ಡಿ.15 ರಂದು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಕೊಡಿಹಬ್ಬ.

ಕುಂದಾಪುರ: ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಡಿ.15 ರಂದು ಕೊಡಿಹಬ್ಬ ಆಚರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.14 ಶನಿವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಶಿವ ಗಾನಾಮೃತ”. ಡಿ.15 ಭಾನುವಾರ ಮಿತ್ರದಳದ ಮಿತ್ರೆಯರಿಂದ “ತನನಂ ತನನಂ” (ನೃತ್ಯ ವೈವಿಧ್ಯ). ಡಿ.16 ಸೋಮವಾರ ದಕ್ಷಯಜ್ಞ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ತಾಳ ಮದ್ದಳೆ’. ಶ್ರೀ ಕೋಟಿಲಿಂಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಡಿ.16ರ ವರೆಗೆ ನೆರವೇರುವ ಉತ್ಸವಾದಿಗಳಿಗೆ ತಾವು, ಬಂಧುಮಿತ್ರರೊಡಗೂಡಿ ಆಗಮಿಸಿ, […]

ಕಾರ್ಕಳ: ಯುವ ಕಬ್ಬಡ್ಡಿ ಆಟಗಾರ ಮುಟ್ಲುಪಾಡಿ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ನಿಧನ

ಉಡುಪಿ: ಯುವ ಕಬ್ಬಡ್ಡಿ ಆಟಗಾರ ಮುಟ್ಲುಪಾಡಿ ನಡುಮನೆ ಪ್ರೀತಂ ಶೆಟ್ಟಿ(26) ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟಕ್ಕೆ ತೆರಳಿದ್ದರು. ಶುಕ್ರವಾರ ಕಬ್ಬಡಿ ಆಡಿದ ಕೆಲವೇ ಕ್ಷಣಗಳ ಬಳಿಕ ಪ್ರೀತಂ ಅವರು ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ತಂಡದ ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟೊತ್ತಿಗೆ ಆಗಲೇ ಪ್ರೀತಮ್ ಅವರು ಕೊನೆಯುಸಿರೆಳೆದಿದ್ದಾರೆ. ಪ್ರೀತಮ್ ಅವರು ಇನ್ನು ಕೆಲವೇ ದಿನಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ ವಿಧಿಯ […]

ಡಿ.14ರಂದು ಉಡುಪಿಯಲ್ಲಿ ಪ್ರಥಮ ಬಾರಿಗೆ ಕೊರಿಯನ್ ತಂಡದಿಂದ ಕ್ರಿಸ್ಮಸ್ ಕ್ರಿಸ್ತೋತ್ಸವ

ಉಡುಪಿ: ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ “ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಡಿಸೆಂಬರ್ 14ರ ಶನಿವಾರ ಸಂಜೆ 6ಗಂಟೆಗೆ ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿಯ ಸಂಚಾಲಕ ಡಾ. ಸುಶೀಲ್ ಜತ್ತನ್ನ ಹೇಳಿದರು. ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯಲ್ಲಿ […]

Zumba Dance Workout: ಜುಂಬಾ ಡಾನ್ಸ್ ಮಾಡುವುದರ 4 ಪ್ರಮುಖ ಪ್ರಯೋಜನಗಳಿವು

Zumba Dance Workout: ಅನೇಕ ಜನರಿಗೆ ಜುಂಬಾ ಡ್ಯಾನ್ಸ್ ವರ್ಕೌಟ್  (Zumba Dance Workout) ಒಂದು ಹವ್ಯಾಸವಾಗಿದೆ. ಆದರೆ ಈ ರೀತಿಯ ವ್ಯಾಯಾಮವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? Zumba Dance Workout: ದೇಹವನ್ನು ಸದೃಢವಾಗಿಡಲು ಜನರು ಹಲವಾರು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ, ಆದರೆ ಒಂದು ವ್ಯಾಯಾಮವು ತುಂಬಾ ಆಸಕ್ತಿದಾಯಕವಾಗಿದೆ. ಈ ವರ್ಕೌಟ್‌ನ ಹೆಸರು ಜುಂಬಾ ಡ್ಯಾನ್ಸ್ ವರ್ಕೌಟ್ (Zumba Dance Workout). ಇದು ಇತರ ವ್ಯಾಯಾಮಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ಸ್ನಾಯುಗಳು ಟೋನ್ ಆಗುತ್ತವೆ, […]