ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ: ಅ.23ರಂದು ಮಹಾನವಮಿ, ಅ.24ರಂದು ವಿಜಯೋತ್ಸವ ಆಚರಣೆ

ಸಿದ್ದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.23 ಸೋಮವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ (ರಥ ಬೀದಿ ಮತ್ತು ರಾಜಬೀದಿ), ಸಂಜೆ ಗಂಟೆ 5:30 ರಿಂದ 7:15 ರ ತನಕ ನೃತ್ಯಾಂಗಣ ನಾಟ್ಯಾಲಯ ಸಿದ್ದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅ.24 ಮಂಗಳವಾರ ಉದಯ ಪೂರ್ವ 6.05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ […]

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಅ.24ರಂದು ವಿಜಯದಶಮಿ ಆಚರಣೆ

ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು (ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟದ್ದು) ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.24 ರಂದು ಕ್ಷೇತ್ರದಲ್ಲಿ ವಿಜಯದಶಮಿ, ಕಲಶ ವಿಸರ್ಜನೆ ಆಚರಿಸಲಾಗುವುದು. ಅ.31 ರಂದು ಮಂಗಳವಾರ ಚಂಡಿಕಾಯಾಗ ಪೂರ್ಣಾಹುತಿ, ಮಹಾ ಅನ್ನಸಂತರ್ಪಣೆ ಜರುಗಲಿರುವುದು.

ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ: ಅ.23ರಂದು‌ ಮಹಾನವಮಿ, ಅ.24ರಂದು ವಿಜಯದಶಮಿ

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವವು ಅ.24 ರ ವರೆಗೆ ನಡೆಯಲಿದೆ. ಪ್ರತೀದಿನ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ನವರಾತ್ರಿ ಪೂಜೆ ನಡೆಯಲಿರುವುದು. ಕಾರ್ಯಕ್ರಮಗಳು: ಅ.21 ಶನಿವಾರ ಶ್ರೀ ಸೂಕ್ತ ಹೋಮ, ವನದುರ್ಗಾ ಹೋಮ, ಮಹಾಪೂಜೆ, ರಾತ್ರಿ ನವರಾತ್ರಿ ಪೂಜೆ. ಅ.22 ಆದಿತ್ಯವಾರ “ದುರ್ಗಾಷ್ಟಮಿ”, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ ನವರಾತ್ರಿ ಪೂಜೆ, ರಾತ್ರಿ ರಂಗಪೂಜೆ. ಅ.23 ಸೋಮವಾರ “ಮಹಾನವಮಿ”, ಸಾರ್ವಜನಿಕ ಚಂಡಿಕಾಯಾಗ, ಗಂಟೆ […]

ಉಡುಪಿ “ಬಳ್ಳಾಲ್ ಮೊಬೈಲ್ಸ್”ಗೆ ಬನ್ನಿ.. ಶುರುವಾಗಿದೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್”

ಉಡುಪಿ: ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದೆ. ಗ್ರಾಹಕರಿಗೆ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ & ವಿನ್ ಭರ್ಜರಿ ಕೊಡುಗೆ ಮತ್ತು ಗ್ರಾಹಕರಿಗೆ ಥೈಲ್ಯಾಂಡ್ ಪ್ರವಾಸ ಮಾಡುವ ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಜೊತೆಗೆ […]

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಕಾಪು: ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವನ್ನು ಅ.15ರಿಂದ ಅ.24ರ ವರೆಗೆ ಆಚರಿಸಲಾಗುವುದು ಹಾಗೂ ಅ.31 ಮಂಗಳವಾರ ಚಂಡಿಕಾಯಾಗ ಪೂರ್ಣಾಹುತಿ ಜರುಗಲಿರುವುದು. ಕಾರ್ಯಕ್ರಮಗಳ ವಿವರಗಳು: ತಾ.15/10/2023 ರಿಂದ ತಾ.23/10/2023 ರವರೆಗೆ ಪ್ರತಿ ದಿನ ಶ್ರೀದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ ತಾ.17/10/2023ನೇ ಮಂಗಳವಾರ ಕದಿರು ಕಟ್ಟುವುದು ತಾ.20/10/2023ನೇ ಶುಕ್ರವಾರ ಶಾರದಾ ಪೂಜೆ ತಾ.22/10/2023ನೇ ರವಿವಾರ ದುರ್ಗಾಷ್ಟಮಿ, ದುರ್ಗಾ ನಮಸ್ಕಾರ ಪೂಜೆ […]