ಫುಡ್ ಡೆಲಿವರಿಗೂ ಬಂತು‌ 15 ಕಿ.ಮೀ ವೇಗದಲ್ಲಿ ಸಂಚರಿಸುವ ರೋಬೋ ಶ್ವಾನ!

ರೋಬಾಟ್​ಗಳು ಈಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಹೊಸ ಪ್ರಯೋಗವೊಂದರಲ್ಲಿ ರೋಬೋ ಶ್ವಾನವನ್ನು ಬಳಸಿ ಫುಡ್ ಡೆಲಿವರಿ ಮಾಡುವಲ್ಲಿ ಆಹಾರ ವಿತರಣಾ ಕಂಪನಿ ಯಶಸ್ವಿಯಾಗಿದೆ. ಡಚ್ ಮೂಲದ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪನಿ ಜಸ್ಟ್ ಈಟ್ ಟೇಕ್​ಅವೇ ಡಾಟ್ ಕಾಮ್ ಸ್ವಿಟ್ಜರ್​ಲ್ಯಾಂಡ್​ನ ರೋಬೋಟಿಕ್ಸ್ ಕಂಪನಿಯ ಸಹಯೋಗದೊಂದಿಗೆ ಸ್ವಿಟ್ಜರ್​ಲ್ಯಾಂಡ್​ನ ಜ್ಯೂರಿಚ್​ನಲ್ಲಿ ಪ್ರಾಯೋಗಿಕವಾಗಿ ಫುಡ್ ಡೆಲಿವರಿ ಆರಂಭಿಸಿದೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಈ ರೋಬೋ ಶ್ವಾನಗಳ ಕಾಲುಗಳಿಗೆ ಚಕ್ರ ಅಳವಡಿಸಲಾಗಿದ್ದು, ಇವು ಗಂಟೆಗೆ 15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ ಮತ್ತು […]

ಮೈ ಮನಸ್ಸಿನ ನೆಮ್ಮದಿಗೆ ಎನರ್ಜಿ ಕೊಡುತ್ತೆ ಮನೆಯ ಒಳಾಂಗಣ ವಿನ್ಯಾಸ: ಇಂಟೀರಿಯರ್ ವಿನ್ಯಾಸದಲ್ಲಿದೆ ಆರೋಗ್ಯದ ಗುಟ್ಟು!

ಲೇಖನ : ಹೇಮಾ ನಿರಂಜನ್ ವೇಗವಾಗಿ ಬದಲಾಗುತ್ತಿರುವ ಈಗಿನ ಜಗತ್ತಿನಲ್ಲಿ ಮನೆಗಳು ಆರೋಗ್ಯ ಮತ್ತು ಶಾಂತಿ ಉತ್ತೇಜಿಸುವ ಸುರಕ್ಷಿತ ಸ್ಥಳಗಳಾಗಿರಬೇಕು. ಇದಕ್ಕೆ ಒಳಾಂಗಣ ವಿನ್ಯಾಸವು ಪೂರಕವಾಗಿರಬೇಕು. ಇಂಥ ಆರೋಗ್ಯದಾಯಕ ವಾತಾವರಣ ನಿರ್ಮಿಸಲು ಅಗತ್ಯವಿರುವ ಅಂಶಗಳು ಹೀಗಿವೆ. ಸ್ಮಾರ್ಟ್ ಸಂಗ್ರಹಣೆಮನೆ ಸ್ವಚ್ಛವಾಗಿದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ. ಯೂನಿವರ್ಸಿಟಿ ಆಫ್ ಕ್ಯಾಲಿ ಫೋರ್ನಿಯಾ ಸಂಶೋಧನೆಯ ಪ್ರಕಾರ, ಇದರಿಂದ ಕಾರ್ಟಿಸಾಲ್ ಹಾರ್ಮೋನ್‌ನ ಉತ್ಪಾದನೆ ಶೇ. 27ರಷ್ಟು ಹೆಚ್ಚುತ್ತದೆ. ಇದಕ್ಕಾಗಿ ಮನೆಯಲ್ಲಿ ಸ್ಮಾರ್ಟ್ ಸ್ಟೋರೇಜ್ ಪರಿಹಾರಗಳನ್ನು ಕಂಡುಕೊಳ್ಳಬೇಕು. ಅಂದರೆ ಫುಶ್ ಟು ಓಪನ್ ಕ್ಯಾಬಿನೆಟ್, […]

ಧರ್ಮಸ್ಥಳ:ಎಸ್ ಐ ಟಿ ತನಿಖೆಯ ದಿಕ್ಕು ತಪ್ಪಿಸುತ್ತಿದೆಯಾ ಮಾಧ್ಯಮಗಳು? ಮಾಧ್ಯಮಗಳೇ ಜವಾಬ್ದಾರಿ ಮರೆತು ಗಾಳಿ ಸುದ್ದಿಗೆ ಮಣೆ ಹಾಕಿದವಾ?

-ವಿಶೇಷ ಬರಹ ಧರ್ಮಸ್ಥಳ ಅಸಹಜ ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿನ ಕುರಿತು ಸರಕಾರ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಯುತ್ತಿದೆ. ಸೋಮವಾರ ಸದನದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್, ಎಸ್ ಐಟಿ ನೀಡಿದ ಒಂದಷ್ಟು ವರದಿಯನ್ನೂ ವಿವರಿಸಿದ್ದಾರೆ. ಎರಡು ಕಡೆಗಳಲ್ಲಿ ಅಸ್ಥಿಪಂಜರ, ಮೂಳೆ ಸಿಕ್ಕಿರುದಾಗಿ ಮತ್ತು ಮಣ್ಣಿನಲ್ಲಿ ಆಸಿಡ್ ಅಂಶವಿದ್ದು ಕೆಲವೊಂದು ಮೂಳೆಗಳು ಕರಗಿ ಹೋಗುವ ಸಾಧ್ಯತೆ ಇದ್ದು ಮಣ್ಣನ್ನೂ ಪರೀಕ್ಷೆಗೆ ಕಳಿಸಲಾಗಿದೆ. ಯಾವುದೇ ಕಾರಣಕ್ಕೂ ಸರಕಾರ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸುದಿಲ್ಲ,ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ […]

ಸ್ವಾತಂತ್ರ್ಯ ದಿನವೆಂದರೆ ಬಾಲ್ಯ ನೆನಪಾಗುತ್ತದೆ: ಈಗಲೂ ಕಾಡುವ ಆ ಸಂಭ್ರಮದ ಕ್ಷಣಗಳು:

-ಪ್ರಗತಿ ಎಸ್. ಸ್ವಾತಂತ್ರ್ಯ ದಿನಾಚರಣೆ ಬೆಳಿಗ್ಗೆಯಂತು ಎಲ್ಲರ ಮುಖದಲ್ಲೂ ಎಲ್ಲಿಲ್ಲದ ಸಂಭ್ರಮವೂ ಸಂಭ್ರಮ. ಸಮವಸ್ತ್ರ ಬೂಟ್ ಧರಿಸಿ ಕೈಯಲ್ಲಿ ಒಂದು ಬಾವುಟ ಹಿಡಿದು ನಡೆಯುತ್ತಿದ್ದೆವು ಶಾಲೆಯ ಕಡೆಗೆ. ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ.ಆದರೂ ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರೂ ಮುಗಿಯುತ್ತಿರಲಿಲ್ಲ. […]

ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಾವು ದೇಶಕ್ಕೆ ಕೊಡುವ ದೊಡ್ಡ ಗೌರವ: ರಶ್ಮಿತಾ ಬರೆದ ಸ್ವಾತಂತ್ರ್ಯ ದಿನದ ವಿಶೇಷ ಬರಹ

ಆಗಸ್ಟ್ 15 ಇಡೀ ಭರತ ಖಂಡದಲ್ಲಿರೋ  ನಾವೆಲ್ಲರೂ ಒಂದೇ ಅನ್ನುವ ಐಕ್ಯತಾ ಭಾವದಿ ಸಂಭ್ರಮಿಸುವ ದೇಶದ ಹೆಮ್ಮೆಯ ದಿನ. ಎಷ್ಟೋ ಹೋರಾಟಗಾರರ ತ್ಯಾಗದ ಗುರುತೇ ಈ ಸ್ವಾತಂತ್ರ್ಯ. ಸ್ವಾತಂತ್ರ್ಯ ಅನ್ನುವುದು ಕೇವಲ ಒಂದು ಪದವಲ್ಲ ಬದಲಿಗೆ ಎಷ್ಟೋ ಜನರ ನೆತ್ತರ ಕುರುಹು. ಒಗ್ಗಟ್ಟು ಭ್ರಾತೃತ್ವ  ಶಾಂತಿ ದೇಶ ಪ್ರೇಮದ ಸಂದೇಶ ಸಾರುವ ಭಾರತದ ಹೆಮ್ಮೆಯ ಹಬ್ಬ. ಬಾಲ್ಯದ ದಿನಗಳಲ್ಲಿ  ಸ್ವಾತಂತ್ರ್ಯ ದಿನಾಚರಣೆ ಅಂದರೆ ಕೇವಲ ಮೆರವಣಿಗೆ ಬಹುಮಾನ ವಿತರಣೆ ಸಿಹಿ ತಿನಿಸು ಬರಿ ಇಷ್ಟಕ್ಕೆ ಮನಸು ಸೀಮಿತವಾಗಿತ್ತು.ಆದರೆ […]