟಿ ನೀಡಿದ ಒಂದಷ್ಟು ವರದಿಯನ್ನೂ ವಿವರಿಸಿದ್ದಾರೆ. ಎರಡು ಕಡೆಗಳಲ್ಲಿ ಅಸ್ಥಿಪಂಜರ, ಮೂಳೆ ಸಿಕ್ಕಿರುದಾಗಿ ಮತ್ತು ಮಣ್ಣಿನಲ್ಲಿ ಆಸಿಡ್ ಅಂಶವಿದ್ದು ಕೆಲವೊಂದು ಮೂಳೆಗಳು ಕರಗಿ ಹೋಗುವ ಸಾಧ್ಯತೆ ಇದ್ದು ಮಣ್ಣನ್ನೂ ಪರೀಕ್ಷೆಗೆ ಕಳಿಸಲಾಗಿದೆ. ಯಾವುದೇ ಕಾರಣಕ್ಕೂ ಸರಕಾರ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸುದಿಲ್ಲ,ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ […]

ಸ್ವಾತಂತ್ರ್ಯ ದಿನವೆಂದರೆ ಬಾಲ್ಯ ನೆನಪಾಗುತ್ತದೆ: ಈಗಲೂ ಕಾಡುವ ಆ ಸಂಭ್ರಮದ ಕ್ಷಣಗಳು:

-ಪ್ರಗತಿ ಎಸ್. ಸ್ವಾತಂತ್ರ್ಯ ದಿನಾಚರಣೆ ಬೆಳಿಗ್ಗೆಯಂತು ಎಲ್ಲರ ಮುಖದಲ್ಲೂ ಎಲ್ಲಿಲ್ಲದ ಸಂಭ್ರಮವೂ ಸಂಭ್ರಮ. ಸಮವಸ್ತ್ರ ಬೂಟ್ ಧರಿಸಿ ಕೈಯಲ್ಲಿ ಒಂದು ಬಾವುಟ ಹಿಡಿದು ನಡೆಯುತ್ತಿದ್ದೆವು ಶಾಲೆಯ ಕಡೆಗೆ. ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ.ಆದರೂ ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರೂ ಮುಗಿಯುತ್ತಿರಲಿಲ್ಲ. […]

ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಾವು ದೇಶಕ್ಕೆ ಕೊಡುವ ದೊಡ್ಡ ಗೌರವ: ರಶ್ಮಿತಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಆಗಸ್ಟ್ 15 ಇಡೀ ಭರತ ಖಂಡದಲ್ಲಿರೋ  ನಾವೆಲ್ಲರೂ ಒಂದೇ ಅನ್ನುವ ಐಕ್ಯತಾ ಭಾವದಿ ಸಂಭ್ರಮಿಸುವ ದೇಶದ ಹೆಮ್ಮೆಯ ದಿನ. ಎಷ್ಟೋ ಹೋರಾಟಗಾರರ ತ್ಯಾಗದ ಗುರುತೇ ಈ ಸ್ವಾತಂತ್ರ್ಯ. ಸ್ವಾತಂತ್ರ್ಯ ಅನ್ನುವುದು ಕೇವಲ ಒಂದು ಪದವಲ್ಲ ಬದಲಿಗೆ ಎಷ್ಟೋ ಜನರ ನೆತ್ತರ ಕುರುಹು. ಒಗ್ಗಟ್ಟು ಭ್ರಾತೃತ್ವ  ಶಾಂತಿ ದೇಶ ಪ್ರೇಮದ ಸಂದೇಶ ಸಾರುವ ಭಾರತದ ಹೆಮ್ಮೆಯ ಹಬ್ಬ. ಬಾಲ್ಯದ ದಿನಗಳಲ್ಲಿ  ಸ್ವಾತಂತ್ರ್ಯ ದಿನಾಚರಣೆ ಅಂದರೆ ಕೇವಲ ಮೆರವಣಿಗೆ ಬಹುಮಾನ ವಿತರಣೆ ಸಿಹಿ ತಿನಿಸು ಬರಿ ಇಷ್ಟಕ್ಕೆ ಮನಸು ಸೀಮಿತವಾಗಿತ್ತು.ಆದರೆ […]

 ತ್ಯಾಗದಿಂದ ಬಂದ ತೇಜಸ್ಸು “ಸ್ವಾತಂತ್ರ್ಯ”: ಪ್ರಜ್ಞಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಸ್ವಾತಂತ್ರ್ಯ ದಿನಾಚರಣೆ ಎಂದರೆ ನಮ್ಮ ದೇಶವನ್ನು  ಬ್ರಿಟೀಷರ ಆಳ್ವಿಕೆಯಿಂದ ಮುಕ್ತಾಯಗೊಂಡ ಕ್ಷಣವನ್ನು ಸ್ಮರಿಸುವ  ವಿಶೇಷ ಕ್ಷಣ. ಇದು ಕೇವಲ ರಜೆಯ ದಿನವಲ್ಲ, ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವನ್ನು ನೆನೆದು ಗೌರವಿಸುವ ದಿನ.  ನನ್ನ ಪ್ರಕಾರ ನಾವು ಸ್ವಾತಂತ್ರ್ಯ ದಿನವನ್ನು ತುಂಬಾ ಖುಷಿಯಿಂದ,  ಗೌರವದಿಂದ ಆಚರಿಸಬೇಕು. ನನ್ನ ಬಾಲ್ಯದ ದಿನದಲ್ಲಿ ಶಾಲೆಗೆ ಹೋಗುತ್ತಿರುವಾಗ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದಂದು ಸುತ್ತಮುತ್ತಲೂ ಎಲ್ಲಾ ಸ್ವಚ್ಛಗೊಳಿಸಿ ಭಾರತದ ನಕ್ಷೆಯನ್ನು ಧ್ವಜಸ್ತಂಬದ ಮುಂದೆ […]