ಕಾರ್ಕಳ ಅತ್ಯಾಚಾರ ಪ್ರಕರಣ: ಡ್ರಗ್ಸ್ ಬಗ್ಗೆ ರಕ್ತ ಪರೀಕ್ಷೆಯಲ್ಲಿ ಯುವತಿಯ ವರದಿ ಪಾಸಿಟಿವ್, ಆರೋಪಿಗಳ ವರದಿ ನೆಗೆಟಿವ್: ಉಡುಪಿ ಎಸ್ಪಿ ಡಾ.ಅರುಣ್ ಕೆ.

ಕಾರ್ಕಳ, ಆ.25: ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವತಿಯ ಬ್ಲಡ್ ಟೆಸ್ಟ್ ರಿಪೋರ್ಟ್ ನಲ್ಲಿ ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದ್ದು, ಪ್ರಥಮ ಆರೋಪಿಯಾದ ಅಲ್ತಾಫ್ ಬ್ಲಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ. ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿಯ ಬ್ಲಡ್ ರಿಪೋರ್ಟ್ ನೆಗೆಟಿವ್ ಎಂದು ಬಂದಿರುತ್ತದೆ. ಯುವತಿಯ ಬ್ಲಡ್ ಸ್ಯಾಂಪಲ್ ನಲ್ಲಿ ಮಾದಕ ದ್ರವ್ಯ ಪಾಸಿಟಿವ್ ಬಂದಿರುವ ಬಗ್ಗೆ ಆರೋಪಿ ಅಲ್ತಾಫ್ ನನ್ನು ಕಷ್ಟಡಿಗೆ […]

ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ಸಿದ್ಧತೆ: ಪೊಡವಿಗೊಡೆಯನ ನಾಡಲ್ಲಿ ಹರ್ಷೋದ್ಗಾರ.

ಉಡುಪಿ- ಮಂಗಳೂರು: ಇಂದು ಕರಾವಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಸಿದ್ದತೆ ವೈಭವದಿಂದ ನಡೆಯುತ್ತಿದ್ದು, ಅಷ್ಟಮಿ ಸಂಭ್ರಮಾಚರಣೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ದತೆ ನಡೆದಿವೆ. ಹಬ್ಬದ ಹರುಷಕ್ಕೆ ಕ್ಷಣಗಣನೆ: ದಕ್ಷಿಣ ಕನ್ನಡದಲ್ಲಿ ಅಷ್ಟಮಿಗೆ ಮೂಡೆ/ಕೊಟ್ಟಿಗೆ/ ಗುಂಡ ತಿಂಡಿಗೆ ಎಲೆ ಕಟ್ಟುವುದು, ದೇವರ ಅಲಂಕಾರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದೆ. ನಗರದ ಕಾರ್ ಸ್ಟ್ರೀಟ್ ನಲ್ಲಿ ಮಹಿಳೆಯರು ಮೂಡೆ, ಕೊಟ್ಟಿಗೆ, ಗುಂಡ ಎಲೆ ಕಟ್ಟಿ ಮಾರಿದರೆ, ಘಟ್ಟದ ಮೇಲಿನಿಂದ ಬಂದ ವ್ಯಾಪಾರಿಗಳು ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ. […]
ಅತ್ಯಾಚಾರ ಪ್ರಕರಣ: ಇಡೀ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತ ಕೃತ್ಯ; ಈ ಕೃತ್ಯದಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಗ್ರಹ

ಉಡುಪಿ: ಕಾರ್ಕಳದಲ್ಲಿ ನಡೆದ ಓರ್ವ ಹಿಂದೂ ಸಹೋದರಿಯ ಅತ್ಯಾಚಾರ ಪ್ರಕರಣ ಇಡೀ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತದ್ದು ಈ ರೀತಿಯ ಪ್ರಕರಣಗಳು ಉತ್ತರ ಭಾರತದಲ್ಲಿ ನಮಗೆ ನೋಡಲು ಸಿಗುವುದಿದ್ದರೂ ಕೂಡ, ಇಂತಹ ಒಂದು ಪ್ರವೃತ್ತಿ ಅದರಲ್ಲೂ ಕ್ರೂರಿ ಯುವಕರಿಗೆ ಇಂತಹ ದುಷ್ಕೃತ್ಯ ಮಾಡುವ ಯೋಚನೆ ಬರಬೇಕಾದರೆ ಅವರಿಗೆ ಕಾನೂನಿನ ಭಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕುಕೃತ್ಯಗಳು ಮುಂದೆ ನಡೆಯದಂತೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಾರ್ಯೋನ್ಮುಖವಾಗಬೇಕು ಮತ್ತು ಕುಕೃತ್ಯದಲ್ಲಿ ಭಾಗಿಯಾದಂತಹ ಕ್ರೂರಿ ಯುವಕರಿಗೆ ಗಲ್ಲು […]
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮ.

ಕಾರ್ಕಳ: ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ ಶೆಟ್ಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಶು ವೈದ್ಯರಾದ […]