ಐತಿಹಾಸಿಕ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ: ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ: ಪುರಾತನ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆಯಾದಿ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ಜ.22 ರಿಂದ ಪ್ರಾರಂಭವಾಗಲಿದೆ. ಜ.22 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪ ಸಮರ್ಪಣೆ, ಮುಷ್ಟಿ ಕಾಣಿಕೆ, ಮೃತ್ಯುಂಜಯ ಹೋಮ ಹಾಗು ಇತರ ಹೋಮಗಳು […]

ನಾಳೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ – ವೆತಾ ಉಡುಪಿ ಕೇಂದ್ರದ ಉದ್ಘಾಟನೆ

ಉಡುಪಿ: ಇಲ್ಲಿನ ಅಲಂಕಾರ್ ಚಿತ್ರಮಂದಿರದ ಹಿಂದಿರುವ ಮಹಾಲಸ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಜ.13 ರಂದು ಬೆಳಗ್ಗೆ 11 ಗಂಟೆಗೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ -ವೆತಾ ಉಡುಪಿ ಕೇಂದ್ರದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಗಳಾಗಿ ಬಿ ಇ ಒ ಅಶೋಕ್ ಕಾಮತ್, ಅಲೆವೂರು ಶಾಂತಿ ನಿಕೇತನ ಶಾಲೆಯ ದಿನೇಶ್ ಕಿಣಿ, ಮುಕುಂದಕೃಪ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಧ್ಯಾಯಿನಿ ಸುಜಾತ ಶೆಟ್ಟಿ ಉಪಸ್ಥತರಿರಲಿದ್ದಾರೆ ಎಂದು ಸುಪ್ರೀತಾ ಕಾಮತ್ ಹಾಗೂ ಪ್ರಶಾಂತ್ ಕಾಮತ್ ತಿಳಿಸಿದ್ದಾರೆ.

ಶ್ರೀಪುತ್ತಿಗೆ ಪರ್ಯಾಯದಲ್ಲಿ ವಿದುಷಿ ಶುಭಶ್ರೀ ಅಡಿಗರವರಿಂದ ವೀಣಾವಾದನ

ಉಡುಪಿ: ಉಡುಪಿ ಶ್ರೀಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವ ಪ್ರಯುಕ್ತ ರಥಬೀದಿಯ ಆನಂದ ತೀರ್ಥಮಂಟಪದಲ್ಲಿ ವಿದುಷಿ ಶುಭಶ್ರೀ ಅಡಿಗ ರವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮವು ನಡೆಯಿತು. ಪಕ್ಕವಾದ್ಯದಲ್ಲಿ ವಿದ್ವಾನ್  ಬಾಲಚಂದ್ರ ಭಾಗವತ್ – ಮೃದಂಗ, ವಿದ್ವಾನ್ ಮಾಧವಾಚರ್ – ತಬಲಾ ಮತ್ತು  ಮಾಸ್ಟರ್ ಕಾರ್ತಿಕ್ – ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು.

ಉಡುಪಿ ಪರ್ಯಾಯೋತ್ಸವದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಸಕಲ ಸಿದ್ಧತೆ..!

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜರಗುವ ಪ್ರಸಕ್ತ ಸಾಲಿನ ಪರ್ಯಾಯ ಮಹೋತ್ಸವದ ಹಿನ್ನೆಲೆ, ಜಿಲ್ಲೆಯ ಎಲ್ಲಾ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಹಾಗೂ ಪ್ರವಾಸಿ ಸ್ಥಳಗಳನ್ನು ದೀಪಾಲಂಕೃತಗೊಳಿಸುವುದರೊ೦ದಿಗೆ, ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕೊಠಡಿಗಳನ್ನು ಕಾಯ್ದಿರಿಸಿ, ಸ್ವಚ್ಛತೆ, ಸುರಕ್ಷತೆ ಕಾಪಾಡುವುದರೊಂದಿಗೆ ಜಿಲ್ಲೆಯ ಪ್ರಸಿದ್ಧ ಊಟ ಉಪಹಾರಗಳನ್ನು ಒದಗಿಸಿ, ಬರುವಂತ ಪ್ರವಾಸಿಗರನ್ನು ಸತ್ಕರಿಸಿ ಶ್ರೀ ಕೃಷ್ಣ ಮಠದ ಪರ್ಯಾಯೋತ್ಸವಕ್ಕೆ ಮೆರಗನ್ನು ಒದಗಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಅದ್ಧೂರಿ ಚಾಲನೆ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಹೊರಕಾಣಿಕೆ ಮೆರವಣಿಗೆಗೆ ಉಡುಪಿ ಸಂಸ್ಕೃತ ಕಾಲೇಜಿನ ಬಳಿ ಇಂದು ಚಾಲನೆ ನೀಡಲಾಯಿತು. ಮಠದ ದಿವಾನ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಹಾಗೂ ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಸಾಂಪ್ರದಾಯಿಕ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಸಂಸ್ಕೃತಿ ಕಾಲೇಜಿನ ಬಳಿಯಿಂದ ಆರಂಭಗೊಂಡ ಮೆರವಣಿಗೆ ರಥಬೀದಿಯ ಮೂಲಕ ಪುತ್ತಿಗೆ ಮಠಕ್ಕೆ ಸಾಗಿಬಂತು. ತಟ್ಟಿರಾಯ, ನಾಸಿಕ್ ಬ್ಯಾಂಡ್, […]