ಬದಲಾಗುತ್ತಿರುವ ಭಾರತಕ್ಕಾಗಿ 5ಜಿ ವೇಗದ ನೆಟ್ ವರ್ಕ್: 5ಜಿ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಭಾರತ ಸೇರ್ಪಡೆ

ನವದೆಹಲಿ: ಭಾರತವು 5ಜಿ ದೂರಸಂಪರ್ಕ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಸೇರಿದೆ. ಶನಿವಾರ ನವದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಏರ್‌ಟೆಲ್ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ವಾರಣಾಸಿ ಸೇರಿದಂತೆ 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದರೆ, ರಿಲಯನ್ಸ್ ಜಿಯೋ ದೀಪಾವಳಿಯ ವೇಳೆಗೆ ಪ್ರಾರಂಭಿಸಲಿದೆ. ವೊಡಾಫೋನ್ ಐಡಿಯಾ ಕೂಡ ಶೀಘ್ರದಲ್ಲೇ 5ಜಿ ಸೇವೆಯನ್ನು ಪ್ರಾರಂಭಿಸಲಿದೆ. ಇನ್ನು ಮುಂದೆ 4ಜಿ […]
ಮೃತದೇಹದ ಮರಣೋತ್ತರ ಪರೀಕ್ಷೆಯ ನೂತನ ವಿಧಾನ ‘ವರ್ಟೊಪ್ಸಿ’: ಆಗ್ನೇಯ ಏಷ್ಯಾದಲ್ಲಿ ವರ್ಟೊಪ್ಸಿ ತಂತ್ರಜ್ಞಾನ ಬಳಸುವ ಏಕೈಕ ಆಸ್ಪತ್ರೆ ದೆಹಲಿ ಏಮ್ಸ್

ಶವಪರೀಕ್ಷೆ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ಎನ್ನುವುದು ಅತ್ಯಂತ ವಿಶೇಷವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಇದು ವ್ಯಕ್ತಿಯ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸುವ ಮತ್ತು ಯಾವುದೇ ರೋಗ ಅಥವಾ ಗಾಯವನ್ನು ಮೌಲ್ಯಮಾಪನ ಮಾಡುವ ಶವದ ಸಂಪೂರ್ಣ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಶವ ಪರೀಕ್ಷೆಯಲ್ಲಿ ಶವದ ದೇಹವನ್ನು ಕತ್ತರಿಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಮೃತರ ಸಂಬಂಧಿಕರಿಗೆ ಈ ವಿಧಾನವು ಇರಿಸು ಮುರುಸನ್ನು ಉಂಟುಮಾಡುತ್ತದೆ. ಸಂಪ್ರದಾಯಗಳಲ್ಲಿ ಮರಣಾನಂತರ ಶವವನ್ನು ಕತ್ತರಿಸುವುದು ನಿಷಿದ್ದವಿದ್ದಲ್ಲಿ ಅಂತಹ ಕುಟುಂಬಿಕರು ವೇದನೆ ಅನುಭವಿಸಬೇಕಾಗುತ್ತದೆ. ಸಾಂಪ್ರದಾಯಿಕ […]
ದೀಪಾವಳಿ ವೇಳೆಗೆ ನಾಲ್ಕು ಮೆಟ್ರೋ ನಗರಗಳಲ್ಲಿ 5ಜಿ ಸೇವೆ: ಅಮೇರಿಕಾದ ತಂತ್ರಜ್ಞಾನ ದೈತ್ಯರೊಂದಿಗೆ ರಿಲಯನ್ಸ್ ಜಿಯೋ ಪಾಲುದಾರಿಕೆ

ರಿಲಯನ್ಸ್ ಜಿಯೋ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿ ದೀಪಾವಳಿಯ ವೇಳೆಗೆ 5ಜಿ ಸೇವೆಗಳನ್ನು ಹೊರತರಲು ಮೆಟಾ, ಗೂಗಲ್, ಮೈಕ್ರೋಸಾಫ್ಟ್ ಮತ್ತು ಇಂಟೆಲ್‌ನಂತಹ ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ದೈತ್ಯರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ತಲ್ಲೀನತೆಯ ತಂತ್ರಜ್ಞಾನಕ್ಕಾಗಿ ಕಂಪನಿಯು, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ( ಫೇಸ್‌ಬುಕ್) ಜೊತೆ ಪಾಲುದಾರಿಕೆ ಹೊಂದಿದ್ದರೆ, ಕೈಗೆಟುಕುವ ದರದ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಗೂಗಲ್ ನೊಂದಿಗೆ ಸಹಯೋಗ ಹೊಂದಿದೆ. ತನ್ನ ಲಕ್ಷಾಂತರ ಬಳಕೆದಾರರಿಗೆ ಕ್ಲೌಡ್-ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳು ಮತ್ತು ಪರಿಹಾರಗಳ ರೋಮಾಂಚಕ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು […]
ಗಾಜಾ ಉಗ್ರಗಾಮಿಗಳು ರಾಕೆಟ್ ಗಳ ಸುರಿಮಳೆಗೈದರೂ ಇಸ್ರೇಲಿಗರ ಕೂದಲೂ ಕೊಂಕಲು ಬಿಡದ ಐರನ್ ಡೋಮ್!! ಇಸ್ರೇಲಿನ ಅಬೇಧ್ಯ ಕೋಟೆಯ ರಕ್ಷಕ ಈ ಡೋಮ್

ಟೆಲ್ ಅವೀವ್: ಪ್ರಪಂಚದಲ್ಲಿ ಪ್ರತಿನಿತ್ಯವೂ ಯುದ್ದ ಸನ್ನದ್ಧ ಸ್ಥಿತಿಯಲ್ಲಿರುವ ದೇಶ ಇಸ್ರೇಲ್. ಇಲ್ಲಿಯ ಪ್ರತಿ ನಾಗರಿಕನೂ ಒಬ್ಬ ಸೈನಿಕ. ಅತ್ಯಂತ ಮುಂದುವರಿದ ದೇಶವಾಗಿರುವ ಅಂಗೈ ಅಷ್ಟಗಲದ ಇಸ್ರೇಲ್ ಬಳಿ ಅತ್ಯಾಧುನಿಕ ಅಸ್ತ್ರ ಶಸ್ತ್ರಗಳಿವೆ. ಅವೆಲ್ಲವುಗಳಲ್ಲಿ ಅತಿ ವಿನೂತನ ಮತ್ತು ಅತ್ಯಂತ ಮಹತ್ವಪೂರ್ಣವಾಗಿರುವುದು ಐರನ್ ಡೋಮ್. ಇಸ್ರೇಲಿನ ಶತ್ರು ದೇಶವಾದ ಪ್ಯಾಲೆಸ್ಟೀನ್ ನಲ್ಲಿ ನೆಲೆಸಿರುವ ಉಗ್ರಗಾಮಿಗಳು ನಿತ್ಯವೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ತನ್ನ ದೇಶದ ನಾಗರಿಕರನ್ನು ರಕ್ಷಿಸಲು ಇಸ್ರೇಲಿನ ರಕ್ಷಣಾ ಸಚಿವಾಲಯವು ಐರನ್ […]
ತನ್ನ ಗ್ರಾಹಕರಿಗಾಗಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭಿಸಿದ ಎಸ್.ಬಿ.ಐ

ನವದೆಹಲಿ: ಭಾರತದ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಈಗ, ಎಸ್‌ಬಿಐ ಗ್ರಾಹಕರು ವಾಟ್ಸಾಪ್ ಬಳಸಿಕೊಂಡು ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರು ಇನ್ನು ಮುಂದೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗಿಲ್ಲ ಅಥವಾ ಎಟಿಎಂಗೆ ಹೋಗಬೇಕಾಗಿಲ್ಲ. ಎಸ್.ಬಿ.ಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪಡೆಯಬಹುದು ಮತ್ತು ವಾಟ್ಸಾಪ್ ನಲ್ಲಿ ಮಿನಿ ಸ್ಟೇಟ್ಮೆಂಟ್ ಅನ್ನು ವೀಕ್ಷಿಸಬಹುದು. ಗ್ರಾಹಕರು 919022690226 ಸಂಖ್ಯೆಗೆ ‘ಹಾಯ್’ ಎಂದು ಸಂದೇಶ ಕಳುಹಿಸಿ […]