ಕಾಪು: ಕುಸಿದು ಬಿದ್ದು ಮೃತ್ಯು.

ಕಾಪು: ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿ ಒಬ್ಬರು ಮೃತ ಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಮೃತ ಪಟ್ಟವರು ಸದಾನಂದ ಶೀನ (64). ಸದಾನಂದ ಶೀನ ಅವರು ನಿವೃತ್ತ ಇನ್ ಕಮ್ ಟ್ಯಾಕ್ಸ್ ನ ಉದ್ಯೋಗಿಯಾಗಿದ್ದ ಅವರು ಕಾಪು ಎಸ್‌ಬಿಐ ಹಣ ಡ್ರಾ ಮಾಡಲು ಬಂದಿದ್ದು ಅಲ್ಲಿ ಎಟಿಎಂ ಬಳಿ ನಿಂತಿದ್ದಾಗ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೇ-ನಲ್ಡ್ ಯೋಜನೆಯಡಿ ವಿವಿಧ ಉಪಯೋಜನೆ: ಅರ್ಜಿ ಅಹ್ವಾನ.

ಉಡುಪಿ: ಪ್ರಸಕ್ತ ಸಾಲಿನಲ್ಲಿ ದೀನ್ ದಯಾಳ್ ಅಂತ್ಯೋದಯ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ವೈಯಕ್ತಿಕ ಹಾಗೂ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಜಿಲ್ಲೆಯ ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ ಹಾಗೂ ಕಾಪು ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಡೇ-ನಲ್ಡ್ ಅಭಿಯಾನದಡಿ ಸ್ವ-ಉದ್ಯೋಗ, ಗುಂಪು ಉದ್ಯೋಗ, ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್, ಕೌಶಲ್ಯ ಉದ್ಯಮಶೀಲತೆ ತರಬೇತಿ, ಸ್ವ-ಸಹಾಯ ಗುಂಪುಗಳ […]
ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ತಲಾ 01 ರಂತೆ “ನಗರ ಪುನರ್ವಸತಿ ಕಾರ್ಯಕರ್ತರ” (ಯು.ಆರ್.ಡಬ್ಲ್ಯೂ) ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 01 ರಂತೆ “ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ” (ವಿ.ಆರ್.ಡಬ್ಲ್ಯೂ) ನೇಮಕಾತಿಗಾಗಿ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿ.ಆರ್.ಡಬ್ಲ್ಯೂ ನೇಮಕಾತಿಗಾಗಿ ಬಾಕಿ ಇರುವ ಗ್ರಾಮ ಪಂಚಾಯತ್‌ಗಳು:ಉಡುಪಿ ತಾಲೂಕಿನ ಕಡೆಕಾರು, ಕೆಮ್ಮಣ್ಣು ಹಾಗೂ ಪೆರ್ಡೂರು. ಬ್ರಹ್ಮಾವರ ತಾಲೂಕಿನ 38 ಕಳತ್ತೂರು […]
ಕೋಸ್ಟಲ್ ಸೌಂದರ್ಯ ಸ್ಪರ್ಧೆ – 2024 ನಾಗರಿಕ ಸಮಾಜ ಮಹಿಳೆಯರ ಬಾಹ್ಯ ಸೌಂದರ್ಯಕ್ಕೆ ಕೊಡುವ ಗೌರವ ಅಂತರಿಕ ಸೌಂದರ್ಯಕ್ಕೆ ಕೊಡುವಂತಾಗಬೇಕು:- ಡಾ! ನಿಕೇತನ

ಉಡುಪಿ ಜೂ 15 : ಟಿ.ಎಸ್.ಆರ್ ಮೋಡೆಲ್ ಮ್ಯಾನೇಜ್ಮೆಂಟ್ ಗ್ರೂಪ್ ನ ವತಿಯಿಂದ ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್ ಹಾಗೂ ಆಭರಣ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಟೀನ್ / ಮಿಸ್ / ಮಿಸಸ್ ಕೋಸ್ಟಲ್ – 2024 ಸೌಂದರ್ಯ ಸ್ಪರ್ಧೆ ಉಡುಪಿಯ ಎಸ್ಸೆನ್ಸಿಯ ಮಣಿಪಾಲ್ ಇನ್ ನ ಗ್ರಾಂಡ್ ಮಿಲಿಯಮ್ ಸಭಾಂಗಣದಲ್ಲಿ ಜರುಗಿತು.ಅಂಬಲಪಾಡಿಯ ಜಿ.ಎಸ್ ಶ್ಯಾಮಿಲಿ ಇನ್ಪ್ರಾದ ನಿರ್ದೇಶಕಿ ಶ್ಯಾಮಿಲಿ ಜಿ.ಶಂಕರ್ ಉದ್ಘಾಟಿಸಿ, “ಕರಾವಳಿಯ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು ಟಿ.ಆರ್.ಎಸ್ ಮೋಡೆಲ್ ಮ್ಯಾನೇಜ್ಮೆಂಟ್ ಕಾರ್ಯ ಶ್ಲಾಘನೀಯ. ಭವಿಷ್ಯದಲ್ಲಿ […]
ಉಡುಪಿಯ ಪ್ಲೇಸ್ ಮೆಂಟ್ ಆಫೀಸಿನಲ್ಲಿ ಟೆಲಿಕಾಲರ್ ಮತ್ತು ಆಫೀಸ್ ಸ್ಟಾಫ್ ಹುದ್ದೆಗೆ ಬೇಕಾಗಿದ್ದಾರೆ
