ವಾಟ್ಸಾಪ್​ನಿಂದ ಮೆಸೇಜ್​ ಎಡಿಟಿಂಗ್ ಆಪ್ಶನ್​ : ಹೊಸ ಫೀಚರ್​

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್​ ತನ್ನ ಬಳಕೆದಾರರಿಗೆ ಮೋಜಿನ ಅನುಭವವನ್ನು ನೀಡಲು ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಈಗ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಕೆಲವು ಬೀಟಾ ಪರೀಕ್ಷಕರಿಗೆ ಮೆಸೇಜ್​ ಎಡಿಟಿಂಗ್ ಫೀಚರ್ ಅನ್ನು ಪ್ರಸ್ತುತ ಪಡಿಸಿದೆ. ಅದರ ಸಹಾಯದಿಂದ, ಬಳಕೆದಾರರು ಕಳುಹಿಸಿದ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ. ಇದೀಗ ಈ ವೈಶಿಷ್ಟ್ಯವನ್ನು ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ತರಲಾಗಿದೆ. ಮುಂಬರುವ ಅಪ್​ಡೇಟ್​ಗಳೊಂದಿಗೆ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಕಂಪನಿಯು ಮೇ ತಿಂಗಳಿನಲ್ಲಿಯೇ ಈ ಅಪ್ಲಿಕೇಶನ್ ಅನ್ನು ಘೋಷಿಸಿದೆ. ಅದರ ಬಗ್ಗೆ ವಿವರವಾಗಿ ತಿಳಿಯಲು ಕೆಳಗೆ ಓದಿ. ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ವಿಂಡೋಸ್ ಬೀಟಾದಲ್ಲಿ ಸಂದೇಶ ಎಡಿಟಿಂಗ್ ವೈಶಿಷ್ಟ್ಯವನ್ನು ಹೊರತರುತ್ತಿದೆ. ಬೀಟಾ ಬಳಕೆದಾರರಿಗೆ ಈಗ ಮೆಸೇಜ್​ ಮೆನುವಿನಲ್ಲಿ ಎಡಿಟ್ ಆಪ್ಶನ್​ ನೀಡಲಾಗಿದ್ದು, ಇದರ ಉಪಯೋಗದ ಬಗ್ಗೆ ತಿಳಿಯೋಣಾ ಬನ್ನಿ..

WABetainfo, ಮೆಟಾ-ಮಾಲೀಕತ್ವದ ಅಪ್ಲಿಕೇಶನ್‌ನ ಮುಂಬರುವ ವೈಶಿಷ್ಟ್ಯದ ಮೇಲೆ ಕಣ್ಣಿಟ್ಟಿರುವ ವೆಬ್‌ಸೈಟ್, ರೋಲಿಂಗ್​ ಔಟ್​ ಮೆಸೇಜ್​ ಎಡಿಟಿಂಗ್ ಕುರಿತು ಮಾಹಿತಿ ನೀಡಿದೆ. ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಲಭ್ಯವಿರುವ ಇತ್ತೀಚಿನ ಅಪ್​ಡೇಟ್​ ನಂತರ ಕಂಪನಿಯು ಮೆಸೇಜ್ ಎಡಿಟಿಂಗ್​ ವೈಶಿಷ್ಟ್ಯವನ್ನು ಹೊರತಂದಿದೆ ಎಂದು ಬಹಿರಂಗಪಡಿಸಿದೆ.

ಸ್ಕ್ರೀನ್‌ಶಾಟ್ ತೆಗೆದುಕೊಂಡಿದ್ದೀರಾ ಎಂದು ತಿಳಿದುಕೊಳ್ಳಿ. ಇದರಲ್ಲಿ ಎಡಿಟ್​ ಆಯ್ಕೆಯು ಸಂದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸಂದೇಶ ಮೆನುವಿನಲ್ಲಿ, ಜನರು ಈಗ ಪ್ರತ್ಯುತ್ತರ, ನಕಲು, ಫಾರ್ವರ್ಡ್, ಸ್ಟಾರ್, ಎಡಿಟ್, ಡಿಲಿಟ್​, ಆಯ್ಕೆ ಮತ್ತು ಮಾಹಿತಿಯ ಆಯ್ಕೆಗಳನ್ನು ಪಡೆಯುತ್ತಾರೆ. ಎಡಿಟಿಂಗ್​ ಬಟನ್ ಕ್ಲಿಕ್ ಮಾಡುವ ಮೂಲಕ ಸಂದೇಶವನ್ನು ಎಡಿಟ್​ ಮಾಡಬಹುದು. ಎಮೋಜಿಗಳ ಲಿಸ್ಟ್​ ಸಹ ಈ ಆಯ್ಕೆಗಳ ಕೆಳಗೆ ಘೋಚರಿಸುತ್ತದೆ.

ಆತುರದಲ್ಲಿ ತಪ್ಪು ಸಂದೇಶಗಳನ್ನು ಬರೆಯುವವರಿಗೆ WhatsApp ಸಂದೇಶ ಎಡಿಟ್ ವೈಶಿಷ್ಟ್ಯವು ತುಂಬಾ ಉಪಯುಕ್ತ ವೈಶಿಷ್ಟ್ಯವಾಗಿದೆ. ಈ ಎಡಿಟಿಂಗ್​ ಸಹಾಯದಿಂದ ನೀವು ಸಂದೇಶವನ್ನು ಅಳಿಸದೆಯೇ ಅವುಗಳನ್ನು ಸರಿಪಡಿಸಬಹುದಾಗಿದೆ. ಆದ್ರೆ ಈ ಎಡಿಟ್​ ಮಾಡುವುದಕ್ಕೆ ಕೇವಲ 15 ನಿಮಿಷಗಳು ಮಾತ್ರ ಸಮಯ ಇರುತ್ತದೆ. ಅಂದರೆ ಜನರು ಸಂದೇಶವನ್ನು ಕಳುಹಿಸಿದ 15 ನಿಮಿಷಗಳಲ್ಲಿ ಆ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ. ನಿಮ್ಮ ವಾಟ್ಸಾಪ್​ ಅಕೌಂಟ್​ಗೆ ಮೆಸೇಜ್​ ಎಡಿಟಿಂಗ್​ ವೈಶಿಷ್ಟ್ಯವನ್ನು ಹೊರತರಲಾಗಿದೆಯೇ ಎಂದು ನೀವು ನೋಡಲು ಬಯಸಿದರೆ, ಸಂದೇಶವೊಂದನ್ನು ಕಳುಹಿಸಿ ಮತ್ತು ನಂತರ ಸಂದೇಶ ಮೆನುವನ್ನು ಪರಿಶೀಲಿಸಿ.

ಇದಲ್ಲದೇ ವಾಟ್ಸಾಪ್​ ಹಲವು ಹೊಸ ಫೀಚರ್​ಗಳನ್ನು ಹೊರ ತರಲು ಯೋಚಿಸುತ್ತಿದ್ದು, ಅದರ ಬಗ್ಗೆ ಟೆಸ್ಟ್​ಗಳ ಪ್ರಕ್ರಿಯೆಗಳು ನಡೆಯುತ್ತಿವೆ. WebBetaInfo ತನ್ನ ವರದಿಯಲ್ಲಿ ಹೊಸ ಆಂಡ್ರಾಯ್ಡ್ ಅಪ್‌ಡೇಟ್ ಕಾಣಿಸಿಕೊಂಡಿದೆ. ಇದು ವಾಟ್ಸಾಪ್ ಚಾನಲ್ ನೋಟಿಫೈಯರ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸುತ್ತದೆ. ಒಮ್ಮೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರು ತಮ್ಮ ಖಾತೆಯಲ್ಲಿ ಚಾನಲ್ ವೈಶಿಷ್ಟ್ಯವು ಲಭ್ಯವಿದ್ದಾಗ ನೋಟಿಫಿಕೇಶನ್​ ಸ್ವೀಕರಿಸುತ್ತಾರೆ.

ಇತ್ತೀಚಿನ WhatsApp ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿರುವ ಬೀಟಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಹೊರತರಲಾಗಿದೆ. ಮುಂಬರುವ ಅಪ್​ಡೇಟ್​ಗಳೊಂದಿಗೆ, ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ. ಆದ್ರೆ ಕಂಪನಿಯು ಈ ಮೆಸೇಜ್​ ಎಡಿಟಿಂಗ್​ ವೈಶಿಷ್ಟ್ಯ ಬಗ್ಗೆ ಹೊರ ತರುವ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲ. ಸದ್ಯ ಕಂಪನಿ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.