ಬಾಸ್ಕೆಟ್ ಬಾಲ್: ಕ್ರಿಯೇಟಿವ್ ವಿದ್ಯಾರ್ಥಿ ಹ್ಯಾನ್ಸೆಲ್ ಇಮ್ಯಾನುಯೆಲ್ ರಾಜ್ಯ ಮಟ್ಟಕ್ಕೆ ಆಯ್ಕೆ.

ಕಾರ್ಕಳ: ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯು 15 ಸೆಪ್ಟೆಂಬರ್ 2025ರಂದು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ಜರುಗಿತು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮುಂಬರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ: ಆತ್ರಾಡಿಯಲ್ಲಿ ಆಟೋ ಚಾಲಕ ಗೋಪಾಲ ಕೃಷ್ಣ ಆಚಾರ್ಯ ಅವರಿಗೆ ಸನ್ಮಾನ

ಉಡುಪಿ: ಪ್ರಧಾನಿ ನರೇಂದ್ರ ಮೋದೀಜಿಯವರ ಜನ್ಮ ದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ದಿನಾಂಕದ ವರೆಗೆ ಕಳೆದ 5 ವರ್ಷಗಳಿಂದ ತನ್ನ ಆಟೋ ರಿಕ್ಷಾಕ್ಕೆ ಮೋದಿಜಿಯವರ ಬ್ಯಾನರ್ ನ್ನು ಕಟ್ಟಿಕೊಂಡು ಬಾಡಿಗೆ ಮಾಡುತ್ತಿರುವ ಆತ್ರಾಡಿಯ ಆಟೋ ಚಾಲಕ ಜನ ಸಂಘ ಮೂಲದಿಂದ ಪಕ್ಷದ ಕಾರ್ಯಕರ್ತರಾಗಿರುವ ಗೋಪಾಲ ಕೃಷ್ಣ ಆಚಾರ್ಯ ಅವರನ್ನು ಆತ್ರಾಡಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿಯವರ ನೇತೃತ್ವದಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ […]
ಉಡುಪಿಯ Brown Wood ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ Brown Wood ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.1 ವರ್ಷದ ಅನುಭವವಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.ಕೆಲಸದ ಅವಧಿ ಬೆಳಿಗ್ಗೆ 9:30 ರಿಂದ ರಾತ್ರಿ 8:30ರವರೆಗೆ.ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ[email protected]ಸಂಪರ್ಕಿಸಿ:+91 9036772710
ಯಕ್ಷಗಾನದಲ್ಲೂ ವೈರಲ್ಲಾಯ್ತು“ಹೂವಿನ ಬಾಣದಂತೆ” ಹಾಡು: ನಕ್ಕು ಸುಸ್ತಾದ ಪ್ರೇಕ್ಷಕರು! ಕೆಲವರು ಗರಂ

ಕಳೆದ ಒಂದು ವಾರದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗುತ್ತಿರುವ “ಹೂವಿನ ಬಾಣದಂತೆ ಯಾರಿಗೂ ಕಾಣದಂತೆ” ಹಾಡು ಈಗ ಯಕ್ಷಗಾನದ ರಂಗಸ್ಥಳದಲ್ಲೂ ಸದ್ದು ಮಾಡಿದೆ. ಆ ಮೂಲಕ ಸೋಶಿಯಲ್ ಮೀಡಿಯಾದ ಈ ಟ್ರೆಂಡಿಂಗ್ ಹಾಡಿಗೆ ಯಕ್ಷಪ್ರಿಯರು ನಕ್ಕು ನಕ್ಕು ಸುಸ್ತು ಹೊಡೆದಿದ್ದಾರೆ. ಹೌದು. ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನದ ತುಣುಕೊಂದು ವೈರಲ್ ಆಗಿದೆ. ಯಕ್ಷಗಾನ ಕಲಾವಿದರಾದ ಉದಯ ಹೆಗಡೆ ಕಡಬಾಳ, ಪಾತ್ರವೊಂದನ್ನು ನಿರ್ವಹಿಸುತ್ತ ನನಗೆ ರೂಪದಿಂದಲೇ ತೊಂದರೆ ಕೊಡುತ್ತಿದ್ದಾಳೆ ಅವಳು “ಯಾವ ರೀತಿ ಅಂದ್ರೆ “ಹೂವಿನ ಬಾಣದಂತೆ..ಯಾರಿಗೂ ಕಾಣದಂತೆ” ಎಂದು ಹಾಡನ್ನು […]
ಉಡುಪಿ:ಒಮಾನ್, ಮಸ್ಕತ್ ನಲ್ಲಿ ಪ್ರಪ್ರಥಮ ಬಾರಿಗೆ ಪ್ರಥಮ್ ಕಾಮತ್ ಜಾದೂ ಪ್ರದರ್ಶನ

ಉಡುಪಿ:ಕಟಪಾಡಿ ಯ ಯುವ ಕಲಾವಿದ, ಜಾದೂಗಾರ ಪ್ರಥಮ್ ಕಾಮತ್ ಇವರ ಜಾದೂ ಪ್ರದರ್ಶನ ಮಸ್ಕತ್ ನಲ್ಲಿ ಸೆಪ್ಟೆಂಬರ್ 19 ರಂದು ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಒಮಾನ್ ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿದೆ.ಒಮಾನ್ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಥಮ್ ಕಾಮತ್ ಪ್ರಸ್ತುತ MAHE ಯಲ್ಲಿ optometry ಕಲಿಯುತ್ತಿದ್ದು,ಇವರು ಜಾದೂ ಕಲೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ.ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭ ಬಳಿಕ ಮಧ್ಯಾಹ್ನ 3ಗಂಟೆಗೆ ಸ್ಕೂಲ್ ಲೀಡರ್ […]