ಸೆಮಿಕಂಡಕ್ಟರ್ ಚಿಪ್ ಪೂರೈಕೆಯಲ್ಲಿ ಸುಧಾರಣೆ: 3.10 ಲಕ್ಷ ಹೊಸ ಕಾರು, ಎಸ್‌ಯುವಿ ಮಾರಾಟ

ನವೆಂಬರ್ 2022 ರಲ್ಲಿ, ಭಾರತೀಯ ಪ್ರಯಾಣಿಕ ವಾಹನ ವಿಭಾಗವು 16 ಸಮೂಹ-ಮಾರುಕಟ್ಟೆ ಕಾರು ತಯಾರಕರಲ್ಲಿ 10 ತಯಾರಕರ ಸಗಟು ಸಂಖ್ಯೆಗಳೊಂದಿಗೆ 310,580 ಯುನಿಟ್‌ಗಳನ್ನು ಸೇರಿಸಿ ವರ್ಷಾನುವರ್ತಿ 32 ಪ್ರತಿಶತದಷ್ಟು ಮಾರಾಟವನ್ನು ದಾಖಲಿಸಿದೆ. ಸೆಮಿಕಂಡಕ್ಟರ್ ಗಳ ಉತ್ತಮ ಪೂರೈಕೆಯ ಪರಿಣಾಮವಾಗಿ ಹೆಚ್ಚಿನ ಕಾರು ತಯಾರಕರಿಗೆ ಸುಧಾರಿತ ಉತ್ಪಾದನೆ ಮಾಡಲು ಸಹಾಯ ಮಾಡುವುದರ ಜೊತೆಗೆ ಹೆಚ್ಚಿನ ಬೆಳವಣಿಗೆಯ ದರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಇದಕ್ಕಿಂತ ಹೆಚ್ಚಾಗಿ, ಕೇವಲ ಮೂರು ಪ್ರಮುಖ ಕಾರು ತಯಾರಕರಾದ – ಮಾರುತಿ ಸುಜುಕಿ, ಮಹೀಂದ್ರಾ & […]

ಮುದ್ದಾಗಿ ನಗುತಿಹನಮ್ಮ ನಮ್ಮ ಸೂರ್ಯ! ನಗುತ್ತಿರುವ ಸೂರ್ಯನ ಚಿತ್ರವನ್ನು ಹಂಚಿಕೊಂಡ ನಾಸಾ

ನ್ಯೂಯಾರ್ಕ್: ಈ ವಾರ ಸೂರ್ಯನ ಹೊಸ ಉಪಗ್ರಹ ಚಿತ್ರವನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಮ್ಮ ಸೂರ್ಯನು ನಗುತ್ತಿರುವಂತೆ ಭಾಸವಾಗುತ್ತಿದೆ! ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯಿಂದ ಫೋಟೋವನ್ನು ಸೆರೆಹಿಡಿಯಲಾಗಿದೆ. ಅಬ್ಸರ್ವೇಟರಿಯು ಸೂರ್ಯನ ವಿಕಿರಣದ ಉತ್ಪಾದನೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತದೆ. “ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಕಾಣುವ ಈ ಕಪ್ಪು ಪ್ರದೇಶಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವು ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ” ಎಂದು […]

ಮೇಡ್-ಇನ್-ಇಂಡಿಯಾ ‘ದ್ರೋಣಿ’ ಕ್ಯಾಮೆರಾ ಡ್ರೋನ್ ಬಿಡುಗಡೆಗೊಳಿಸಿದ ಎಂಎಸ್ ಧೋನಿ

ಚೆನ್ನೈ: ‘ಹೆಲಿಕಾಪ್ಟರ್ ಶಾಟ್’ ಅನ್ನು ಜನಪ್ರಿಯಗೊಳಿಸಿದ ಭಾರತೀಯ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರು ‘ದ್ರೋಣಿ’ ಹೆಸರಿನ ಗ್ರಾಹಕ ಕ್ಯಾಮೆರಾ ಡ್ರೋನ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಂಎಸ್ ಧೋನಿ ರಾಯಭಾರಿಯಾಗಿರುವ ಗರುಡಾ ಏರೋಸ್ಪೇಸ್ ಈ ಸುಧಾರಿತ ವೈಶಿಷ್ಟ್ಯಗಳಿರುವ ಮೇಡ್-ಇನ್-ಇಂಡಿಯಾ ಕ್ಯಾಮೆರಾ ಡ್ರೋನ್ ಅನ್ನು ತಯಾರಿಸಿದೆ. ಡ್ರೋನ್ ತಂತ್ರಜ್ಞಾನದಲ್ಲಿ ಆದ್ಯಪ್ರವರ್ತಕನಾಗಿರುವ ಗರುಡ ಏರೋಸ್ಪೇಸ್, ಇದುವರೆಗೆ ಕೃಷಿ ಕೀಟನಾಶಕ ಸಿಂಪಡಣೆ, ಸೌರಫಲಕ ಸ್ವಚ್ಛತೆ, ಕೈಗಾರಿಕಾ ಪೈಪ್‌ಲೈನ್ ತಪಾಸಣೆ, ಮ್ಯಾಪಿಂಗ್, ಸರ್ವೇಯಿಂಗ್, ಸಾರ್ವಜನಿಕ ಪ್ರಕಟಣೆಗಳು ಮತ್ತು ವಿತರಣಾ ಸೇವೆಗಳಿಗಾಗಿ ಭಾರತದಲ್ಲಿ […]

ನಿಮ್ಮ ಸ್ಮಾರ್ಟ್ ಫೋನ್ 5ಜಿ ಸೇವೆಗೆ ತಯಾರಾಗಿದೆಯೆ?

ದೇಶಾದ್ಯಂತ 5ಜಿ ಸೇವೆಗಳು ಲಭಿಸುವ ದಿನಗಳು ಇನ್ನು ಹೆಚ್ಚು ದೂರವಿಲ್ಲ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ದೇಶದ ಕೆಲವು ಭಾಗಗಳಲ್ಲಿ ತಮ್ಮ 5ಜಿ ಸೇವೆಗಳನ್ನು ಈಗಾಗಲೇ ಪ್ರಾರಂಭಿಸಿವೆ. ಏರ್‌ಟೆಲ್ 5ಜಿ ಈಗಾಗಲೇ ಕಳೆದ ವಾರದಿಂದ 8 ನಗರಗಳಲ್ಲಿ ಲಭ್ಯವಿದೆ ಮತ್ತು ಇಂದಿನಿಂದ ಜಿಯೋ 5ಜಿ ಸೇವೆಯು 4 ನಗರಗಳಲ್ಲಿ ಲಭ್ಯವಿರಲಿದೆ. ಎಲ್ಲಾ ಸ್ಮಾರ್ಟ್‌ಫೋನ್‌ಗಳು ಏರ್‌ಟೆಲ್ ಅಥವಾ ಜಿಯೋ 5 ಜಿ ಅನ್ನು ಬೆಂಬಲಿಸುವುದಿಲ್ಲ. 5ಜಿ ನೆಟ್‌ವರ್ಕ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾತ್ರ ಜಿಯೋ ಮತ್ತು ಏರ್‌ಟೆಲ್ ನಿಂದ […]

ಯಾವುದೇ ಆ್ಯಪ್ ಬಳಸಿ ಆದರೆ ವಾಟ್ಸಾಪ್ ನಿಂದ ದೂರವಿರಿ ಎಂದರೇಕೆ ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೊವ್?

ತ್ವರಿತ ಸಂದೇಶ ಸೇವೆ ಟೆಲಿಗ್ರಾಮ್‌ನ ಸಂಸ್ಥಾಪಕ ಪಾವೆಲ್ ಡುರೊವ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಮಾತನಾಡಿ,13 ವರ್ಷಗಳಿಂದ ಕಣ್ಗಾವಲು ಸಾಧನವಾಗಿರುವ ವಾಟ್ಸಾಪ್ ನಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಪ್ರತಿ ವರ್ಷ ವಾಟ್ಸಾಪ್‌ನಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಅದು ತನ್ನ ಬಳಕೆದಾರರ ಡೇಟಾವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಇಲ್ಲಿ ಟೆಲಿಗ್ರಾಮ್‌ ಉಪಯೋಗಿಸಲು ಜನರನ್ನು ಒತ್ತಾಯಿಸುತ್ತಿಲ್ಲ. 700ಮಿ+ ಸಕ್ರಿಯ ಬಳಕೆದಾರರು ಮತ್ತು 2ಮಿ+ ದೈನಂದಿನ ಸೈನ್‌ಅಪ್‌ಗಳೊಂದಿಗೆ, ಟೆಲಿಗ್ರಾಮ್‌ಗೆ ಹೆಚ್ಚುವರಿ ಪ್ರಚಾರದ ಅಗತ್ಯವಿಲ್ಲ. ನೀವು ಇಷ್ಟಪಡುವ ಯಾವುದೇ ಸಂದೇಶ […]