ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆ: ಫೆ.23ರಂದು 21ನೇ ವರ್ಷದ ಸಂಭ್ರಮ ‘ಕಲಾ ಸಂಗಮ’

ಉಡುಪಿ: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಸಂಭ್ರಮ ‘ಕಲಾ ಸಂಗಮ’ ಕಾರ್ಯಕ್ರಮವು ಫೆ. 23ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ಎಂ. ಮಂಜುನಾಥ ಉಪಾಧ್ಯ ಪರ್ಕಳ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ್ ಹೋಟೆಲ್ ಮಾಲಕರಾದ ಮೋಹನದಾಸ ನಾಯಕ್ ಉದ್ಘಾಟಿಸಲಿದ್ದಾರೆ ಎಂದರು. 2.15ಕ್ಕೆ […]
ಉಡುಪಿ:ಧ್ವಜಾರೋಹಣ ಅನಾವರಣದಲ್ಲಿದೆ ವ್ಯತ್ಯಾಸ: -ವಕೀಲ ಶ್ರೀನಿಧಿ ಹೆಗ್ಡೆ

ಉಡುಪಿ: ಸ್ವಾತಂತ್ರ್ಯ ಪಡೆದು ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಏರಿಸಲಾಗುವ ಆಗಸ್ಟ್ 15ರಂದು ಧ್ವಜಾರೋಹಣ ನಡೆಯಲಿದೆ. ಸುಮಾರು 2 ವರ್ಷ 11 ತಿಂಗಳು 18 ದಿನದಲ್ಲಿ ರಚನೆಯಾದ ಸಂವಿಧಾನವನ್ನು ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಗೆ ಬದಲಾಗಿದೆ ಪ್ರತೀಕವಾಗಿ ಜನವರಿ 26 ರಂದು ಧ್ವಜ ಅನಾವರಣಗೊಳಿಸಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಹೀಗಾಗಿ ಮಕ್ಕಳು ಧ್ವಜ ಆರೋಹಣ ಹಾಗೂ ಅನಾವರಣದ ಮಾಹಿತಿಯನ್ನೂ ಅರಿತುಕೊಳ್ಳಬೇಕು ಎಂದು ವಕೀಲ ಶ್ರೀನಿಧಿ ಹೆಗ್ಡೆ ತಿಳಿಸಿದರು. ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಇತ್ತೀಚೆಗೆ […]
“ಬೀಜಗಳ ರಾಜ” ಬಾದಾಮಿಯನ್ನು ನೆನೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ 10 ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ..

“ಬೀಜಗಳ ರಾಜ” ಎಂದು ಕರೆಯಲ್ಪಡುವ ಬಾದಾಮಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದೊಂದು ಪವರ್-ಪ್ಯಾಕ್ಡ್ ಸೂಪರ್‌ಫುಡ್ ಆಗಿದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ನಮ್ಮ ದೈನಂದಿನ ಆಹಾರಕ್ರಮದಲ್ಲಿ ಬಾದಾಮಿಯನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಖಾಲಿ ಹೊಟ್ಟೆಗೆ ನೆನೆಸಿದ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಾದಾಮಿಯನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಅದನ್ನು ಸೇವಿಸಬೇಕು. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ನೆನೆಸಿದ ಬಾದಾಮಿ ಸೇವಿಸುವುದನ್ನು ನಮ್ಮ ದೈನಂದಿನ […]
ಉತ್ತರ ಪ್ರದೇಶ: ತಂದೆಯನ್ನೇ ಜೀವಂತ ಸುಟ್ಟ ಬಾಲಕ !ಅಸಲಿ ಕಾರಣವೇನು?

ಲಕ್ನೋ: ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕ, ತನ್ನ ತಂದೆಯನ್ನೇ ಜೀವಂತ ಸುಟ್ಟ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಫರೀದಾಬಾದ್‌ನ ಅಜಯ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮುಹಮ್ಮದ್ ಅಲೀಮ್ ಅವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಳ್ಳತನದ ಶಂಕೆಯಿಂದ ತನ್ನ 14 ವರ್ಷದ ಮಗನನ್ನು ಗದರಿಸಿದ್ದಕ್ಕಾಗಿ, ಬಾಲಕ ತನ್ನ ತಂದೆಯನ್ನು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಮಾಲೀಕ ರಿಯಾಝುದ್ದೀನ್ ಸಲ್ಲಿಸಿದ ದೂರಿನ ಪ್ರಕಾರ, ಬೆಳಗಿನ ಜಾವ 2 ಗಂಟೆ […]
ಕೋಟ: ಗೂಡ್ಸ್ ರಿಕ್ಷಾಕ್ಕೆ ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು.

ಕೋಟ: ಸ್ಕೂಟರೊಂದು ಗೂಡ್ಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಫೆ.18ರಂದು ಮಧ್ಯಾಹ್ನ ವೇಳೆ ಗುಂಡ್ಮಿ ಗ್ರಾಮದ ಚೇಂಪಿ ಎಂಬಲ್ಲಿ ವಿಶ್ವಕರ್ಮ ಸಾಂಸ್ಕೃತಿಕ ಸಭಾ ಭವನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಸ್ಕೂಟರ್ ಸವಾರ ಅನಂತ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ವಿಶ್ವನಾಥ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆಯಿಂದ ಗುಲ್ವಾಡಿಗೆ ಹೋಗುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಅಪಘಾತ ತಪ್ಪಿಸುವ ಭರದಲ್ಲಿ ಡಿವೈಡರ್ ಮೇಲೆ […]