ನ.1 ರಂದು ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ ನವೆಂಬರ್ 1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂಬ ಘೋಷ ವಾಕ್ಯವನ್ನು ಬರೆಯಬೇಕು. ಅಂದು ಬೆಳಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೊ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುತ್ತಿದ್ದು, ಆ […]

ನಾಳೆ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಅನ್ನಸಂತರ್ಪಣೆ

ಕಾಪು: ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಜರಗುವ ಚಂಡಿಕಾಯಾಗ ಪೂರ್ಣಾಹುತಿಯು ಅ. 31ರಂದು ನಡೆಯಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಪ್ರಾರ್ಥನೆ, 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, ಮಧ್ಯಾಹ್ನ 12ಗಂಟೆಗೆ ಅನ್ನಸಂತರ್ಪಣೆ, ಸಂಜೆ 3ಗಂಟೆಗೆ ದರ್ಶನ ಸೇವೆ ನಡೆಯಲಿದೆ ಎಂದು ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್‌ ಜಿ. ಶೆಣೈ ಮತ್ತು ಕಾಪು ಪೇಟೆಯ ಹತ್ತು ಸಮಸ್ತರ ಜಂಟಿ ಪ್ರಕಟನೆ ತಿಳಿಸಿದೆ

ಉಡುಪಿಯ ಜನತೆಗೆ ಇಲ್ಲಿದೆ ಸಿಹಿ ಸುದ್ದಿ: ಬಳ್ಳಾಲ್ ಮೊಬೈಲ್ಸ್ ನಲ್ಲಿ ಪ್ರತಿ ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಬಹುಮಾನ

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು, ಗ್ರಾಹಕರಿಂದ ಒಳ್ಳೆಯ ಬೆಂಬಲ ದೊರಕಿದೆ. ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಳ್ಳಾಲ್ ಮೊಬೈಲ್ಸ್ ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ & ವಿನ್ ಭರ್ಜರಿ […]

ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜುನಲ್ಲಿ ಇಂದು ‘ರೇಡಿಯೋ ಕುಂದಾಪ್ರ’ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ

ಕುಂದಾಪುರ: ಕುಂದಾಪುರ ಭಂಡಾರ್ ಕಾರ್ಸ ಕಲಾ ಮತ್ತು ವಿಜ್ಞಾನ ಕಾಲೇಜುನಲ್ಲಿ ರೇಡಿಯೋ ಕುಂದಾಪ್ರ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ ಅ.27 ಮಧ್ಯಾಹ್ನ 3 ಗಂಟೆಗೆ ಆರ್.ಎನ್. ಶೆಟ್ಟಿ ಹಾಲ್, ಭಂಡಾರ್ ಕಾರ್ಸ ಕಾಲೇಜುನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀ ಎ.ಎಸ್.ಎನ್. ಹೆಬ್ಬಾರ್ ಮಾಜಿ ಅಧ್ಯಕ್ಷರು, ಕ.ಸಾ.ಪ ಉಡುಪಿ ಜಿಲ್ಲೆ. ಸಮಾರಂಭ ಉದ್ಘಾಟನೆ: ಶ್ರೀ ಕೆ. ಶಾಂತರಾಮ ಪ್ರಭು ಹಿರಿಯ ಸದಸ್ಯರು, ವಿಶ್ವಸ್ಥ ಮಂಡಳಿ ಲಾಂಛನ ಬಿಡುಗಡೆ: ಶ್ರೀ ರವಿ ಬಸ್ರೂರು ಪ್ರಖ್ಯಾತ ಚಲನಚಿತ್ರ ಸಂಗೀತ […]

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ದಸರಾ ವೈಭವದ ಶೋಭಾಯಾತ್ರೆ: ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಜರಗಿದ ವೈಭವದ ಶೋಭಾ ಯಾತ್ರೆಗೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮಂಗಳವಾರ ಸಂಜೆ ಗಣ್ಯರ ಜೊತೆಗೂಡಿ ಚಾಲನೆ ನೀಡಿದರು. ಪ್ರಧಾನ ಅರ್ಚಕ ವೇ| ಮೂ|ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾ ಮಂಗಳಾರತಿ ಬೆಳಗಿ, ವಿಸರ್ಜನಾ ಪೂಜೆ ನಡೆಸಿದರು. ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ […]