14ನೇ ವರ್ಷದ ಜಪ್ಪಿನಮೊಗರು “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಫೆ.10 ರಂದು ನಡೆದ 14ನೇ ವರ್ಷದ ಜಪ್ಪಿನಮೊಗರು “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 05 ಜೊತೆ ಹಗ್ಗ ಹಿರಿಯ: 13 ಜೊತೆ ನೇಗಿಲು ಹಿರಿಯ: 28 ಜೊತೆ ಹಗ್ಗ ಕಿರಿಯ: 16 ಜೊತೆ ನೇಗಿಲು ಕಿರಿಯ: 70 ಜೊತೆ ಒಟ್ಟು ಕೋಣಗಳ ಸಂಖ್ಯೆ: 138 ಜೊತೆ ಕನೆಹಲಗೆ: (ಸಮಾನ ಬಹುಮಾನ) ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: […]

ಫೆಬ್ರವರಿ 11: ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದಲ್ಲಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಕಾಲಮಿತಿ ಯಕ್ಷಗಾನ ಪ್ರದರ್ಶನ

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ಪ್ರೋತ್ಸಾಹದೊಂದಿಗೆ ಮಂಗಳೂರಿನಲ್ಲಿ ದ್ವಿತೀಯ ಬಾರಿಗೆ ಇದೇ ಬರುವ ಫೆಬ್ರವರಿ 11 ಭಾನುವಾರ ದಂದು ಸಂಜೆ 4.30 ರಿಂದ ರಾತ್ರಿ 10 ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾನಕ ಪ್ರದರ್ಶನವು ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ […]

ಉಡುಪಿ: ಇಂದು ಮಿಷನ್ ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಉದ್ಘಾಟನೆ.

ಉಡುಪಿ, ಫೆ.10: ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಹೊಸ ಕ್ಯಾಂಪಸ್ “ಲೋಂಬಾರ್ಡ್ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈಯನ್ಸ್” ಫೆ.10 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನೂತನ ಸಂಸ್ಥೆಯನ್ನು ರೆ.ಫಾ.ಹೇಮಚಂದ್ರ ಕುಮಾರ್ ಬಿಷಪ್ ಅವರು ಉದ್ಘಾಟಿಸಲಿದ್ದಾರೆ. ಲೊಂಬಾರ್ಡೋ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುನಿಲ್ ಜತ್ತನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ ಎಂ, ಕಿನ್ನಿಮುಲ್ಕಿ ವಾರ್ಡ್‍ನ […]

ಫೆ‌.11: ಪೆರ್ಡೂರು ಬಂಟರ ಸಂಘದ ಸಮುದಾಯ ಭವನ ಉದ್ಘಾಟನೆ

ಉಡುಪಿ: ಪೆರ್ಡೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಬಂಟರ ಸಮುದಾಯ ಭವನದ ಉದ್ಘಾಟನಾ‌ ಕಾರ್ಯಕ್ರಮ ಫೆ.11ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಬಂಟರ ಸಂಘ ಪೆರ್ಡೂರು ವಲಯ ಇದರ ಅಧ್ಯಕ್ಷ ಶಾಂತಾರಾಮ ಸೂಡ ಕೆ.‌ ತಿಳಿಸಿದ್ದಾರೆ. ಗುರುವಾರ ಪೆರ್ಡೂರಿನ ಬಂಟರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ರಿಂದ ಬಂಟರ ಭವನದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಮುದಾಯದ ರಾಮಕೃಷ್ಣ ಗ್ರೂಪ್ ಆಫ್ ಹೊಟೇಲ್ ನ ಸುಬ್ಬಯ್ಯ ಶೆಟ್ಟಿ, ಮಾಹೆ […]

ಉಡುಪಿ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ಶತಕಂಠ ಗಾಯನ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ಸುಗುಣಶ್ರೀ ಭಜನಾ ಮಂಡಳಿ, ಮಣಿಪಾಲ ಹಾಗೂ ರತ್ನಸಂಜೀವ ಕಲಾಮಂಡಲ ಸರಳೇಬೆಟ್ಟು ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಮತ್ತು ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ಫೆ.9 ರಂದು ಮಧ್ಯಾಹ್ನ 3 ಗಂಟೆಯಿಂದ ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರ ಆರಾಧನಾಂಗವಾಗಿ ಶತಕಂಠ ಗಾಯನ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಲಿದೆ. ರಾಜಾಂಗಣದಲ್ಲಿ 100ಕ್ಕೂ ಮಿಕ್ಕಿ ಗಾಯಕರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ […]