ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಗತಿ ಆರಂಭ

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಗತಿ ಆರಂಭ ಕಳೆದ 14 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯನ್ನು ವಿಧ್ಯುಕ್ತವಾಗಿ ಆರಂಭವಾಯಿತು. ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎನ್.ವಿ. ಕಾಮತ್ ಅವರು ಮಾತ್ರವಲ್ಲದೇ ಅತಿಥಿಗಳಾಗಿ ಶ್ರೀಮತಿ ಚಂದ್ರಕಲಾ, ಶ್ರೀಮತಿ ಚೇತನಾ ಅವರೂ ಭಾಗವಹಿಸಿ ದೀಪ ಪ್ರಜ್ವಲನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾ ಅವರು ಸಂಸ್ಥೆಯು ನಡೆದು ಬಂದ […]
ವೈದ್ಯರಿದ್ದರೆ ಬದುಕು ಆರೋಗ್ಯದ ನಂದನವನ: “ಡಾಕ್ಟರ್ಸ್ ಡೇ” ವಿಶೇಷ ಬರಹ

ಇಂದು ವೈದ್ಯರಿಲ್ಲದೇ ಇರುತ್ತಿದ್ದರೆ ನಮ್ಮ ಆರೋಗ್ಯದ ಸ್ಥಿತಿಗತಿಯನ್ನು ಊಹಿಸುವುದೇ ಅಸಾಧ್ಯ. ಇಂದು ವೈದ್ಯರಿಂದಲೇ ನಮ್ಮ ಬದುಕು ಖುಷಿ ಮತ್ತು ನೆಮ್ಮದಿಯ ನಂದನವನವಾಗಿದೆ. ಆರೋಗ್ಯವನ್ನು ಮೀರಿದ ಐಶ್ವರ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಆರೋಗ್ಯವೊಂದೇ ದೊಡ್ಡ ಸಂಪತ್ತು. ಅಂತಹ ಸಂಪತ್ತನ್ನು ನಮಗೆ ನೀಡುವವರೇ ವೈದ್ಯರು.ಜುಲೈ 1 ರಾಷ್ಟ್ರೀಯ ವೈದ್ಯರ ದಿನದ ಸಂಭ್ರಮ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ ಸಲುವಾಗಿ ಈ […]
ಉಡುಪಿಯಲ್ಲಿ ‘ಸೂರ್ಯ ಭಾಗ್ಯ’: ಅವಿವಾ ಸೋಲಾರ್ ಸಲ್ಯೂಷನ್‌ನ ಹೊಸ ಹೆಜ್ಜೆ!

ಸೋಲಾರ್ ಕ್ಷೇತ್ರದಲ್ಲಿ ಕ್ರಾಂತಿ ತಂದ ಅವಿವಾ ಸ್ಮಾರ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದೀಗ ಉಡುಪಿಯಲ್ಲಿ ‘ಸೂರ್ಯ ಭಾಗ್ಯ’ ಎಂಬ ಹೊಸ ವ್ಯಾಪಾರ ಮತ್ತು ಸೇವಾ ಮಳಿಗೆಯ ಮೂಲಕ ಸಾರ್ವಜನಿಕರ ಸೇವೆಗೆ ಇಳಿದಿದೆ. 2005ರಲ್ಲಿ ಸ್ಥಾಪಿತವಾಗಿ 2015ರಲ್ಲಿ ಸಂಘಟಿತ ಸಂಸ್ಥೆಯಾದ ಈ ಕಂಪನಿ ಬೆಂಗಳೂರು ಆಧಾರಿತ ISO 9001:2015 ಹಾಗೂ ISO 14001:2015 ಪ್ರಮಾಣೀಕೃತ ಸಂಸ್ಥೆಯಾಗಿದ್ದು, ವಿದ್ಯುತ್ ಮತ್ತು ಎಂಬೆಡೆಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಸ್ಥಳೀಯ ವಿನ್ಯಾಸ ಮತ್ತು ತಯಾರಿಕೆಯಲ್ಲಿ ನಿಪುಣತೆ ಹೊಂದಿದೆ. ಅವಿವಾ ವಿವಿಧ ಗ್ರಾಹಕ, ಕೈಗಾರಿಕಾ ಮತ್ತು […]
ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ ಒಂದೊಂದೇ […]
ಉಡುಪಿ ಏಂಜಲ್ಸ್ ಜುಂಬಾ ವತಿಯಿಂದ ಮಾ.30 ರಂದು ಬೆಲ್ಲಿ ಡಾನ್ಸ್ ಕಾರ್ಯಾಗಾರ

ಉಡುಪಿ ಯ ಸಿಟಿ ಬಸ್ ನಿಲ್ದಾಣ ಬಳಿಯ ರಾಜ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಏಂಜೆಲ್ಸ್ ಜುಂಬಾ ಫಿಟ್ನೆಸ್ನಲ್ಲಿ ,ಬೆಲ್ಲಿ ಡಾನ್ಸರ್ ಹಾಗೂ ಮಿಸ್ ಟೀನ್ ವಿನ್ನರ್ 2023 ಖ್ಯಾತಿಯ ಸಿಂಚನ ಪ್ರಕಾಶ್ ಅವರಿಂದ ಬೆಲ್ಲಿ ಡಾನ್ಸ್ ಕಾರ್ಯಗಾರ ಮಾ.30 ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ .ಆಸಕ್ತರು ಹೆಚ್ಚಿನ ಮಾಹಿತಿಗಾಗಿ :9380135408,9380323108ಸಂಪರ್ಕಿಸಬಹುದು.