ಮಲ್ಪೆಯಲ್ಲಿ ಮೀನುಗಾರಿಕೆ ಇಲಾಖಾ ಅಧಿಕಾರಿಗಳ ಸಭೆ: ಶಾಸಕ ಯಶ್ ಪಾಲ್ ಭಾಗಿ

ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ ಇಂದು‌ ಶಾಸಕ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ ಮೀನುಗಾರ ಸಂಘಟನೆಗಳಿಗೆ ನೀಡುವ ಬಗ್ಗೆ ಮಾರ್ಗಸೂಚಿ ತಯಾರಿಕೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ […]

ಪ್ರಧಾನಿ ಮೋದಿಯವರಿಂದ 70,000 ನೇಮಕಾತಿ ಪತ್ರ ವಿತರಣೆ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು 10:30 ಕ್ಕೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಯೋಗಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸುಮಾರು 70,000 ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತವಾಗಿ ಮೊದಲೇ ಪ್ರಕಟಣೆ ಹೊರಡಿಸಿ ತಿಳಿಸಿತ್ತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 70 ಸಾವಿರ ಜನರಿಗೆ ಪಿಎಂ ನರೇಂದ್ರ ಮೋದಿ ಅವರು ‘ನೇಮಕಾತಿ ಪತ್ರ’ವನ್ನು ವರ್ಚುಯಲ್​ ವೇದಿಕೆಯಲ್ಲಿ ವಿತರಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿಯವರು ನೇಮಕಗೊಂಡವರನ್ನು ಉದ್ದೇಶಿಸಿ […]

ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿ ಒರಾಕಲ್ ಸಂಸ್ಥಾಪಕ ಬಿಲ್​ಗೇಟ್ಸ್​​​​​ ಹಿಂದಿಕ್ಕಿ ಪಟ್ಟಕ್ಕೇರಿದ ಲ್ಯಾರಿ ಎಲಿಸನ್

ನ್ಯೂಯಾರ್ಕ್ (ಅಮೆರಿಕ):ಇದೇ ಲಾಭದ ಕಾರಣದಿಂದ ಅವರು ಸದ್ಯ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒರಾಕಲ್ (Oracle) ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ಕೃತಕ ಬುದ್ಧಿಮತ್ತೆಯ ಜನಪ್ರಿಯತೆಯ ಲಾಭ ಪಡೆಯುತ್ತಿದ್ದಾರೆ.ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಎಲಿಸನ್ ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದು, 129.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ […]

ವಾಟ್ಸಾಪ್​ನಿಂದ ಮೆಸೇಜ್​ ಎಡಿಟಿಂಗ್ ಆಪ್ಶನ್​ : ಹೊಸ ಫೀಚರ್​

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್​ ತನ್ನ ಬಳಕೆದಾರರಿಗೆ ಮೋಜಿನ ಅನುಭವವನ್ನು ನೀಡಲು ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಈಗ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಕೆಲವು ಬೀಟಾ ಪರೀಕ್ಷಕರಿಗೆ ಮೆಸೇಜ್​ ಎಡಿಟಿಂಗ್ ಫೀಚರ್ ಅನ್ನು ಪ್ರಸ್ತುತ ಪಡಿಸಿದೆ. ಅದರ ಸಹಾಯದಿಂದ, ಬಳಕೆದಾರರು ಕಳುಹಿಸಿದ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ. ಇದೀಗ ಈ ವೈಶಿಷ್ಟ್ಯವನ್ನು ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ತರಲಾಗಿದೆ. ಮುಂಬರುವ ಅಪ್​ಡೇಟ್​ಗಳೊಂದಿಗೆ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಕಂಪನಿಯು ಮೇ […]

ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನ

ಉಡುಪಿ : ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯು ಅನುಷ್ಠಾನಗೊಂಡಿದ್ದು, 193 ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 25 ಪಂಚಾಯತ್ ವ್ಯಾಪ್ತಿಗಳಾದ ಹಾರಾಡಿ, ಚಾಂತಾರು, ವರಂಗ, ಬಡಾ, ಕಟಪಾಡಿ, ಪಡುಬಿದ್ರಿ, ಶಿರ್ವ, ಬೆಳ್ಮಣ್, ಬಸ್ರೂರು, ನಿಟ್ಟೆ, ಕುಕ್ಕುಂದೂರು, ಕಾಳಾವರ, ಅಮಾಸೆಬೈಲು, ಕೋಟೇಶ್ವರ, ಗಂಗೊಳ್ಳಿ, ತೆಂಕನಿಡಿಯೂರು, ಪೆರ್ಡೂರು, ಅಲೆವೂರು, ಉದ್ಯಾವರ, ಆರೂರು, ಕಾಂತಾವರ, ನಂದಳಿಕೆ, ಶಿರ್ಲಾಲು, ಯಡಮೊಗೆ ಹಾಗೂ ಬಳ್ಕೂರು ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು, ಸದರಿ ಬಾಕಿ ಕೇಂದ್ರಗಳ ಫ್ರಾಂಚೈಸಿ ಪಡೆಯಲು ಅರ್ಹ ಆಸಕ್ತ ಸಾರ್ವಜನಿಕರಿಂದ […]